37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg547948ದಸರಾ ಹಬ್ಬಸೆ. 15ರೊಳಗೆ ಮೈಸೂರು ವಿಮಾನ ನಿಲ್ದಾಣ/news/2009/08/06/mysore-airport-to-be-operational-by-sept-15-bsy.htmlಮೈಸೂರು, ಆ. 6 : ಮೈಸೂರು ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದಿಲ್ಲಿ ಸೂಚಿಸಿದರು. ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಈ ವರ್ಷದ ದಸರಾ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣ ಸಜ್ಜುಗೊಂಡು ಪ್ರವಾಸಿಗರಿಗೆ ವಿಮಾನಯಾನ ಸೇವೆ 38455http://kannada.oneindia.com/img/2009/08/06-bsy-mysore-airport-meet1.jpg547948ದಸರಾ ಹಬ್ಬದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ/festivals/dasara/2009/0811-mysore-readies-itself-for-gajapayana-aug13.htmlಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ 38567http://kannada.oneindia.com/img/2009/08/11-elephant-balarama1.jpg547948ದಸರಾ ಹಬ್ಬದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ/festivals/dasara/2009/0831-dasara-govt-extends-invitation-to-wodeyar.htmlಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಅಲ್ಲದೇ 38937http://kannada.oneindia.com/img/2009/08/31-wodeyar-shobha1.jpg547948ದಸರಾ ಹಬ್ಬರವಿಶಂಕರ್ ಗುರೂಜಿಯಿಂದ ದಸರಾ ಉದ್ಘಾಟನೆ/festivals/dasara/2009/0902-ravishankar-guruji-to-inaugurate-dasara-2009.htmlಮೈಸೂರು, ಸೆ. 2 : ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಬಾ ಕರಂದ್ಲಾಜೆ ತಿಳಿಸಿದರು. ನಗರದ ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮತ್ತು ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದ ನಂತರ ಮಾಧ್ಯಮ 38959http://kannada.oneindia.com/img/2009/09/02-ravishankar2.jpg547948ದಸರಾ ಹಬ್ಬದಸರಾ ಹಬ್ಬ : ಖಾಸಗಿ ಪ್ರಾಯೋಜಕತ್ವಕ್ಕೆ ಅಸ್ತು/festivals/dasara/2009/0906-private-sponsorship-for-dasara-manivannan.htmlಮೈಸೂರು, ಸೆ. 6 : ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಸರಕಾರದ ಅನುದಾನದ ಜೊತೆಗೆ ಖಾಸಗಿ ಪ್ರಾಯೋಜಕರನ್ನು ಆಹ್ವಾನಿಯಲಾಯಿತು. ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿವಿಧ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಅಹ್ವಾನ ನೀಡಿದರು. ದಸರಾ ಅಂಗವಾಗಿ ನಡೆಯಲಿರುವ ಅರಮನೆ ಕಾರ್ಯಕ್ರಮ, ಯುವ ದಸರಾ, ಕ್ರೀಡಾಕೂಟ, ಗ್ರಾಮೀಣ ದಸರಾ ಸೇರಿದಂತೆ 39030http://kannada.oneindia.com/img/2009/09/06-manivannan-mysore-dc.jpg208257ಶೋಭಾ ಕರಂದ್ಲಾಜೆಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ/movies/headlines/2009/02/09-kannada-film-industry-amrutha-mahotsava.htmlಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 1ರಿಂದ 3ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಅಮೃತ ಘಳಿಗೆಯನ್ನು ಅವಿಸ್ಮರಣೀಯವಾಗಿಸಲು ಕರ್ನಾಟಕ ಸರ್ಕಾರದೊಂದಿಗೆ ಉದಯ ವಾಹಿನಿ ಮತ್ತು ಸನ್ ಫೀಸ್ಟ್ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ಕೆಎಫ್ ಸಿಸಿ ಅಧ್ಯಕ್ಷೆ 34555http://kannada.oneindia.com/img/2009/02/09-jayamala-kfcc1e.jpg208257ಶೋಭಾ ಕರಂದ್ಲಾಜೆಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg208257ಶೋಭಾ ಕರಂದ್ಲಾಜೆಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ /news/2009/05/08/karnataka-cabinet-approves-amendments-to-kcoca-act.htmlಬೆಂಗಳೂರು, ಮೇ. 8 : ಇತ್ತೀಚೆಗೆ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ತರಲು ನಿರ್ಧರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ಒಪ್ಪಿಗೆ ದೊರೆತಿದ್ದು, ಕೋಕಾ ಕಾಯ್ದೆಯನ್ನು ಜಾರಿಗೆ ತರಲು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 36495http://kannada.oneindia.com/img/2009/05/08-shobha-karandlaje1e.jpg208257ಶೋಭಾ ಕರಂದ್ಲಾಜೆಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ /news/2009/06/07/minister-shobha-offers-to-step-down-mysore.htmlಬೆಂಗಳೂರು, ಜೂ. 7 : ಸರಕಾರದೊಳಗೆ ಎದ್ದಿರುವ ಆಂತರಿಕ ಭಿನ್ನಮತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಶೋಭಾ ಅವರ ಮಾತನ್ನು ನಿರಾಕರಿಸಿದ್ದು, ಶೋಭಾ ಅವರನ್ನೇ ಮುಂದುವರೆಸಿ ಶಾಸಕ ಎಸ್ ರಾಮದಾಸ್ ಸಿಎಂ 37176http://kannada.oneindia.com/img/2009/06/07-shobha-karandlaje3e.jpg208257ಶೋಭಾ ಕರಂದ್ಲಾಜೆಮೈಸೂರಲ್ಲಿ ಗಂಡಸರಿಲ್ವೆ ವಿಶ್ವನಾಥ್ ಪ್ರಶ್ನೆ/news/2009/06/08/vishwanath-slams-mysuru-incharge-minister.htmlಮೈಸೂರು, ಜೂ. 8 : ಮೈಸೂರಿನ ಆಡಳಿತ ನಡೆಸಲು ಗಂಡಸರು ಯಾರೂ ಇಲ್ವಾ ? ಹೀಗೆ ರಾಜ್ಯ ಸರಕಾರಕ್ಕೆ ಖಾರವಾಗಿ ಪ್ರಶ್ನಿಸಿದವರು ಮೈಸೂರು ಸಂಸದ ಎಚ್ ವಿಶ್ವನಾಥ್ ಅವರು. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಪ್ಪ ಸಾಕು ಅನ್ನಿಸಿದೆ. ಮೇಡಂ ಬೇಡ ಅಂದರೆ ಸಿಎಂ ಇರಲೇಬೇಕು ಎನ್ನುತ್ತಿದ್ದಾರೆ. ಏಕೆ ಮೈಸೂರಿನಲ್ಲಿ ಆಡಳಿತ ನಡೆಸುವ 37181http://kannada.oneindia.com/img/2009/06/08-vishwanath-h2.jpgnews"> ದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ | Mysore | Dasara Festival | Gaja payana | Shobha Karandlaje | P Manivannan| ದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ - Kannada Oneindia

ದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ

ಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.

ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದು ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್ ಎ ರಾಮದಾಸ್, ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಪುರುಷೋತ್ತಮ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಎನ್ ಸಿದ್ದಾರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಗಜಪಯಣ ಸಮಾರಂಭವನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್ ಅವರನ್ನು ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಟಿಬೆಟಿಯನ್ ನೃತ್ಯ, ಬುಡಕಟ್ಟು ನೃತ್ಯ, ಹುಣಸೂರು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ತಿಳಿಸಲಾಯಿತು.

ಮಾರ್ಗಮಧ್ಯದಲ್ಲಿ ಸ್ವಾಗತ ಕಮಾನುಗಳನ್ನು ಹಾಕುವುದು, ಸಮಾರಂಭದ ಸ್ಥಳದಿಂದ 1 ಕಿ.ಮೀ.ವರೆಗೆ ಧ್ವಜಸ್ಥಂಭಗಳನ್ನು ಹಾಕುವುದು, ರಂಗೋಲಿ, ತಳಿರು ತೋರಣಗಳಿಂದ ಗಜಪಯಣ ಆರಂಭದ ಮಾರ್ಗಗಳನ್ನು ಅಲಂಕರಿಸುವುದರ ಮೂಲಕ ಸಮಾರಂಭವನ್ನು ವರ್ಣರಂಜಿತವಾಗಿ ಏರ್ಪಡಿಸಲು ತಿಳಿಸಲಾಯಿತು. ನೃತ್ಯ ಕಾರ್ಯಕ್ರಮ ನೀಡುವ ಬುಡಕಟ್ಟು ಬಾಲಕ ಬಾಲಕಿಯರು ಹಾಗೂ ಟಿಬೆಟಿಯನ್ ಕಲಾವಿದರೆಲ್ಲರಿಗೂ ಹೊಸ ಉಡುಪುಗಳನ್ನು ದಸರಾ ಸಮಿತಿಯಿಂದಲೇ ನೀಡಲು ಯತೀಶ್‌ಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಆಗಸ್ಟ್ 15 ರಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬೆಳಿಗ್ಗೆ 11.30 ಕ್ಕೆ ಮೈಸೂರಿನಲ್ಲಿ ಆನೆಗಳನ್ನು ಸ್ವಾಗತಿಸುವ ಕಾರ್ಯಕ್ರಮವಿದ್ದು, ಅರಮನೆ ಮಂಡಳಿ ಉಪನಿರ್ದೇಶಕ ಅವರಾದಿ ಅವರು ಈ ಬಗ್ಗೆ ಸಕಲ ಏರ್ಪಾಡು ಮಾಡಿಕೊಳ್ಳಬೇಕೆಂದು ತಿಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಬೆಟ್ಟಸೂರ ಮಠ, ಡಿಸಿಎಫ್ ಕಾಂತರಾಜು, ನಾಗರಹೊಳೆ ಪುನರ್ವಸತಿ ಕೇಂದ್ರದ ಎಂ ಬಿ ಪ್ರಭು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಮೊದಲ ತಂಡದ ಆನೆಗಳ ಪರಿಚಯ:

ಬಲರಾಮ

ಗಂಡು, ವಯಸ್ಸು 51. ಎತ್ತರ 2.7 ಮೀಟರ್, ಉದ್ದ 3.77 ಮೀಟರ್, ಅಂದಾಜು ತೂಕ 4900 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ತಿತಿಮತಿ ಆನೆ ಶಿಬಿರಕ್ಕೆ ಸೇರಿದೆ. ಈ ಆನೆಯ ತುಂಬಾ ಸೌಮ್ಯ ಸ್ವಭಾವದಾಗಿದ್ದು, ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆಯು ತುಂಬಾ ಬಲಶಾಲಿಯಾಗಿದೆ. ಸುಮಾರು 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿ. ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಕಳೆದ 10 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುತ್ತಿದೆ. ಈ ಬಾರಿಯೂ ಕೂಡ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಅಭಿಮನ್ಯು

ಗಂಡು, ವಯಸ್ಸು 43. ಎತ್ತರ 2.68 ಮೀಟರ್, ಉದ್ದ 3.51 ಮೀಟರ್, ಅಂದಾಜು ತೂಕ 4270 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ತಿತಿಮತಿ ಆನೆ ಶಿಬಿರಕ್ಕೆ ಸೇರಿದೆ. ಇದನ್ನು ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಸುಮಾರು 11 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ವರಲಕ್ಷ್ಮಿ

ಹೆಣ್ಣು , ವಯಸ್ಸು 54. ಎತ್ತರ 2.29 ಮೀಟರ್, ಉದ್ದ 3 ಮೀಟರ್, ಅಂದಾಜು ತೂಕ 3090 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಸುಂಕದಕಟ್ಟೆ ಶಿಬಿರಕ್ಕೆ ಸೇರಿದೆ. ಈ ಆನೆಯು ತುಂಬಾ ಸಾಧು ಸ್ವಭಾವದ್ದಾಗಿದ್ದು, ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು 6 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

ಗಜೇಂದ್ರ

ಗಂಡು, ವಯಸ್ಸು 54. ಎತ್ತರ 2.84 ಮೀಟರ್, ಉದ್ದ 3.80 ಮೀಟರ್, ಅಂದಾಜು ತೂಕ 4570 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ನಾಗರಹೊಳೆ ಆನೆ ಶಿಬಿರಕ್ಕೆ ಸೇರಿದೆ. ಇದನ್ನು 1982ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಬಲಿಷ್ಠವಾಗಿರುತ್ತದೆ. ಈ ಆನೆಯು ಸುಮಾರು 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಇದು ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ಅರ್ಜುನ

ಗಂಡು, ವಯಸ್ಸು 49. ಎತ್ತರ 2.80 ಮೀಟರ್, ಉದ್ದ 3.75 ಮೀಟರ್, ಅಂದಾಜು ತೂಕ 4750 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಬಳ್ಳೆ ಆನೆ ಶಿಬಿರಕ್ಕೆ ಸೇರಿದೆ. ಈ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಒಂದು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುತ್ತದೆ.

ಸರಳ

ಹೆಣ್ಣು, 67 ವರ್ಷಗಳು. ಎತ್ತರ 2.46 ಮೀಟರ್, ಉದ್ದ 3.34 ಮೀಟರ್, ಅಂದಾಜು ತೂಕ 3250 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಸುಂಕದಕಟ್ಟೆ ಆನೆ ಶಿಬಿರಕ್ಕೆ ಸೇರಿದೆ. ಇದನ್ನು 1968ರಲ್ಲಿ ಖೆಡ್ಡಾದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ಈ ಆನೆಯು ಸುಮಾರು 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+