ವೀರನಹೊಸಹಳ್ಳಿಯಿಂದ ಮೈಸೂರಿಗೆ ಗಜಪಯಣ

Elephants begin journey towards Mysore
ಮೈಸೂರು, ಆ. 9 : ಹುಣಸೂರು ತಾಲೂಕಿನ ವೀರಸಹೊಸಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಗಳಿಗೆ ಸಾಂಪ್ರದಾಯಿಕ ಪೂಜೆ ಪುನಸ್ಕಾರ ಮಾಡಿ ಗಣ್ಯರು ಪುಷ್ಪವೃಷ್ಟಿಗೈದು ಮೈಸೂರಿಗೆ ಬೀಳ್ಕೊಡುವುದರೊಂದಿಗೆ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕ ಜಗದ್ವಿಖ್ಯಾತ ಮೈಸೂರು ದಸರಾ ಚಟುವಟಿಕೆಗಳು ಆರಂಭಗೊಂಡಿವೆ.

ಮೈಸೂರು ದಸರಾದ ರೂವಾರಿಗಳು ಆನೆಗಳೇ ಆಗಿರುವುದರಿಂದ ಅವುಗಳನ್ನು ಎರಡು ತಂಡವಾಗಿ ವಿವಿಧ ಸಾಕಾನೆ ಶಿಬಿರಗಳಿಂದ ತರಲಾಗುತ್ತಿದ್ದು, ವೀರನಹೊಸಹಳ್ಳಿಯಲ್ಲಿ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಬಲರಾಮ ನೇತೃತ್ವದ ತಂಡಕ್ಕೆ ಸಕಲ ಗೌರವಗಳೊಂದಿಗೆ ಬೀಳ್ಕೊಡುವುದು ಹಿಂದಿನಿಂದಲೂ ನಡೆದು ಬಂದಿದೆ.

ಅದರಂತೆ ಬೆಳಿಗ್ಗೆ 11 ಗಂಟೆಗೆ ಬಲರಾಮ ನೇತೃತ್ವದ ಅಭಿಮನ್ಯು, ಮೇರಿ, ಸರಳ, ಅರ್ಜುನ, ಗಂಗಾರನ್ನೊಳಗೊಂಡ ಗಜಪಡೆಯ ಪಯಣಕ್ಕೆ ಚಾಲನೆ ನೀಡಲಾಯಿತು. ಸಮವಸ್ತ್ರ ಧರಿಸಿದ ಮಾವುತರು ಹಾಗೂ ಗಜಪಡೆಯ ಪಯಣದಲ್ಲಿ ಕಂಸಾಳೆ, ಡೊಳ್ಳುಕುಣಿತ, ವೀರಗಾಸೆಯನ್ನೊಳಗೊಂಡ ಜಾನಪದ ತಂಡಗಳ ಕಲಾ ಪ್ರದರ್ಶನ ಗಮನಸೆಳೆಯಿತು.

ಈ ಸಂದರ್ಭ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್‌ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಎಚ್.ವಿಶ್ವನಾಥ್, ಗೃಹಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ವಸ್ತ್ರದ್, ವಿಧಾನಪರಿಷತ್ ಸದಸ್ಯ ಚಿಕ್ಕಮಾದು, ಜಿ.ಪಂ.ಅಧ್ಯಕ್ಷೆ ಸುನೀತ ವೀರಪ್ಪಗೌಡ, ಸಿಇಓ ಸತ್ಯವತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ವೀರನಹೊಸಳ್ಳಿಯಿಂದ ಹೊರಟ ಗಜಪಡೆ ಮೈಸೂರನ್ನು ತಲುಪಲಿದ್ದು, ಆಗಸ್ಟ್ 11ರಂದು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ಬಳಿಕ ದಸರಾ ತಾಲೀಮು ದಿನನಿತ್ಯ ನಡೆಯಲಿದೆ. ಶ್ರೀರಾಮ, ಕಾಂತಿ, ಕೋಕಿಲ, ಹರ್ಷ, ವಿಕ್ರಮಗಳನ್ನೊಳಗೊಂಡ ಇನ್ನೊಂದು ಗಜಪಡೆಯು ಸೆಪ್ಟಂಬರ್‌ನಲ್ಲಿ ಮೈಸೂರಿಗೆ ಆಗಮಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+