ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿ ಸುಡುವಾಗ ಮುದ್ದು ಪ್ರಾಣಿಗಳ ನೆನಪಿರಲಿ

By Staff
|
Google Oneindia Kannada News

ಪಟಾಕಿ ಬಾಕ್ಸನ್ನು ಜೋಪಾನವಾಗಿಟ್ಟುಕೊಂಡು ದೀಪಾವಳಿಯಂದು ಸಂಜೆಯಾಗುವುದನ್ನೇ ಕಾಯುವಾಗ ನಿಮ್ಮ ಪ್ರೀತಿಯ ನಾಯಿಯ ನೆನಪಿರುತ್ತದೆಯೆ... ಕಾಟಾಚಾರಕ್ಕೆ ಸಂಜೆ ವಾಕಿಂಗ್‌ ಕರೆದುಕೊಂಡು ಹೋಗಿ ಬಂದು ಪಟಾಕಿ ಒಡೆಯಲಿರುವ ಕನಸು ಕಾಣುತ್ತಾ ಕೂರುವ ನೀವು ಆಟವಾಡುವ ಬೆಕ್ಕು, ಕಾಲಿನ ಹಿಂದೆ ಮುಂದೆ ಓಡಾಡುವ ನಾಯಿಯನ್ನು ಖಂಡಿತಾ ಮರೆಯಬೇಡಿ. ನೀವು ಖುಷಿಯಿಂದ ಸಿಡಿಸುವ ಲಕ್ಷ್ಮೀ ಬಾಂಬ್‌ನ ಸದ್ದಿಗೆ ಬೆಕ್ಕು ಬಾಲವನ್ನಷ್ಟು ದಪ್ಪ ಮಾಡಿಕೊಂಡು, ಕಿಟಿಕಿ ಗಾಜನ್ನೇರಿ ಓಡುವುದು, ನಾಯಿ ಅತ್ತ ಬೊಗಳಲೂ ಅಲ್ಲದೆ, ಇತ್ತ ಹೆದರಿಕೆಯಿಂದ ಸುಮ್ಮನಿರಲೂ ಆಗದೆ ಶತಪಥ ತಿರುಗುತ್ತಿರುವುದೂ... , ಸಣ್ಣಗೆ ನಡುಗುವುದು, ಹೆದರಿಕೆಯಿಂದ ಕುಂಯ್‌ಗುಟ್ಟುವುದು ಮನೆಯಿಂದ ಹೊರಗೊಮ್ಮೆ ಒಳಗೊಮ್ಮೆ ಓಡಾಡುವುದನ್ನು... ಪಟಾಕಿ ಒಡೆದು ಒಂದೆರಡು ದಿನಗಳವರೆಗೆ ಮಾಡಲಾರಂಭಿಸುತ್ತದೆ. ಪ್ರತಿ ದಿನ ರಾತ್ರಿ ಪಟಾಕಿ ಸದ್ದನ್ನು ನೆನೆಸಿಕೊಂಡು ಬೆಚ್ಚಿ ಬೀಳುತ್ತದೆ. ಪಟಾಕಿಯ ಸದ್ದಿನ ಹೆದರಿಕೆ ಸಾಕು ಪ್ರಾಣಿಗಳಿಗೆ ನೀಡುವ ಮಾನಸಿಕ ಹಿಂಸೆಯನ್ನು ನಿವಾರಿಸಲು ಮುಖ್ಯವಾಗಿ ಬೇಕಾಗುವುದು ನಿಮ್ಮ ಪ್ರೀತಿ.

