ವಿಜಯದಶಮಿ 2021: ಮಹತ್ವ ಹಾಗೂ ಇತಿಹಾಸ
ನವರಾತ್ರಿಗಳಲ್ಲಿ ವಿಜಯದಶಮಿ ಕೂಡ ಒಂದು, ವಿಜಯದಶಮಿ ರಾಮ ರಾವಣನೊಂದಿಗೆ ಯುದ್ಧ ಮಾಡಿ ವಿಜಯಿಯಾದ ದಿನ, ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನ. ಪಾಂಡವರು ಶತ್ರುಗಳನ್ನು ಮಣಿಸಿದ ದಿನ. ದಸರೆಯ ಕೊನೆಯ ದಿನ, ವಿಜಯದಶಮಿ ಕುರಿತು ಪೌರಾಣಿಕ, ಐತಿಹಾಸಿಕ ಕಥೆಗಳಿವೆ.
ತಾಯಿ ದುರ್ಗೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ, ಮಹಿಷಾಸುರ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹರಿಸಿ ವಿಜಯೋತ್ಸವ ಸಾಧಿಸಿದ ದಿನವೇ ವಿಜಯದಶಮಿ. ದೇವಾನುದೇವತೆಗಳಿಗೆ ವಿಜಯ ತಂದು ಕೊಟ್ಟ ವಿಜಯದಶಮಿ ರಾಜ-ಮಹಾರಾಜರ ಪಾಲಿಗೂ ಅದೃಷ್ಟದ ದಿನ ಎಂದೇ ಹೇಳಬಹುದು.
ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ.

ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು.
ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ "ದಶ ಹರ" ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.
ವಿಜಯದಶಮಿ ಆಚರಣೆಗಳು: ಉತ್ತರ ಭಾರತದಲ್ಲಿ ಆಶ್ವಯುಜ ಮಾಸದ ಮೊದಲ ದಿನದಂದು ಬಾರ್ಲಿ ಬೀಜಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡುತ್ತಾರೆ. ವಿಜಯದಶಮಿಯ ದಿನ ಮೊಳಕೆಗಳು ಬಂದಿರುವ ಈ ಬಾರ್ಲಿಗಳನ್ನು ತೆಗೆದುಕೊಂಡು ಹೋಗಿ ನೆಡುತ್ತಾರೆ. ಅವರ ಪ್ರಕಾರ ಇವು ಅದೃಷ್ಟವನ್ನು ತರುವ ಸಸಿಗಳಾಗಿರುತ್ತವೆಯಂತೆ. ಇವನ್ನು "ನೊರಾತ್ರಗಳು" ಎಂದು ಕರೆಯುತ್ತಾರೆ. ಅಂದರೆ, ಒಂಬತ್ತು ರಾತ್ರಿಯಷ್ಟು ವಯಸ್ಸಾದವು ಎಂದು ಹೆಸರು.
ನವರಾತ್ರಿ ಪರಾಕಾಷ್ಠೆ: ಸ್ಕಂದ ಪುರಾಣದ ಪ್ರಕಾರ ಆದಿಶಕ್ತಿಯು ಮಹಿಷಾಸುರನ ಆರ್ಭಟಕ್ಕೆ ಅಂತ್ಯವಾಡಲು ನಿರ್ಧರಿಸಿ. ಅವನೊಂದಿಗೆ ಹೋರಾಟಕ್ಕೆ ಇಳಿದಳು. ಆಗ ಆ ಮಹಾಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು.
ಹತ್ತನೆಯ ದಿನ ಆತ ಆ ತಾಯಿಯ ಎದುರು ತನ್ನ ಪೌರುಷ ತಡೆಯದೆ ಹತನಾದನು. ಅದೇ ನೆನಪಿಗೆ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ತನ್ನ ಮಕ್ಕಳನ್ನು ಕಾಪಾಡಲು ಮತ್ತು ಅವರ ಸಂಕಟವನ್ನು ನಿವಾರಿಸಲು ಆ ತಾಯಿ ಅವತಾರ ಎತ್ತಿ ಬಂದು ಹೋರಾಡಿದ ನೆನಪಿಗೆ ನಾವು ಈ ಹಬ್ಬವನ್ನು ಆಚರಿಸುತ್ತೇವೆ.
ಶಮಿ ವೃಕ್ಷ ಪೂಜಾಫಲ:
21 ದಿನ ಶಮೀ ವೃಕ್ಷ ಪೂಜಿಸಿದ್ರೆ ದುಷ್ಟ ಶಕ್ತಿಗಳ ಕಾಟ ದೂರ
ಪಾಪ ಪರಿಹಾರ
ಶಮೀ ಪೂಜೆಯಿಂದ ಶತ್ರುಗಳ ನಾಶ
ಮನುಷ್ಯನ ಅಂತರಂಗ, ಬಹಿರಂಗದ ಶುದ್ಧಿ
48 ದಿನ ಶಮೀ ವೃಕ್ಷ ಪೂಜಿಸಿದ್ರೆ ವಿವಾಹ ಭಾಗ್ಯ
ಅಕಾಲ ಮೃತ್ಯು ದೋಷ ಪರಿಹಾರ
ಮನೆಯಲ್ಲಿ ಶಾಂತಿ, ನೆಮ್ಮದಿ
ಬನ್ನಿ ಪೂಜೆಯಿಂದ ಮನೆಯಲ್ಲಿ ಲಕ್ಷ್ಮೀ ವಾಸ
ಬನ್ನಿ ಪೂಜಿಸಿದರೆ ದೇವಾನುದೇವತೆಗಳ ಆಶೀರ್ವಾದ
ನಕಾರಾತ್ಮಕ ಶಕ್ತಿಗಳು ದೂರ
ಶಮೀ ಪೂಜೆ, ಪ್ರದಕ್ಷಿಣೆಯಿಂದ ದೈಹಿಕ, ಮಾನಸಿಕ ದೋಷ ಪರಿಹಾರ
ಆರೋಗ್ಯದ ದೃಷ್ಟಿಕೋನ ಇಟ್ಟುಕೊಂಡೇ ನಮ್ಮ ಪೂರ್ವಿಕರು ಕೆಲವು ಗಿಡ ಮರಗಳನ್ನು ಆಧ್ಯಾತ್ಮಿಕ ಚೌಕಟ್ಟಿಗೆ ತಂದಿದ್ದಾರೆ. ಹೀಗಾಗೇ ಇಂತಹ ಪೂಜೆಗಳನ್ನು ಮೂಢನಂಬಿಕೆ ವ್ಯಾಪ್ತಿಗೆ ತರದೇ, ನಿಜವಾದ ಅರ್ಥವನ್ನು ಅರಿತು ಆಚರಣೆ ಮಾಡಿದ್ರೆ ಖಂಡಿತ ಮನುಕುಲದ ಉದ್ಧಾರವಾಗುತ್ತೆ ಎಂದು ಹೇಳಲಾಗುತ್ತದೆ.
ವಿಜಯದಶಮಿ ಆಚರಣೆ:
ಆಶ್ವಯುಜ ಶುಕ್ಲ ದಶಮಿಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿಯ ನಂತರದ ದಿನವಾಗಿದ್ದು ಹಾಗಾಗಿ ಇದನ್ನು ನವರಾತ್ರಿಯ ಸಮಾಪ್ತಿ ದಿನವೆಂದು ಪರಿಗಣಿಸುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧ ಪೂಜೆ ಮಾಡಲಾಗುತ್ತದೆ.












Click it and Unblock the Notifications