ನವರಾತ್ರಿಯಲ್ಲಿ ನಂಬರ್ ಹರಟೆ
ಏನಿದು ನಂಬರ್ 5ರ ಪಂಚಾಯ್ತಿ?
ಈ 5 ಎನ್ನುವ ಅಂಕೆ, ನಮ್ಮ ಸಮಾಜದ ಎಲ್ಲಾ ಸ್ತರಗಳಲ್ಲಿ ಅಂದರೆ ಕುಟುಂಬ, ಧರ್ಮ, ರಾಜಕೀಯ, ನಿಸರ್ಗ... ಎಲ್ಲದರಲ್ಲೂ ಹಾಸುಹೊಕ್ಕಾಗಿದೆ. ಈಗ ಅಂಕಿ 5ರ ವಿಸ್ಮಯ ಗಮನಿಸೋಣ.
![]() | ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್ ಎ. [email protected] ನಮ್ಮ ಪೂಜೆ ಪುನಸ್ಕಾರ ಸಂಪ್ರದಾಯಗಳಲ್ಲಿ 5ಕ್ಕೆ ಅತ್ಯಂತ ಮರ್ಯಾದೆ. ದೇವರ ಅಭಿಷೇಕಕ್ಕೆ ಬಳಸೋದು ಪಂಚಾಮೃತ. ನೈವೇದ್ಯಕ್ಕೆ 5 ವೀಳ್ಯದೆಲೆ, 5 ಬಗೆ ಹಣ್ಣು ಹೀಗೆ. ಅಲ್ಲದೇ ಪಂಚಪಾತ್ರೆ, ಪಂಚಾರತಿ, ಪಂಚಗವ್ಯ.... ಹೀಗೇ ಅನೇಕ ಪದಗಳಿವೆ. ಊಟ ಉಪಚಾರದಲ್ಲೂ ಪಂಚಭಕ್ಷ ್ಯ ಪರಮಾನ್ನ ಅಂತಾನೆ ವರ್ಣಿಸೋದು. ಸೋದರ-ಸೋದರಿ ಬಾಂಧವ್ಯಕ್ಕೆ ಪಂಚಮಿ ಹಬ್ಬದ ಮೆರುಗು. ಹಾಸ್ಯಲೋಕದಲ್ಲೂ 5ರದ್ದೇ ಸಾಮ್ರಾಜ್ಯ. ಪಂಚ್ ಇಲ್ಲ ಅಂದ್ರೆ ಯಾರು ನಗ್ತಾರೆ ಹೇಳಿ? ವಿಪರ್ಯಾಸ ಅಂದ್ರೆ, ಜಗಳಾ-ಗಿಗಳ ಆದಾಗ್ಲೂ 5ರದ್ದೇ ಪಂಚಾಯತಿ! ಅದಲ್ಲದೇ ನಮ್ಮ ವಾತಾವರಣದ ಅಸ್ತಿತ್ವವೇ ಪಂಚಭೂತಗಳಲ್ಲಿದೆ (ಆಕಾಶ, ಭೂಮಿ, ಗಾಳಿ, ಬೆಂಕಿ, ನೀರು). ಹೀಗೇ 5 ನಮ್ಮ ಸಮಾಜದ ಎಲ್ಲಾ ಸ್ತರಗಳಲ್ಲಿ ಕುಟುಂಬ, ಧರ್ಮ, ರಾಜಕೀಯ, ನಿಸರ್ಗ... ಎಲ್ಲದರಲ್ಲೂ ಹಾಸುಹೊಕ್ಕಾಗಿದೆ. ಈಗ ಅಂಕಿ 5ರ ಒಂದು ವಿಸ್ಮಯ ಗಮನಿಸೋಣ. ಪ್ರಮೇಯ : 5ರಿಂದ ಕೊನೆಯಾಗುವ ಯಾವುದೇ ಸಂಖ್ಯೆಯ ವರ್ಗ 25ರಿಂದ ಕೊನೆಗೊಳ್ಳುತ್ತದೆ. ಅಂದರೆ, square of any number ending in 5 (x 5) ends in a 25 (y25) . ಉದಾಹರಣೆಗೆ... 5 x 5 = 25 .... 235 x 235 = 55225 ...... 4785 x 4785 = 22896225 ಹೀಗೇ ಪ್ರಯತ್ನಿಸಿ ನೋಡಿ. ಈಗ ಮತ್ತಷ್ಟು ಆಳಕ್ಕೆ ಹೋಗೋಣ. 5ನ್ನು 5ರಿಂದ ಎಷ್ಟು ಸಲ ಗುಣಿಸಿದರೂ ಬರುವ ಸಂಖ್ಯೆ25ರಲ್ಲೇ ಕೊನೆಯಾಗುತ್ತದೆ. ಅಂದರೆ Any power of 5 ends with 25, except 0 5ನ್ನು 2ಸಲ ಗುಣಿಸೋಣ. 25 ಸಿಕ್ಕಿತು ಅಲ್ವಾ. ಮತ್ತೊಮ್ಮೆ 5ರಿಂದ ಗುಣಿಸಿ. 25 x 5 = 125 ಹೀಗೇ ಮುಂದುವರಿಸಿದರೆ 5 x 5 = 25 ........ ಹೀಗೆ ಸಿಗುತ್ತವೆ. ಇಲ್ಲಿನ ವಿಶೇಷ ಎಲ್ಲಾ ಸಂಖ್ಯೆಗಳೂ 25ರಿಂದ ಕೊನೆಯಾಗುವುದಷ್ಟೇ ಅಲ್ಲ. ಮತ್ತೊಮ್ಮೆ ಗಮನಿಸಿ ನೋಡಿ, 25ರ ನಂತರ ಪ್ರತಿ ಸಂಖ್ಯೆಯೂ ಅನುಕ್ರಮವಾಗಿ 125-625-125-625... ಮಾದರಿಯಲ್ಲೇ ಕೊನೆಗೊಳ್ಳುತ್ತವೆ. ಈ ಮಾದರಿಯಲ್ಲಿಯೂ ಒಂದು ವಿಶೇಷ ಇದೆ, ಗಮನಿಸಿ ಹೇಳ್ತೀರಾ ? ಇದೇ ಮಾದರಿಯಲ್ಲಿ 5 x 5 = 25ರ ಲೆಕ್ಕ ಮಾಡೋಣ. 25 x 25 = 625 ........ ಹೀಗೆ ಸಿಗುತ್ತವೆ. ಇಲ್ಲಿನ ವಿಶೇಷ ಎಲ್ಲಾ ಸಂಖ್ಯೆಗಳೂ 625ರಿಂದ ಕೊನೆಯಾಗುವುದಷ್ಟೇ ಅಲ್ಲ. 625ರ ನಂತರ ಪ್ರತಿ ಸಂಖ್ಯೆಯೂ ಅನುಕ್ರಮವಾಗಿ 5625-0625-5625-0625........ ಮಾದರಿಯಲ್ಲೇ ಕೊನೆಗೊಳ್ಳುತ್ತವೆ. ