Ganesha Chaturthi Rangoli Designs: ಪರಿಸರ ಸ್ನೇಹಿ ಗಣಪತಿ ರಂಗೋಲಿ ಐಡಿಯಾಗಳು: ಅರಿಶಿನ, ಕುಂಕುಮ, ಹೂವು, ಎಲೆಯಿದ್ದರೆ ಸಾಕು
ಗಣೇಶನ ಹಬ್ಬದಂದು ವಿಘ್ನವಿನಾಯಕ ವಿಗ್ರಹವನ್ನು ಇಟ್ಟು ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಗಣೇಶನನ್ನು ಬರಮಾಡಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 7ರಂದು ಗಣೇಶನ ವಿಗ್ರಹ ಪ್ರತಿಷ್ಠಪಿಸಲು ಈಗಾಗಲೇ ಸಿದ್ಧತೆಗಳು ಮಾಡಿಕೊಳ್ಳುತ್ತಿರುವವರು ಮನೆಯಂಗಳದಲ್ಲಿ ರಂಗೋಲಿ ಬಿಡಲು ಕೂಡ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ.
ಹೀಗೆ ನೀವೇನಾದರೂ ಗಣೇಶ ಚತುರ್ಥಿಗೆ ಹೊಂದುವಂತಹ ರಂಗೋಲಿ ಬಿಡಲು ಯೋಚಿಸುತ್ತಿದ್ದರೆ ನಾವು ನಿಮಗೆ ಕೆಲವೊಂದಿಷ್ಟು ಐಡಿಯಾಗಳನ್ನು ಕೊಡುತ್ತೇವೆ. ಈ ಸರಳವಾದ ಹಾಗೂ ಸುಂದರವಾದ ರಂಗೋಲಿಯನ್ನು ನಿಮ್ಮ ಮನೆಯಂಗಳದಲ್ಲಿ ಬಿಡಿಸುವ ಮೂಲಕ ಚೌತಿಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಪ್ರತಿ ವರ್ಷ ಗಣಪತಿಯ ಆಗಮನದ ಸಂದರ್ಭದಲ್ಲಿ ಮನೆಯ ಹೊಸ್ತಿಲಲ್ಲಿ ಹಲವು ಬಗೆಯ ಬಣ್ಣ ಬಣ್ಣದ ರಂಗೋಲಿ ಹಾಕಿ ಸಂಭ್ರಮಿಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ರಂಗೋಲಿ ಬಣ್ಣಗಳು ಹಲವು ಬಗೆಯ ರಾಸಾಯನಿಕಗಳಿಂದ ತಯಾರಿಸಿದ್ದು ಮಾತ್ರವಲ್ಲದೆ ಆರೋಗ್ಯ ಹಾಗೂ ಪರಿಸರಕ್ಕೂ ಅಪಾಯಕಾರಿ ಎಂಬುದು ನಿಮಗೆ ಗೊತ್ತೇ ಇದೆ. ಹೀಗಾಗಿ ನಾವು ನಿಮಗಾಗಿ ಸಾವಯವ ಮತ್ತು ಪರಿಸರ ಸ್ನೇಹಿ ರಂಗೋಲಿ ವಿನ್ಯಾಸ ಕಲ್ಪನೆಗಳನ್ನು ತಂದಿದ್ದೇವೆ. ಇದು ಮಂಗಳಕರ ಸಂಕೇತವಾಗಿದ್ದು ಮಾತ್ರವಲ್ಲದೆ ಪರಿಸರಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಹಾಗಾದರೆ ಇಲ್ಲಿದೆ ನೋಡಿ ಅನೇಕ ಪರಿಸರ ಸ್ನೇಹಿ ರಂಗೋಲಿ ವಿನ್ಯಾಸಗಳು...
ಅಕ್ಕಿಯ ಗಣೇಶ ರಂಗೋಲಿ ವಿನ್ಯಾಸ
ಗಣೇಶ ಚತುರ್ಥಿಯ ಸಂದರ್ಭದಲ್ಲಿ ನೀವು ಗಣೇಶನ ಚಿತ್ರವನ್ನು ಅಕ್ಕಿಯಿಂದ ಬಿಡಿಸಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಅಕ್ಕಿಗೆ ಅರಿಶಿನ ಮತ್ತು ಕುಂಕುಮವನ್ನು ಮಿಕ್ಸ್ ಮಾಡಿ ರಂಗೋಲಿ ಹಾಕಬಹುದು. ಹಸಿರು ಬಣ್ಣಕ್ಕಾಗಿ ಮೆಹಂದಿಯನ್ನು ಬಳಸಬಹುದು. ಇದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಬಣ್ಣಗಳನ್ನು ಬಳಸಲಾಗಿರುವುದಿಲ್ಲ.
ವೀಳ್ಯದೆಲೆಯ ಗಣಪತಿ ರಂಗೋಲಿ ವಿನ್ಯಾಸ
ಗಣೇಶ ಚತುರ್ಥಿಯಂದು ನೀವು ಈ ರೀತಿಯಲ್ಲಿ ವೀಳ್ಯದೆಲೆಯಿಂದ ಗಣೇಶನ ಚಿತ್ರವನ್ನು ಬಿಡಿಸಬಹುದು. ಇದಕ್ಕಾಗಿ ಎಲೆ ಮಾತ್ರ ಯಾವ ರೀತಿಯಾಗಿರಬೇಕು ಎಂಬುದನ್ನು ಗಮನಿಸಬೇಕು ಅಷ್ಟೇ. ವೀಳ್ಯದೆಲೆಯಿಂದ ಅಲಂಕರಿಸಿ ಮತ್ತು ಅರಿಶಿನದ ಉಂಡೆಯೊಂದಿಗೆ ತಿಲಕವನ್ನು ಹಚ್ಚಿದರೆ ಗಣೇಶ ಚತುರ್ಥಿಗೆ ರಂಗೋಲಿ ರೆಡಿ.

ದೀಪಗಳು ಮತ್ತು ಹೂವುಗಳಿಂದ ಮಾಡಿದ ಸಾವಯವ ರಂಗೋಲಿ ವಿನ್ಯಾಸ
ಬಪ್ಪನನ್ನು ಸ್ವಾಗತಿಸಲು ನೀವು ಮಣ್ಣಿನ ದೀಪಗಳು ಮತ್ತು ಮಾರಿಗೋಲ್ಡ್ ಮತ್ತು ಗುಲಾಬಿ ಹೂವುಗಳಿಂದ ಗಣೇಶನಿಡುವ ಸ್ಥಳವನ್ನು ಅಲಂಕರಿಸಬಹುದು. ಮಣ್ಣಿನ ಗಣೇಶನ ವಿಗ್ರಹದ ಸುತ್ತಲೂ ರಂಗೋಲಿಯನ್ನು ಬಿಡಿಸಿದರೆ ಅದನ್ನು ನೋಡಲು ಎರಡು ಕಣ್ಣು ಸಾಲದು. ಈ ಪರಿಸರ ಸ್ನೇಹಿ ರಂಗೋಲಿ ಈ ಬಾರಿ ಗಣೇಶ ಚತುರ್ಥಿಗೆ ಹಾಕಿ ಆಕರ್ಷಕವಾಗಿರುತ್ತದೆ.
ಗಣೇಶ ರಂಗೋಲಿ ಹೂವಿನ ವಿನ್ಯಾಸ
ಗಣೇಶ ಚತುರ್ಥಿಯಂದು ನೀವು ಬಣ್ಣ ಬಣ್ಣದ ಹೂವಿನ ಎಲೆಗಳಿಂದ ರಂಗೋಲಿ ವಿನ್ಯಾಸಗಳನ್ನು ಮಾಡಬಹುದು. ಇದರಲ್ಲಿ ಹೆಚ್ಚೇನು ಮಾಡಬೇಕಾಗಿಲ್ಲ. ಕೇವಲ ಮಾರಿಗೋಲ್ಡ್, ಗುಲಾಬಿ ಮತ್ತು ದುಂಡು ಮಲ್ಲಿಗೆ ಹೂವುಗಳಿದ್ದರೆ ಸಾಕು ಪರಿಸರ ಸ್ನೇಹಿ ರಂಗೋಲಿಯನ್ನು ಬಿಡಿಸಬಹುದು.
ಅರಿಶಿನ-ಕುಂಕುಮ ರಂಗೋಲಿ ವಿನ್ಯಾಸ
ಗಣೇಶನ ಪೂಜೆಯಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ವಿಶೇಷ ಮಹತ್ವವಿದೆ. ಈ ಬಾರಿ ಬಪ್ಪನನ್ನು ಸ್ವಾಗತಿಸುವಾಗ ನೀವು ಅರಿಶಿನ, ಕುಂಕುಮ ಮತ್ತು ಎಲೆಗಳ ಸಹಾಯದಿಂದ ಈ ರೀತಿಯ ರಂಗೋಲಿಯನ್ನು ತಯಾರಿಸಬಹುದು.

ಪೂಜಾ ಸಾಮಗ್ರಿಯಿಂದ ಮಾಡಿದ ರಂಗೋಲಿ ವಿನ್ಯಾಸ
ಗಣೇಶನ ಪೂಜೆಯಲ್ಲಿ ಗರಿಕೆ, ಊದಿನಕಡ್ಡಿ ಮತ್ತು ಹೂವುಗಳನ್ನು ಮುಖ್ಯವಾಗಿವೆ. ಈ ಎಲ್ಲಾ ಸಾಮಾಗ್ರಿಗಳನ್ನು ಸಂಗ್ರಹಿಸಿ, ನೀವು ರಂಗೋಲಿಯನ್ನು ಈ ರೀತಿ ತಯಾರಿಸಬಹುದು. ಇದು ನೋಡಲು ಆಕರ್ಷಕವಾಗಿರುತ್ತದೆ. ಜೊತೆಗೆ ಗಣೇಶ ಚತುರ್ಥಿ ಸಡಗರ ಸಂಭ್ರಮವನ್ನು ಹೆಚ್ಚಿಸುತ್ತದೆ.
ವೀಳ್ಯದೆಲೆಯ ರಂಗೋಲಿ ವಿನ್ಯಾಸ
ಗಣಪತಿಯ ಪೂಜೆಯಲ್ಲಿ ವೀಳ್ಯದೆಲೆಯನ್ನೂ ಅರ್ಪಿಸಲಾಗುತ್ತದೆ. ಹೂವುಗಳು, ಅರಿಶಿನ ಪುಡಿ, ಕುಂಕುಮ ಮತ್ತು ವೀಳ್ಯದೆಲೆಗಳ ಸಹಾಯದಿಂದ ಮನೆಯಲ್ಲಿ ಸುಂದರವಾದ ಮತ್ತು ಸರಳವಾದ ರಂಗೋಲಿಯನ್ನು ಮಾಡುವ ಮೂಲಕ ನೀವು ಪರಿಸರ ಸ್ನೇಹಿ ಗಣಪತಿ ಪೂಜೆಯನ್ನು ಮಾಡಬಹುದು.












Click it and Unblock the Notifications