ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯಲ್ಲಿ ನಂಬರ್‌ ಹರಟೆ

By Staff
|
Google Oneindia Kannada News


ಈಶ್ವರನಿಗೆ ಎಂಟರ ನಂಟು ಎಷ್ಟು ಗೊತ್ತೇ...?
ಲಕ್ಷ್ಮಿ- ಅಷ್ಟಲಕ್ಷ್ಮಿ ರೂಪಗಳಲ್ಲಿ ಫೇಮಸ್‌. ಅಷ್ಟದಳ ಪದ್ಮ ಬರೆದೇ ಎಲ್ಲಾ ದೇವರಿಗೂ ಪೂಜೆ ಸಲ್ಲಿಸೋದು.

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ಅಷ್ಟದಳೋಪರಿವೇಷ್ಠಿತ ಲಿಂಗಂ.... ಅಂತ ಲಿಂಗಾಷ್ಟಕದಲ್ಲಿ ಕೇಳಿರಬಹುದು. ಈಶ್ವರನಿಗೆ ಎಂಟರ ನಂಟು ಬಹಳ. ಲಿಂಗಾಷ್ಟಕ, ಬಿಲ್ವಾಷ್ಟಕ, ವಿಶ್ವನಾಥಾಷ್ಟಕ... ಹೀಗೇ ಬಹಳಷ್ಟು ಶ್ಲೋಕಗಳು ಎಂಟು ಚರಣಗಳನ್ನು ಹೊಂದಿವೆ. ಬರೀ ಈಶ್ವರ ಅಷ್ಟೇ ಅಲ್ಲ, ಎಲ್ಲಾ ದೇವರಿಗೂ ಅಷ್ಟಾನೇ ಇಷ್ಟ. ಕೃಷ್ಣ ನೋಡಿ, ಹುಟ್ಟಿದ್ದೇ ಗೋಕುಲಾಷ್ಟಮಿ. ಲಕ್ಷ್ಮಿ - ಅಷ್ಟಲಕ್ಷ್ಮಿ ರೂಪಗಳಲ್ಲಿ ಫೇಮಸ್‌. ಅಷ್ಟದಳ ಪದ್ಮ ಬರೆದೇ ಎಲ್ಲಾ ದೇವರಿಗೂ ಪೂಜೆ ಸಲ್ಲಿಸೋದು. ಇರೋದು ಅಷ್ಟ ದಿಕ್ಕುಗಳು. ಅರೆ, ಮುಖ್ಯವಾದ ವಿಷಯಾನೇ ಹೇಳಲಿಲ್ಲ, ಇವತ್ತೇ ದುರ್ಗಾಷ್ಟಮಿ.

ಯಾವುದೇ ಸಾಹಸ ಮಾಡಕ್ಕೆ ಎಂಟೆದೆ ಬೇಕು ಅಂತಾರೆ. ಗಣಿತದಲ್ಲಿ ಗಣ್ಯರಾಗಕ್ಕೆ ಬೇಕೇನೋ ? ಈಗ ಎಂಟರ ವಿಸ್ಮಯ ತಿಳಿಯಕ್ಕೆ ಒಂದು ಎದೇನೇ ಸಾಕು, ಅದರಲ್ಲೇ ಅಷ್ಟು ಪ್ರೀತಿ ಇರಲಿ ಸಾಕು.

ಮೊದಲು 8ರ ಕೋಷ್ಟಕ ಬರೆಯೋಣ.

1 x 8 = 8 (0+8 = 8)
2 x 8 = 16 (1+6 = 7)
3 x 8 = 24 (2+4 = 6)
4 x 8 = 32 (3+2 = 5)
5 x 8 = 40 (4+0 = 4)
6 x 8 = 48 (4+8 = 1; 1+2 = 3)
7 x 8 = 56 (5+6 = 11; 1+1 = 2)
8 x 8 = 64 (6+4 = 10; 1+0 = 1)
9 x 8 = 72 (7+2 = 9)
10 x 8 = 80 (8+0 = 8)
11 x 8 = 88 (8+8 = 16; 1+6 = 7)
12 x 8 = 96 (9+6 = 15; 1+5 = 6)
13 x 8 = 104 (1+0+4 = 5)

............... ಮೇಲೆ ನೀವು ಗಮನಿಸಿರಬಹುದು ಎಂಟರ ಗುಣಲಬ್ಧ

ಸಂಖ್ಯೆಯ ಪ್ರತೀ ಅಂಕಿಗಳ ಮೊತ್ತ (-1) ಅಂತರದಲ್ಲಿ ಇಳಿಯುತ್ತಾ ಹೋಗುತ್ತದೆ. 9-8-7-6-5-4-3-2-1

ಹೀಗೆ ಒಂದು ವೃತ್ತ-ಸರಣಿಯಲ್ಲೇ ಸುತ್ತುತ್ತದೆ.ಇದನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡೋಣ. ಉದಾಹರಣೆಗೆ ಯಾವುದಾದರೂ ಸಂಖ್ಯೆ 22 ತೆಗೆದುಕೊಳ್ಳಿ. ಈಗ ಮೇಲಿನ ರೀತಿ ಲೆಕ್ಕ ಮಾಡೋಣ.

22 x 8 = 176 (1+7+6 = 14; 1+4 = 5)
23 x 8 = 184 (1+8+4 = 13; 1+3 = 4)
24 x 8 = 192 (1+9+2 = 12; 1+2 = 3)
25 x 8 = 200 (2+0+0 = 2)
26 x 8 = 208 (2+0+8 = 10; 1+0 = 1)
27 x 8 = 216 (2+1+6 = 9)
28 x 8 = 224 (2+2+4 = 8)
29 x 8 = 232 (2+3+2 = 7)
30 x 8 = 240 (2+4+0 = 6)
31 x 8 = 248 (2+4+8 = 14; 1+4 = 5)
32 x 8 = 256 (2+5+6 = 13; 1+3 = 4)
33 x 8 = 264 (2+6+4 = 12; 1+2 = 3)
34 x 8 = 272 (2+7+2 = 11; 1+1 = 2)
35 x 8 = 280 (2+8+0 = 10; 1+0 = 1)
36 x 8 = 288 (2+8+8 = 18; 1+8 = 9)
37 x 8 = 296 (2+9+6 = 17; 1+7 = 8)

.....

ಮತ್ತೆ 9-8-7-6-5-4-3-2-1 ಸರಣಿ ಸಿಕ್ಕಿತು ಅಲ್ವಾ ! ಹೀಗೇ ಬೇರೆ ಬೇರೆ ಸಂಖ್ಯೆಗಳಿಗೆ ಪ್ರಯತ್ನಿಸಿ ನೋಡಿ.

ಈ ಲೇಖನ ಓದಿದ ಮೇಲೆ ನಿಮಗೆ ಏನನ್ನಿಸಿತು?

ಇಷ್ಟ ಆಯ್ತಾ ಅಥವಾ ‘‘ಅಷ್ಟ’’ಕ್ಕಷ್ಟೆ ಅನ್ನಿಸ್ತಾ?


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X