ಅಲ್ರೀ, ಕೇಳೋ ಪ್ರಶ್ನೆ ಏನ್ರೀ ಇದು ಸುಬ್ಬುಸಾರ್?

ಇರಲಿ, ಸೀದ ಹೋಗಿ ಆಕೆಯ ಪಕ್ಕದಲ್ಲಿ ಕುಳಿತೇ ಬಿಟ್ಟ. ಮುಂದಿನ ಸೀಟಿನಲ್ಲಿ ಅಜ್ಜಿಯ ತೊಡೆಯ ಮೇಲೆ ಕುಳಿತಿದ್ದ ಒಂದು ಹೆಣ್ಣು ಮಗು, ಅಲ್ಲಿಂದ ಎದ್ದು "ಮಮ್ಮಿ" ಎನ್ನುತ್ತ ಸುಬ್ಬನ ಪಕ್ಕದ ಹುಡುಗಿಯ (?) ಬಳಿ ಬರೋದೇ? ಸುಬ್ಬ ಆಶ್ಚರ್ಯದಿಂದ ಆಕೆಯನ್ನು ಕೇಳಿಯೇ ಬಿಟ್ಟ "ಮಗು ನಿಮ್ಮದೇ?" ಅಂತ. ಆಕೆ ನಾಚಿ "ಹೌದು" ಎಂದು "ನಾನು ದಿನವೂ ಸಂತೂರ್ ಸಾಬೂನನ್ನೇ ಬಳಸುವುದು" ಎನ್ನಲಿದ್ದಳು... ಅಷ್ಟರಲ್ಲೇ ಸುಬ್ಬ "ನಿಮ್ಮನ್ನು ನೋಡಿ ಹುಡುಗಿ ಅಂದುಕೊಂಡೆ... ವಯಸ್ಸಾದವರು ಅಂತ ಗೊತ್ತಾಗಲಿಲ್ಲ... ಸಾರಿ" ಎಂದಿದ್ದ! ಮುಂದೆ ಏನಾಯ್ತು ಎಂಬೋದು ಇಲ್ಲಿ ಹೇಳಲಾರೆ... ಅಂದಿನಿಂದ ಅವನು ಬಸ್ ಹತ್ತಿಲ್ಲ ಅಂತ ಮಾತ್ರ ಹೇಳಬಲ್ಲೆ!
ಸುಬ್ಬನ ಬಗ್ಗೆ ಒಂದು ಐಡಿಯಾ ಬಂತೇ? ಇಂತಹ ಸುಬ್ಬನಿಗೆ ರಾಯರು ತಮ್ಮ ಮಗಳನ್ನು ಹೇಗೆ ಕೊಟ್ಟರು ಅನ್ನೋ ಅನುಮಾನ ನಿಮಗೆ ಬಂದಿರಲೂಬಹುದು. ಕೆಲವೊಮ್ಮೆ ದುರ್ಘಟನೆಗಳು ಹಿತವಾಗೇ ನಡೆದು ಅಪಘಾತಗಳಾಗುವುದುಂಟು. ಅದಕ್ಕೆ ಹಿರಿಯರು "ಹಣೆಬರಹ" ಅಥವಾ "ಬ್ರಹ್ಮಗಂಟು" ಎಂದೂ ಅನ್ನುತ್ತಾರೆ. ಈಗ ವಿಷಯ ಹೇಳ್ತೀನಿ ಕೇಳಿ,
ಮದುವೆಗೆ ಮುನ್ನ ಮನೆ ಮಾಡು ಅನ್ನೋದನ್ನ ಯಾರೋ ಸುಬ್ಬನಿಗೆ ಹೇಳಿದ್ದರು. ಅದರಂತೆ ಮನೆ ಹುಡುಕುತ್ತಿದ್ದ. ಒಂದೆರಡು ಮನೆ ನೋಡಿದ ಮೇಲೆ ಸುಬ್ಬನಿಗೆ ದಲ್ಲಾಳಿ ಜೊತೆ ಹೇಗೆ ವ್ಯವಹರಿಸಬೇಕು ಅಂತ ಗೊತ್ತಾಯ್ತು. ನಂತರ ಆ ದಲ್ಲಾಳಿ ಯಾವುದೇ ಮನೆಯ ಬಗ್ಗೆ ಹೇಳುವಾಗ ಸುಬ್ಬ "ಆ ಮನೆಯಲ್ಲಿ ಏನೇನಿದೆ" ಎಂದು ಮುಂಚಿತವಾಗಿಯೇ ತಿಳಿದುಕೊಳ್ಳುತ್ತಿದ್ದ. ಅಂತಹ ಸುಬ್ಬನ ಬಳಿ ಮದುವೆ ದಲ್ಲಾಳಿ, ರಾಯರ ಮಗಳ ವಿವರ ಹೊತ್ತು ಬಂದ.
ಸುಬ್ಬ ಅವರನ್ನು ಕೇಳಿಯೇಬಿಟ್ಟ "ಹುಡುಗೀಗೆ ಏನೇನಿದೆ?" ಅಂತ. ದಲ್ಲಾಳಿಯ ಅದೃಷ್ಟವೋ ಅಥವಾ ದುರಾದೃಷ್ಟವೋ ರಾಯರೂ ಅವನ ಜೊತೆಗೇ ಇದ್ದರು! ಸುಬ್ಬನಿಗೆ ಸರಿಯಾಗಿ ನಾಲ್ಕು ಬಿತ್ತು ಅಂದುಕೊಳ್ಳುವಷ್ಟರಲ್ಲಿ, ರಾಯರು ಗಟ್ಟಿಯಾಗಿ ನಕ್ಕುಬಿಡೋದೇ? ಒಂದು ಕೆಟ್ಟ ಘಳಿಗೆಯಲ್ಲಿ ರಾಯರಿಗೆ ಸುಬ್ಬ ಮನಸ್ಸಿಗೆ ಬಂದುಬಿಟ್ಟಿದ್ದ. ಸುಬ್ಬನು ರಾಯರ ಅಳಿಯನಾದ. ಇವನಿಗೊಂದು ಹುಡುಗಿ ಹುಡುಕಿಯೇ ತೀರುತ್ತೇನೆ ಎಂದು ದಳ್ಳಾಳಿ ಮಾಡಿದ್ದ ಶಪಥ ಕೂಡ ನೆರವೇರಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications