ತಣ್ಣಗಾದ ಅರಮನೆ ವಿವಾದ!
*ವರದರಾಜ ಬಾಣಾವರ
ಜನತಾದಳ ಸರಕಾರ ಇದ್ದಾಗ ಮೈಸೂರು ಅರಮನೆಯನ್ನು ಸ್ವಾಧೀನಪಡಿಸಿಕೊಳ್ಳುವ ವಿಧೇಯಕ ರೂಪಿಸಿ, ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿತು. ಇದರ ವಿರುದ್ಧ ರಾಜವಂಶಸ್ಥರಾದ ಕಾಂಗ್ರೆಸ್‌ಪಕ್ಷದ ಲೋಕಸಭಾ ಸದಸ್ಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಈ ಮಧ್ಯೆ ಹಿಂದಿನ ವರ್ಷದ ದಸರಾ ನಂತರ ರಾಜ್ಯ ಸರಕಾರದ ಸೂತ್ರ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. ಇದರಿಂದ ಈ ವಿವಾದ ಸಧ್ಯಕ್ಕೆ ತಣ್ಣಗಾದಂತಿದೆ.
ಬಕಿಂಗ್‌ಹ್ಯಾಮ್ ಮಾದರಿ ಟ್ರಸ್ಟ್ : ಈಗಿನ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಅವರು ಮೈಸೂರು ಅರಮನೆಯ ನಿರ್ವಹಣೆಗೆ ಬಕಿಂಗ್‌ಹ್ಯಾಮ್ ಅರಮನೆ ಮಾದರಿಯ ಟ್ರಸ್ಟ್ ರಚಿಸುವುದಾಗಿ ಹೇಳಿದ್ದರೂ ಸಹ ಪ್ರಸ್ತುತ ಈ ವಿಷಯವೂ ಹಿಂದೆ ಸರಿದಿದೆ.
ಶ್ರೀಕಂಠದತ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಆದ್ದರಿಂದ ರಾಜ್ಯ ಸರಕಾರವೂ ಹಿಂದಿನ ಜನತಾದಳ ಸರಕಾರದಂತೆ ಕಠೋರವಾಗಿ ವರ್ತಿಸಲು ಹೋಗಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ವಿಶ್ವನಾಥ್ ಅವರು ದಸರಾ ಆನೆಗಳ ಮೊದಲ ತಂಡವನ್ನು ಸ್ವಾಗತಿಸುವ ದಿವಸ ಒಡೆಯರ್ ಅವರನ್ನು ಭೇಟಿ ಮಾಡಿ ಫಲ-ತಾಂಬೂಲದೊಂದಿಗೆ 3 ಲಕ್ಷ ರುಪಾಯಿಗಳ ಚಕ್ ನೀಡಿ ದಸರೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದ್ದಾರೆ. ಒಡೆಯರ್ ಇದಕ್ಕೆ ಸಮ್ಮತಿಸಿದ್ದಾರೆ.
ಸಾರ್ವಜನಿಕರ ಭೇಟಿ: ಒಡೆಯರ್ ದಿನಚರಿ ಈ ಬಾರಿ ಒಡೆಯರ್ ಅವರು ಸಂಸದರಾದ ನಂತರ ಕಾಲುನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಹೀಗಾಗಿ ಕೆಲವು ತಿಂಗಳು ಸಾರ್ವಜನಿಕರ ಭೇಟಿ ಲಭ್ಯ ಇರಲಿಲ್ಲ. ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಕಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಅರಮನೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾರ್ವಜನಿಕರನ್ನು ಭೇಟಿ ಮಾಡುತ್ತಾರೆ. ಆದರೆ ಎಲ್ಲರಿಗೂ ಭೇಟಿ ಆಗುವ ಅವಕಾಶ ಸಿಗುವುದಿಲ್ಲ ಹೀಗಾಗಿ ಒಡೆಯರ್ ಜನರ ಕೈಗೆ ಸಿಗುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ.
ಮುಖಪುಟ / ಮೈಸೂರು ದಸರಾ-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications