ದಸರಾ : ಮೈಸೂರಿನಿಂದ ಕೊಲ್ಕತಾಗೆ ವಿಶೇಷ ರೈಲು

ಮೈಸೂರಿನಿಂದ ಸೆಪ್ಟೆಂಬರ್ 29ರಂದು ಹೊರಡುತ್ತಿರುವ ವಿಶೇಷ ರೈಲು ಬೆಂಗಳೂರು, ಚೆನ್ನೈ ಮುಖಾಂತರ ಕೊಲ್ಕತಾವನ್ನು ತಲುಪುತ್ತಿದೆ. ಜೊತೆಗೆ ಸುತ್ತಮುತ್ತಲಿನ ಆಕರ್ಷಕ ತಾಣಗಳಾದ ಡಾರ್ಜಿಲಿಂಗ್, ಗಾಂಗ್ಟೊಕ್, ಪುರಿ ಮತ್ತು ಕೋನಾರ್ಕ್ ಗಳನ್ನು ಸಂದರ್ಶಿಸುವ ವ್ಯವಸ್ಥೆಯನ್ನೂ ಮಾಡಿದೆ.
10 ರಾತ್ರಿ ಮತ್ತು 11 ದಿನಗಳ ಈ ಪ್ರವಾಸಕ್ಕಾಗಿ ಪ್ರತಿಯೊಬ್ಬನಿಗೆ ರು.11,750 ನಿಗದಿಪಡಿಸಲಾಗಿದೆ. ಟೂರನ್ನು ಬುಕ್ ಮಾಡಿದವರಿಗೆ 5,000 ರು.ಗಳ ವಿಶೇಷ ಗಿಫ್ಟ್ ವೋಚರನ್ನು ಕೂಡ ರೈಲ್ವೆ ಇಲಾಖೆ ನೀಡುತ್ತಿದೆ. ಬುಕ್ಕಿಂಗ್ ಮಾಡಲಿಚ್ಛಿಸುವವರು http://www.railtourismindia.com/ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ದಸರಾದಲ್ಲಿ ಭಾಗವಹಿಸಿದ ನಂತರ ನೋಡತಕ್ಕಂತ ಸ್ಥಳಗಳ ವಿವರ, ರೈಲ್ವೆ ಇಲಾಖೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳ ವಿವರ ಮೇಲೆ ತಿಳಿಸಿದ ಅಂತರ್ಜಾಲ ತಾಣದಲ್ಲಿದೆ. ಆದರೆ, ಮೈಸೂರಿನಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ದಸರಾ ಬಗ್ಗೆ ಇಲಾಖೆ ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ.
ಹೆಚ್ಚಿನ ವಿವರಗಳಿಗೆ ಫೋನಾಯಿಸಿ : ಮೈಸೂರು (9731647952), ಬೆಂಗಳೂರು (080-22960014, 09741435809), ಚೆನ್ನೈ (044-64594959, 09003140657) ಮತ್ತು ಕೊಚ್ಚಿ (0484-6464849).












Click it and Unblock the Notifications