ದಸರಾ ವಿಶೇಷ: ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಹಾರಾಟ!

Written By: Ramesh
Subscribe to Oneindia Kannada

ಬೆಂಗಳೂರು,ಅ.01 : ಮೈಸೂರು ದಸರಾ ನೋಡ ಬಯಸುವವರಿಗೆ ಪ್ರವಾಸೋದ್ಯಮ ಇಲಾಖೆ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳಲು 'ಆಕಾಶ ಅಂಬಾರಿ' ಹೆಸರಿನ ವಿಮಾನ ಸೇವೆಯನ್ನು ಪ್ರವಸೋದ್ಯಮ ಇಲಾಖೆ ಆರಂಭಿಸಿದೆ.

ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಆಕಾಶ ಅಂಬಾರಿ ಸೇವೆಗೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಅದೇ ವಿಮಾನದಲ್ಲಿ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದರು. ಇಂದಿನಿಂದ ಅಕ್ಟೋಬರ್ 15 ರ ತನಕ ಸೀಟುಗಳ ವಿಮಾನ ಬೆಂಗಳೂರು-ಮೈಸೂರು ನಡುವೆ ಹಾರಾಟ ನಡೆಸಲಿದೆ. 4ಸಾವಿರ ರೂ.ಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಬಹುದಾಗಿದೆ.

Flight

ಪ್ರವಾಸೋದ್ಯಮ ಇಲಾಖೆ ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಆಕರ್ಷಿಸಲು 'ಆಕಾಶ ಅಂಬಾರಿ' ಹೆಸರಿನಲ್ಲಿ ವಿಮಾನ ಸೇವೆ ಆರಂಭಿಸಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ 8 ಸೀಟುಗಳ ಎರಡು ವಿಮಾನಗಳು ಅಕ್ಟೋಬರ್ 1 ರಿಂದ 15ರ ತನಕ ದಿನಕ್ಕೆ ಎರಡು ಬಾರಿ ಸಂಚಾರ ನಡೆಸುತ್ತವೆ.

ಬೆಂಗಳೂರು-ಮೈಸೂರು ನಡುವೆ ಯಾವುದೇ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ದಸರಾಕ್ಕೆ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಎರಡೂ ನಗರಗಳ ನಡುವೆ 15 ದಿನಗಳ ಕಾಲ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಪ್ರಯಾಣ ದರ 4 ಸಾವಿರ ರೂ.ಗಳು. ಹಾಗಿದ್ದರೆ ಇನ್ನೇಕೆ ತಡ ವಿಮಾನದಲ್ಲಿ ಹಾರಿ ದಸರಾ ವೈಭವವನ್ನು ಕಣ್ತುಂಬಿಸಿಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister Siddaramaiah inaugurated the special Dasara flight service "Akasha Ambari" today. The eight-seater aircraft will fly between Bengaluru and Mysuru during the Dasara festival Days.
Please Wait while comments are loading...