ಸಂಭ್ರಮದ ಭರದಲ್ಲಿ ಪ್ರಾಣಿಗಳ ಮರೆಯಬೇಡಿ

  • ಪಟಾಕಿ ಸುಡುವಾಗ ಬೆಕ್ಕು, ನಾಯಿ, ಗಿಣಿ, ಮೊಲ ಏನೇ ಇದ್ದರೂ ಮನೊಯಾಳಗೇ ಇರುವಂತೆ ನೋಡಿಕೊಂಡು ಬಾಗಿಲು ಹಾಕಿ ಬಿಡಿ .
  • ಬೆಚ್ಚನೆ ಜಾಗದಲ್ಲಿ ಮಲಗುವ ಅಭ್ಯಾಸವಿದ್ದರೆ ಅವನ್ನು ಮಲಗಿಸಿ.
  • ಒಳ ಕೋಣೆಯಲ್ಲಿ ಅವುಗಳನ್ನು ಕೂಡಿ ಹಾಕಿದರೆ ಒಳ್ಳೆಯದು. ಆದರೆ ಅಲ್ಲಿ ಬಂಧಿಸಿಟ್ಟ ಮಾತ್ರಕ್ಕೆ ಅವನ್ನು ಮರೆಯಬೇಡಿ. ಕೇಳುವ ಪಟಾಕಿ ಸದ್ದಿಗೆ ಹೆದರಿ, ನಾಯಿಗಳು, ಬಾಗಿಲನ್ನೋ, ಗೋಡೆಯನ್ನೋ ಕೆರೆಯಲಾರಂಭಿಸಬಹುದು. ಪಟಾಕಿ ಸದ್ದಿನ ಜೊತೆಗೆ ಬಂಧನದ ಭಯ ಅವುಗಳನ್ನು ಮತ್ತಷ್ಟು ಕಂಗೆಡಿಸಿರಬಹುದು. ಆದ್ದರಿಂದ ಆಗಾಗ ಅವು ಏನು ಮಾಡುತ್ತಿವೆ ಎಂದು ಗಮನಿಸುತ್ತಿರಿ.
  • ಪಟಾಕಿ ಸಿಡಿಸುವಾಗ ನಿಮ್ಮ ನಾಯಿಯಾಂದಿಗೇ ಆನಂದಿಸಬೇಕೆಂದಿದ್ದರೆ, ಅದರ ಕೊರಳ ಪಟ್ಟಿಯನ್ನು ಜೋಪಾನವಾಗಿ ಹಿಡಿದುಕೊಂಡಿರಿ. ಆಗಾಗ ಸಂತೈಸುತ್ತಿರಿ.
  • ಕ್ಯಾಂಡಲ್‌, ಬೆಂಕಿ ಪೆಟ್ಟಿಗೆ, ಲ್ಯಾಂಪ್‌, ಮತ್ತಿತರ ಪಟಾಕಿ ವಸ್ತುಗಳ ಬಳಿ ಹೋಗಿ ಮೂಸಿ ನೋಡದಂತೆ ಅದನ್ನು ತಡೆಯಿರಿ.
  • ಉದ್ದುದ್ದ ಕೂದಲಿರುವ ನಾಯಿಗಳಾದರೆ ಇನ್ನಷ್ಟು ಜೋಪಾನವಾಗಿರಬೇಕು. ಕೂದಲಿಗೆ ಪಕ್ಕನೆ ಬೆಂಕಿ ಹತ್ತಿ ಕೊಳ್ಳುವ ಸಂಭವ ಹೆಚ್ಚು.
  • ದೀಪಾವಳಿ ಸಂದರ್ಭದಲ್ಲಿ ನಿಮ್ಮ ನಾಯಿಯ ಕೊರಳ ಪಟ್ಟಿಯಲ್ಲಿ, ನಿಮ್ಮ ಮನೆಯ ಸ್ಪಷ್ಟ ವಿಳಾಸ ಇರಲಿ. ಪಟಾಕಿ ಸದ್ದಿಗೆ ತಪ್ಪಿಸಿಕೊಂಡು ಓಡುವ ನಾಯಿ ಮತ್ತೆ ನಿಮ್ಮ ಮನೆ ಸೇರಲು ಇದು ಸಹಕಾರಿಯಾಗುತ್ತದೆ. ವಿಳಾಸವುಳ್ಳ ಎರಡು ಕೊರಳ ಪಟ್ಟಿಯಿರುವುದು ಇನ್ನಷ್ಟು ಒಳಿತು.
  • ನಾಯಿಯು ಅಸಹಜ ನಡವಳಿಕೆ ತೋರಿಸಿದಲ್ಲಿ ವೈದ್ಯರನ್ನು ಸಂಪರ್ಕಿಸದೇ, ಯಾವತ್ತೂ ನಿಮ್ಮದೇ ನಿರ್ಧಾರದೊಂದಿಗೆ ಔಷಧಿ ನೀಡಬೇಡಿ.
  • ದೀಪಾವಳಿಗೆ ಒಂದು ವಾರವಿರುವಾಗಲೇ ಗಟ್ಟಿ ಸದ್ದಿನ ಹಾಡು, ಸಣ್ಣ ಪುಟ್ಟ ಪಟಾಕಿಗಳನ್ನು ಸಿಡಿಸುವುದರ ಮೂಲಕವೂ ಪ್ರಾಣಿಗಳಿಗೆ ಶಬ್ದವನ್ನು ಅಭ್ಯಾಸಗೊಳಿಸಬಹುದು.

ನಿಮ್ಮ ಮನೆಯ ದೀಪಾವಳಿ ಹಬ್ಬವನ್ನು ಆಚರಿಸುವಾಗ ಸಾಕಿದ ಮುದ್ದಿನ ಪ್ರಾಣಿಗಳನ್ನು ಸೇರಿಸಿಕೊಂಡು ಸಂಭ್ರಮಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X