Get Updates
Get notified of breaking news, exclusive insights, and must-see stories!

Ganesh Chaturthi 2025: ಗಣೇಶ ಹಬ್ಬದ ಪೂಜಾ ವಿಧಿ-ವಿಧಾನಗಳು ಮತ್ತು ಹಬ್ಬದ ಮಹತ್ವ: ಮಾಹಿತಿ ಇಲ್ಲಿದೆ

ಗಣೇಶ ಚತುರ್ಥಿಯನ್ನು ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಜನಿಸಿದನೆಂಬ ನಂಬಿಕೆಯಿದೆ. ಗಣೇಶೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಗಣೇಶ ಚತುರ್ಥಿ ಹಬ್ಬವನ್ನು ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತದೆ. ಇನ್ನೂ ಯಾವುದೇ ಕೆಲಸಕ್ಕೂ ಮುನ್ನ ಅಡೆತಡೆಗಳನ್ನು ನಿವಾರಿಸುವ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಹೊಸ ಆರಂಭಗಳ ದೇವರು ಎಂದು ಪೂಜಿಸಲ್ಪಡುವ ದೇವರು ವಿನಾಯಕ. ಗಣೇಶನಿಗೆ ಪ್ರಥಮ ಪೂಜೆಯಾಗಿರುತ್ತದೆ. ದೇಶಾದ್ಯಂತ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಗಣಪತಿ ಬಪ್ಪಾ ಮೋರೆಯಾ ಮಂಗಳ ಮೂರ್ತಿ ಮೋರೆಯಾ ಎಂಬ ಉದ್ಘೋಷದೊಂದಿಗೆ ಗಣಪತಿ ಹಬ್ಬವನ್ನ ವಿಧಿ ವಿಧಾನಗಳ ಮೂಲಕ ಆಚರಿಸಲಾಗುತ್ತದೆ.

Ganesh Chaturthi See The Rituals And Rituals Of Ganesh Festival Here

ಮಣ್ಣಿನಿಂದ ಮಾಡಿದ ಗಣಪತಿಯನ್ನು ಚತುರ್ಥಿ ದಿನ ಪ್ರತಿಷ್ಠಾಪಿಸಿ, ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಆಚರಿಸುವುದರಿಂದ ಚೌತಿಯ ವಿಶೇಷ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಪೂಜಾ ವಿಧಿ ವಿಧಾನಗಳಿಗೆ ಎಲ್ಲಾ ಸಮಯ ಶ್ರೇಷ್ಠವಲ್ಲ. 12 ಗಂಟೆಯೊಳಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಸಂಪ್ರದಾಯವಾಗಿದೆ. ವಿನಾಯಕ ಹಬ್ಬದ ಪೂರ್ವಭಾವಿಯಾಗಿ ರಾಹುಕಾಲ, ಯಮಗಂಡಕಾಲದ ಒಳಗೆ ಗಣಪನನ್ನು ಮಾರುಕಟ್ಟೆಯಿಂದ ತಂದು ಶುದ್ಧವಾದ ಸ್ಥಳದಲ್ಲಿ ಇರಿಸುವುದು ತುಂಬಾ ಮುಖ್ಯವಾಗಿರುತ್ತದೆ.

ಇನ್ನೂ ಮನೆಯಲ್ಲಿ ನೀವು ಗಣೇಶ ಮೂರ್ತಿಯನ್ನ ಸ್ಥಾಪಿಸಿ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಪೂಜಾ ವಿಧಿ ವಿಧಾನಗಳ ಮೂಲಕ ಮನೆಯಲ್ಲಿ ಗಣಪನ ಪೂಜೆಯನ್ನು ನಡೆಸಬೇಕು. ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಆಗಸ್ಟ್ 27 ರ ಬುಧವಾರ ಪೂಜೆಗೆ ಮುಹೂರ್ತ: ಬೆಳಿಗ್ಗೆ 11:12 ರಿಂದ ಮಧ್ಯಾಹ್ನ 01:44ರವರೆಗೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಬೇಕಾಗಿದೆ.

ಮನೆಗೆ ಅಥವಾ ಊರಿಗೆ ತಂದ ಗಣಪನ ವಿಗ್ರಹವನ್ನು ಮಹಿಳೆಯರಿಂದ ಆರತಿ ಮಾಡಿಸಿ ಗಣಪತಿಯನ್ನು ಬರಮಾಡಿಕೊಳ್ಳಬೇಕು. ಅಲ್ಲದೆ ಮಂತ್ರ ಪಠಣೆಯಿಂದ ಗಣಪನನ್ನು ಆಹ್ವಾನಿಸಿ. ಶುದ್ದ ನೀರು, ಗಂಧ, ಹೂವು, ಅಕ್ಷತೆಗಳಿಂದ, ವಿನಾಯಕನಿಗೆ ಅಭಿಷೇಕ ಮಾಡಿದ ಬಳಿಕ ಅಕ್ಕಿಯಿಂದ ಮಾಡಿದ ಪೀಠದಲ್ಲಿ ಮೇಲೆ ಬಾಳೆ ಎಲೆ ಇಟ್ಟು ಅದರಲ್ಲಿ ಗಣಪನನ್ನು ಕೂರಿಸಿ. ಎರಡು ಬದಿಯಲ್ಲಿ ದೀಪವನ್ನು ಹಚ್ಚಿಟ್ಟು, ಬಾಳೆ ಕಂಬ ಹಾಗೂ ಹೂವಿನಿಂದ ಅಲಂಕಾರ ಮಾಡಿದ ಮಂಟಪದ ಒಳಗೆ ವಿನಾಯಕನನ್ನು ಪ್ರತಿಷ್ಠಾಪಿಸಬೇಕು. ಪ್ರತಿಷ್ಠಾಪನೆ ಬಳಿಕ ಗಣೇಶನಿಗೆ ಪ್ರಿಯವಾದ ಸಿಹಿ ತಿನಿಸು ಹಾಗೂ ಕೊಬ್ಬರಿ, ವೀಳ್ಯದೆಲೆ - ಅಡಿಕೆ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಗಣೇಶನಿಗೆ ಬಾಗಿನ ಅರ್ಪಿಸುವುದು ಪದ್ಧತಿಯಾಗಿದೆ.

ಗಣೇಶನಿಗೆ ಪೂಜೆ ಸಂದರ್ಭದಲ್ಲಿ ಗರಿಕೆಯ ಹಾಗೂ ಕುಂಕುಮ ಅರ್ಚನೆಯನ್ನು ಮಾಡುವುದು ಸಂಪ್ರದಾಯವಾಗಿದೆ. ಅರಶಿಣ, ಕುಂಕುಮ, ಗಂಧ, ಭಸ್ಮ, ಗಂಜಲ, ಗರಿಕೆ ಹುಲ್ಲು, ಬಿಡಿ ಹೂಗಳು, ಅಗರಬತ್ತಿ, ವೀಳ್ಯದೆಲೆ, ಕಳಶ ತೀರ್ಥ ಸಿಂಪಡಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಗಣಪತಿಗೆ ಧೂಪ ಸಮರ್ಪಿಸಿ, ದೀಪ ಬೆಳಗಿಸಿ, ಮೋದಕ ಸೇರಿದಂತೆ ಅನೇಕ ಭಕ್ಷ್ಯಗಳು, ಫಲ ಪುಷ್ಪಗಳನ್ನ ಅರ್ಪಿಸಿ ಪೂಜೆ ಮಾಡುವುದು ಪರಂಪರೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+