ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದ್ರೋಳಿ ದೇವಾಲಯದಲ್ಲಿ ಮಂಗಳೂರು ದಸರಾ ವೈಭವಕ್ಕೆ ಚಾಲನೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 21 : ಕರಾವಳಿ ನಗರಿ ಮಂಗಳೂರಿನಲ್ಲೂ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರದ ಕುದ್ರೋಳಿ ಗೋಕರ್ಣನಾಧೇಶ್ವರ ಕ್ಷೇತ್ರದಲ್ಲಿ ಶಕ್ತಿಯ ಪ್ರತೀಕವಾದ ನವದುರ್ಗೆಯರ ಪ್ರತಿಷ್ಟಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಬುಧವಾರ ಚಾಲನೆ ದೊರೆತಿದೆ.

ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಡಲ ತಡಿಯ ಮಂಗಳೂರಿನಲ್ಲಿ ಈಗ ನವರಾತ್ರಿ ಉತ್ಸವದ ಸಡಗರ.

Mangaluru Dasara celebrations to a grand start at Kudroli Temple

ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಪುಣ್ಯಾಹ ಹೋಮ, ನವಕಲಶಾಭಿಷೇಕದ ಬಳಿಕ ಶಕ್ತಿಯ ಪ್ರತೀಕವಾದ ನವದುರ್ಗೆಯರೊಂದಿಗೆ ಶಾರದಾ ದೇವಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿ ಮಂಗಳೂರಿನ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಮಂಗಳೂರು ದಸರಾದ ವಿಶಿಷ್ಟ ಆಕರ್ಷಣೆ ನವದುರ್ಗೆಯರ ಪ್ರತಿಷ್ಟಾಪನೆ, ಮಂಗಳೂರಿನ ಕುದ್ರೋಳಿ ದೇವಾಲಯದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಿದೆ.

Mangaluru Dasara celebrations to a grand start at Kudroli Temple

ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧಿಸಲ್ಪಡುತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಇಂದಿನಿಂದ ಸಪ್ಟೆಂಬರ್30 ವರೆಗೆ ನಡೆಯುವ ಈ ನವರಾತ್ರಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಈ ಮಂಗಳೂರು ದಸರಾ ಉತ್ಸವನ್ನುಕಣ್ತುಂಬಿಕೊಳ್ಳುತ್ತಾರೆ.

English summary
Mangalore Dasara, or Navaratri, one of the most keenly-awaited festivals of the coastal district, began on a grand note at Kudroli Shree Gokarnanatheshwara Temple here on Thursday September 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X