Get Updates
Get notified of breaking news, exclusive insights, and must-see stories!

ದಸರಾಕ್ಕೆ ಹೆಗ್ಗಡೆ ಅವರ ವಿಂಟೇಜ್ ಕಾರುಗಳು

Veerendra Heggade's vinatage car for Mysore Dasara 2010
ಮೈಸೂರು, ಸೆ.23:ದಸರಾ ಮಹೋತ್ಸವ ಆಚರಣೆ ಅಂಗವಾಗಿ ವಿಂಟೇಜ್ ಕಾರ್ ರ‌್ಯಾಲಿಯನ್ನು ವ್ಯವಸ್ಥೆ ಮಾಡಲಾಗುತ್ತಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಂಗ್ರಹದಲ್ಲಿರುವ ವಿಂಟೇಜ್ ಕಾರ್ ಅನ್ನು ಈ ರ‌್ಯಾಲಿಗಾಗಿ ನೀಡಲು ಒಪ್ಪಿದ್ದಾರೆ ಎಂದರು.

ದಸರಾ ಸಿದ್ಧತೆ ಕುರಿತು ವಿವಿಧ ಅಧಿಕಾರಿಗಳ ಜತೆ ಚರ್ಚಿಸಿದ ಅವರು, ದಸರಾ ಮಹೋತ್ಸವ ಆಚರಣೆ ಆರಂಭವಾಗಿ 400 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಬೆಳ್ಳಿ ನಾಣ್ಯ ಹಾಗೂ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.

ವೇದಿಕೆ ನಿರ್ಮಾಣ, ಶಾಮಿಯಾನ, ಮತ್ತಿತರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿಧ ಕೆಲಸಗಳಿಗೆ ಏಜೆನ್ಸಿ ಗುರುತಿಸಲಾಗಿದೆ. ವಿವಿಧ ಸಮಿತಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಏಜೆನ್ಸಿಗಳಿಂದ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಸರಾ ಪಾಸ್ ಹಾಗೂ ಟೆಕೆಟ್‌ಗಳ ನಕಲು ಮಾಡುವುದನ್ನು ತಪ್ಪಿಸಲು ಬಾರ್‌ಕೋಡಿಂಗ್ ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ನೀಡುವ ಗುರುತು ಚೀಟಿ ಸೇರಿ ಬಾರ್ ಕೋಡಿಂಗ್ ಬಳಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಸರಾ ಪೂರ್ವ ಪ್ರಚಾರಕ್ಕಾಗಿ ಕಲಾ ತಂಡಗಳನ್ನು ಒಳಗೊಂಡ ವಿಶೇಷ ವಾಹನ ಸಿದ್ಧಪಡಿಸಲಾಗುತ್ತಿದೆ, ಇವು ಮೈಸೂರು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಸಂಚರಿಸಿ ದಸರಾ ವಾತಾವರಣ ಮೂಡಿಸುವಲ್ಲಿ ನೆರವಾಗಲಿವೆ. ವಿವಿಧ ಉಪಸಮಿತಿಗಳು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುತ್ತಿವೆ ಎಂದು ಹರ್ಷಗುಪ್ತ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+