ಗೌರಿ ಹಬ್ಬಕ್ಕೆ ಹೋದುದು
| ಗೌರೀ ಹಬ್ಬಕ್ಕೆ ಅವರೆಲ್ಲ ಬಂದವರೇ ಮಾ ಶಿವನ ನನ್ನ ಕಳುಹೆಂದು । ಗೌರಮ್ಮ ಶಿವನಿಗೆ ಶೋಕ ಕೊಡುತಾಳೆ ।। ಹಿಪ್ಪೆ ಹೂವಿನ್ಹಂಗೆ ಕೆನ್ನೇಗೆ ನೆರಿಬಂದೊ ಹಾಲು ಕಾಸೋರಿಲ್ಲ ಬಾಲನ ತಡೆಯೋರಿಲ್ಲ ಹಾಲನು ಕಾಸೋಳು ಗಂಗೆ ಬಾಲನ ತಡೆಯೋಳು ಗಂಗೆ ಹಾಲ ಕಾಸೊ ಹೊತ್ತಿಗೆ ಬ್ಯಾಳೆ ಮೂಗೋಳು ಮೆದ್ದ ತುಪ್ಪ ಕಾಸೋ ಹೊತ್ತಿಗೆ ಸಕ್ಕರೆ ಮೂಗೋಳು ಮೆದ್ದ ಆನೆ ಮೇಲೆ ಬರುವೋರು ನಾನಕ್ಕೈಯ್ಯಾಡ್ಡೋರು ತುಪ್ಪ ಬಾನುಣ್ಣೋದ ಉಪ್ಪು ಬಾನುಂಡೇನು ಹಾಲು ಬಾನುಣ್ಣೋದ ನೀರು ಬಾನುಂಡೇನು ಗೌರಮ್ ಬರುತ್ತಾಳೆಂದು । ಗರಡೀ ಸಾಲಾಗಿದ್ದು ಮುತ್ತೆೈದೆ ನಿನಕೈಲಿ ಮೂರು ಚಂದದ ಬಳೇ ಅಚ್ಚ ನೀಲದ ಬಳೆಯ ಹೆಚ್ಚಾಗ್ ತಂಗ್ಯವ್ ತೊಟ್ಲೂ (ಎಸ್.ಕೆ.ಕರೀಂಖಾನರ ಕನ್ನಡ ಜಾನಪದ ಗೀತೆಗಳು ಪುಸ್ತಕದಿಂದ ಆಯ್ದ ಗೀತೆ) | |












Click it and Unblock the Notifications