ಗಣೇಶ ಬಂದ... ಎಷ್ಟೊಂದು ಕಡುಬು ತಂದ...

Kadubu
ಮತ್ತೆ ಗಣೇಶನ ಹಬ್ಬ ಬಂದಿದೆ... ಗಣೇಶ ಕಡುಬು ಪ್ರಿಯನೇ, ಮೋದಕ ಪ್ರಿಯನೇ ಎಂಬುದು ಯಾರಿಗೂ ಖಚಿತವಾಗಿ ಗೊತ್ತಿಲ್ಲ! ಈ ಹಬ್ಬದ ಸಡಗರದಲ್ಲಿ ಗಣೇಶನಿಗೆ ಬಗೆಬಗೆಯ ಕಡುಬುಗಳನ್ನು ನೈವೇದ್ಯ ಮಾಡಿ, ಅವುಗಳನ್ನು ಪ್ರಸಾದದ ಹೆಸರಲ್ಲಿ ಸವಿಯಲೂ ಅಡ್ಡಿಯಿಲ್ಲ! ಜೈ ಗಣೇಶ!

ಕಾಯಿ ಕಡುಬು

ಬೇಕಾಗುವ ಸಾಮಗ್ರಿಗಳು :

ಅರ್ಧ ಕೆಜಿ ಸಕ್ಕರೆ
ಅರ್ಧ ಕೆಜಿ ಹುರಿಗಡಲೆ
ಒಣಕೊಬ್ಬರಿ ಪುಡಿ
ದ್ರಾಕ್ಷಿ, ಗೋಡಂಬಿ, ಏಲಕ್ಕಿ.

ಮಾಡುವ ವಿಧಾನ : ಸಣ್ಣಗೆ ಪುಡಿ ಮಾಡಿದ ಸಕ್ಕರೆ ಮತ್ತು ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕೊಬ್ಬರಿ ಹಾಗೂ ತುಪ್ಪದಲ್ಲಿ ಕಮ್ಮನೆ ಹುರಿದುಕೊಂಡ ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಬೆರೆಸಿದರೆ ಕಾಯಿಕಡುಬಿನ ಹೂರಣ ಸಿದ್ಧ.

ಕಾಯಿಕಡುಬಿಗೂ ಸಹ ಹೂರಣದ ಕಡುಬಿನ ಕಣಕವನ್ನೇ ಉಪಯೋಗಿಸಬೇಕು. ಮಾಡುವ ವಿಧಾನವೂ ಅದೇ ಥರ.

***

ಕುಚ್ಚಿದ ಕಡುಬು

ಬೇಕಾಗುವ ಸಾಮಗ್ರಿಗಳು :
ಕಾಲು ಕೆಜಿ ಅಕ್ಕಿ ಹಿಟ್ಟು
ಅರ್ಧ ಪಾವು ಹಾಲು
ಒಂದು ಬಟ್ಟಲು ತೆಂಗಿನ ತುರಿ
ಬಟ್ಟಲು ಪುಡಿ ಬೆಲ್ಲ
ಉಪ್ಪು ಏಲಕ್ಕಿ

ಮಾಡುವ ವಿಧಾನ : ತೆಂಗಿನ ಕಾಯಿ ತುರಿ ಮತ್ತು ಪುಡಿ ಬೆಲ್ಲ ಬೆರೆಸಿ ಸಣ್ಣ ಉರಿಯಲ್ಲಿ ಘಮಘಮ ಎನ್ನು ವ ತನಕ ಹುರಿಯಬೇಕು. ಒಲೆಯ ಮೇಲಿಂದ ಇಳಿಸಿದ ಮೇಲೆ ಏಲಕ್ಕಿ ಪುಡಿ ಬೆರೆಸಿಡಿ. ದಪ್ಪ ತಳದ ಪಾತ್ರೆಯಲ್ಲಿ ಅರ್ಧ ಪಾವು ಹಾಲು, ನೀರು, ಉಪ್ಪು ಹಾಕಿ ಸ್ಟೌವ್‌ ಮೇಲಿಟ್ಟು ಕುದಿಯಲು ಬಿಡಿ. ಕುದಿಬಂದ ಮೇಲೆ ಉರಿ ಸಣ್ಣಗೆ ಮಾಡಿ ಅಕ್ಕಿಹಿಟ್ಟನ್ನು ನಿಧಾನವಾಗಿ ಹಾಕುತ್ತಾ ಮುದ್ದೆ ಕೋಲಿನಲ್ಲಿ ಗೊಟಾಯಿಸಿ. ಆಮೇಲೆ ಹಿಟ್ಟು ಬಿಸಿ ಇರುವಾಗಲೇ ನಾದಿಕೊಳ್ಳಿ. ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್‌ ಹಾಳೆಯ ಮೇಲೆ ಇಟ್ಟು ಮೇಲಿಂದ ಸಮತಟ್ಟಾದ ತಟ್ಟೆಯನ್ನು ಒತ್ತಿ ಹಪ್ಪಳದ ಹಾಗೆ ಮಾಡಿಟ್ಟುಕೊಳ್ಳಿ. ಇದರೊಳಗೆ ಹೂರಣ ಇಟ್ಟು ಅರ್ಧಕ್ಕೆ ಮಡಿಚಿ ಕಡುಬಿನಾಕಾರಕ್ಕೆ ಮಾಡಿಟ್ಟುಕೊಳ್ಳಬೇಕು.

ಇಡ್ಲಿ ಪಾತ್ರೆಯ ಹಬೆಯಲ್ಲಿ 10-15 ನಿಮಿಷ ಬೇಯಿಸಿದ್ದಾಯಿತು , ಬಿಸಿಬಿಸಿ ಕುಚ್ಚಿದ ಕಡುಬು ಸಿದ್ಧವಾಗಿದೆ, ಎಲ್ಲರೂ ಊಟಕ್ಕೆ ಬನ್ನಿ.

***

ಹೂರಣದ ಕಡುಬು

ಬೇಕಾಗುವ ಸಾಮಗ್ರಿಗಳು :

ಮೈದಾ ಹಿಟ್ಟು ' ಕಿ.ಲೋ.
ಕಡಲೆ ಬೆಳೆ ' ಕಿ.ಲೋ.
ಬೆಲ್ಲ ' ಕಿ.ಲೋ.
ಏಲಕ್ಕಿ ಸ್ವಲ್ಪ

special kadabuಮಾಡುವ ವಿಧಾನ : ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ನಾದಿ ಒಂದೆಡೆ ತೆಗೆದಿಡಿ (' ಗಂಟೆ ಮುಂಚಿತವಾಗಿ ಮಾಡಿ) ಇನ್ನೊಂದೆಡೆ ಕಡಲೆ ಬೇಳೆಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಿ. ಬೆಂದ ನಂತರ ನೀರನ್ನು ಬಸಿಯಿರಿ. ಆನಂತರ ಅದಕ್ಕೆ ಬೆಲ್ಲವನ್ನು ಹಾಕಿ 5 ನಿಮಿಷಗಳವರೆಗೂ ಸ್ಟವ್‌ ಮೇಲೆ ಇಟ್ಟು ಕುದಿಸಿ ಕೆಳಗಿಳಿಸಿ. ಬೆಳೆ- ಬೆಲ್ಲದ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಹೂರಣ ಮಾಡಿಕೊಳ್ಳಬೇಕು.

ನಾದಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು, ಚಿಕ್ಕ ಚಿಕ್ಕ ವೀಳ್ಯದೆಲೆ ಗಾತ್ರದಲ್ಲಿ ಲಟ್ಟಿಸಿ ಅದರೊಳಗೆ ಈ ಹೂರಣವನ್ನು ತುಂಬಿ ಮುಚ್ಚಿ. ನಂತರ ಕಾಯ್ದ ಎಣ್ಣೆಯಲ್ಲಿ ಒಂದೊಂದೆ ತೇಲಿ ಬಿಡಿ. ಅವು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೆಳಗಿಳಿಸಿ ರುಚಿ ನೋಡಿ.

***

ಮೆಣಸಿನ ಕಡುಬು

ರುಚಿ ಮಾತ್ರವಲ್ಲ ಶೀತ ಉಪಶಮನಕ್ಕೆ ರಾಮಬಾಣವೂ ಹೌದು!

ಬೇಕಾಗುವ ಸಾಮಗ್ರಿಗಳು :

