ದೀಪಾವಳಿಗೆ ಅಳಿಯ ಸುಬ್ಬು ಬರುತ್ತಿದ್ದಾನೆ ಎಚ್ಚರ!

ಗಾಳಿಯಲ್ಲಿ ತೇಲಿಬಂತು ಆ ವಾಸನೆ... ಇಬ್ಬರೂ ಅವರವರ ಅನುಭವ ಹೇಳಿಕೊಳ್ಳಲು ಒಬ್ಬರತ್ತ ಒಬ್ಬರು, ಧಾವಿಸುತ್ತ ಬಂದರು. ಇನ್ನೇನು ಇಬ್ಬರ ನಡುವೆ ಕೇವಲ ಐದು ಮೀಟರ್ ಅಂತರವಿದೆ ಎನ್ನುವಷ್ಟರಲ್ಲೇ, ಆ ಗ್ಯಾಪ್ ಅನ್ನು ತುಂಬಿದ್ದು ಮಗಳು ರಾಧ. ಅವಳೂ ಇವರಿಬ್ಬರನ್ನು ಕಂಡು ತನ್ನ ಅನುಭವವನ್ನು ಹೇಳಿಕೊಳ್ಳಲು ಬರುತ್ತಿದ್ದಳು...
ಬೀದಿಯಿಂದ ಕೈಯಲ್ಲಿ ಬ್ಯಾಟನ್ನು ಹಿಡಿದು ಓಡುತ್ತ ಬಂದ ರಾಮು ಇವರನ್ನು ಸೇರಿದಾಗ ನಾಲ್ಕು ರೋಡುಗಳಿಂದ ಉಂಟಾದ ಬೆಂಗಳೂರು ಟ್ರಾಫಿಕ್ ಜ್ಯಾಮ್ ನಂತಾಯ್ತು ಹಜಾರ. ನಾಲ್ವರ ಮುಖದಲ್ಲೂ ಅದೇ ಆತಂಕ ಭಾವ. ಹೌದು ಗಾಳಿಯಲ್ಲಿನ ಬಂದ ಆ ಟೆಲಿಪತಿಕ್ ವಾಸನೆ ಖಂಡಿತ ಇದರದ್ದೇ ಎಂದು ಸೂಸುವ ಕಣ್ಣುಗಳು. ಅದೇ ಭಾವ... ರಾಮುವಿನ ಭಾವ... ಅರ್ಥಾತ್ ರಾಧಳ ಗಂಡ... ಅರ್ಥಾತ್ ಸುಂದರಮ್ಮ-ರಾಯರ "ಏಕಮೇವ ಅದ್ವಿತೀಯ" ಅಳಿಯ... ಹಬ್ಬಕ್ಕೆ ಬರುತ್ತಿರುವ ಅಳಿಯದೇವರು... ಸುಬ್ಬಾಭಟ್ಟ ಆಲಿಯಾಸ್ ಸುಬ್ಬ!
ಗಂಡ ಬರುತ್ತಿದ್ದಾನೆ ಎಂಬ ಸಂತೋಷ, ಅಳಿಯ ಬರುತ್ತಿರುವನೆಂಬ ಆನಂದ, ಭಾವ ಬರುತ್ತಿರುವನೆಂಬ ಖುಷಿ... ಯಾರಲ್ಲೂ ಇರಲಿಲ್ಲ! ಬದಲಿಗೆ ಒಂದು ರೀತಿ ಆತಂಕ. ನಮ್ ಸುಬ್ಬು ಸ್ಟೈಲೇ ಹಾಗೇ... ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ನುಡಿಯುವಷ್ಟು ಘನ ಜ್ಞಾನ ಅವನಿಗೆ ಇಲ್ಲ. ಅವನಾಡುವ ಪರಿ ನೋಡಿ ನೀವು ಹಾಗೆ ಅಂದುಕೊಂಡಲ್ಲಿ ಸಾಕು. ದೀಪಾವಳಿಗೆ ಮಾವನ ಮನೆಗೆ ಬರುತ್ತಿರುವ ಅಳಿಯ ಬಗ್ಗೆ ಹೀಗೆ ಮಾತನಾಡುವುದೇ? ಸಲ್ಲದು ಅಂದರೆ ನೀವೇ ಒಂದೆರೆಡು ದಿನ ನಮ್ ಸುಬ್ಬನ್ನ "ಸಾಕಿ"... ಆಮೇಲೆ ನೀವೇ ಹೇಳ್ತೀರ ಅವನನ್ನ "ಬಿಸಾಕಿ" ಅಂತ!
ಒಂದೆರಡು ಪ್ರಸಂಗಗಳನ್ನು ಅಂದರೆ "ಫ್ಲಾಷ್ ಬ್ಯಾಕ್" ರೀತಿ ಹೇಳುತ್ತೇನೆ, ಆಮೇಲೆ ನೀವೇ ಊಹಿಸಿಕೊಳ್ಳುವಿರಂತೆ. ಮುಂದೆ ಓದಿ...












Click it and Unblock the Notifications