ಮೈದಾ ಹಿಟ್ಟು ' ಕಿ.ಲೋ.
ಬೆಲ್ಲ ' ಕಿ.ಲೋ.
ಮೆಣಸಿನ ಕಾಳು 50 ಗ್ರಾಂ
ಒಣ ಶುಂಠಿ 50 ಗ್ರಾಂ

ಮಾಡುವ ವಿಧಾನ : ಮೊದಲು ಒಣಶುಂಠಿ, ಕರಿಮೆಣಸು, ಬೆಲ್ಲವನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ಇನ್ನೊಂದೆಡೆ ಮೈದಾ ಹಿಟ್ಟನ್ನು ನಾದಿಕೊಂಡು ಚಿಕ್ಕ ಚಿಕ್ಕ ಗಾತ್ರದಲ್ಲಿ ಲಟ್ಟಿಸಿ. ಅದರೊಳಗೆ ಮೊದಲೇ ರುಬ್ಬಿಟ್ಟಿದ್ದ ಹೂರಣವನ್ನು ತುಂಬಿ ಮುಚ್ಚಿಕೊಳ್ಳಿ. ಸ್ಟವ್‌ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ಕಾಯಲು ಬಿಟ್ಟು , ಅದರೊಳಗೆ ಒಂದೊಂದೆ ಬಿಡಿ. ಚೆನ್ನಾಗಿ ಬೆಂದ ನಂತರ ಹೊರತೆಗೆದು ಸೇವಿಸಿ. (ಇದು ಶೀತ ಉಪಶಮನಕ್ಕೆ ಉತ್ತಮ ಔಷಧಿಯೂ ಹೌದು)

***

ಕೊಬ್ಬರಿ ಕಡುಬು

ಉತ್ತರ ಕರ್ನಾಟಕದ ರುಚಿಕರ ಕರ್ಚಿಕಾಯಿ

ಬೇಕಾಗುವ ಸಾಮಗ್ರಿಗಳು :

ಮೈದಾ ' ಕಿ.ಲೋ
ತುರಿದ ಒಣ ಕೊಬ್ಬರಿ ¼ ಕಿ.ಲೋ
ಗಸಗಸೆ 150 ಗ್ರಾಂ
ಸಕ್ಕರೆ ಪುಡಿ ¼
ಏಲಕ್ಕಿ ಸ್ವಲ್ಪ

Special kadabuಮಾಡುವ ವಿಧಾನ : ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ನಾದಿಕೊಳ್ಳಿ. ತುರಿದ ಕೊಬ್ಬರಿಯನ್ನು, ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಆನಂತರ ಮೇಲಿನಂತೆ ಚಿಕ್ಕ ಚಿಕ್ಕ ಗಾತ್ರದಲ್ಲಿ ಲಟ್ಟಿಸಿ(ತೀಡು)ಕೊಂಡು, ಅದರೊಳಗೆ ಮೊದಲೇ ಸಿದ್ಧಪಡಿಸಿಕೊಂಡಿದ್ದ ಮಿಶ್ರಣವನ್ನು ಸೇರಿಸಿ. ಕಾಯ್ದ ಎಣ್ಣೆಯಲ್ಲಿ ಬಿಡಿ. ಉತ್ತರ ಕರ್ನಾಟಕದ ರುಚಿಕರ ಕರ್ಚಿಕಾಯಿ ರೆಡಿ!

***

ಶೇಂಗಾ ಕಡುಬು (ಕಡಲೆ ಬೀಜ)

ಗಣೇಶನಿಗಿಂತಲೂ ಮಕ್ಕಳಿಗೆ ಈ ಕಡುಬು ಅಂದ್ರೆ ಹೆಚ್ಚಿನ ಪ್ರೀತಿ!

ಬೇಕಾಗುವ ಸಾಮಗ್ರಿಗಳು :

ಶೇಂಗಾ(ಕಡಲೆ ಬೀಜ) 'ಕಿ.ಲೋ
ಬಿಳಿ ಎಳ್ಳು 150 ಗ್ರಾಂ
ಸಕ್ಕರೆ ¼ ಕಿ.ಲೋ
ಏಲಕ್ಕಿ 50 ಗ್ರಾಂ

ಮಾಡುವ ವಿಧಾನ : ಮೊದಲು ಕಡಲೆ ಬೀಜವನ್ನು ತವೆ ಮೇಲಿಟ್ಟು ಹುರಿದು ಅದರ ಸಿಪ್ಪೆಯನ್ನು ತೆಗೆಯಿರಿ. ಆನಂತರ ಕಡಲೆ ಬೀಜ, ಬಿಳಿ ಎಳ್ಳು ಮತ್ತು ಸಕ್ಕರೆ ಮೂರನ್ನು ಸೇರಿಸಿ ಪುಡಿ ಮಾಡಿಕೊಳ್ಳಿ. ಆನಂತರ ಒಣ ಮಿಶ್ರಣವನ್ನು ಚಿಕ್ಕ ಚಿಕ್ಕದಾಗಿ ಲಟ್ಟಿಸಿದ ಮೈದಾ ಹಿಟ್ಟಿನಲ್ಲಿ ತುಂಬಿ, ಕಾಯ್ದ ಎಣ್ಣೆಯಲ್ಲಿ ಒಂದೊಂದೆ ತೇಲಿ ಬಿಡಿ. ವಿಶೇಷ ಕಡಬು ರೆಡಿ!

(ದಟ್ಸ್‌ಕನ್ನ್ನಡ ಪಾಕಶಾಲೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+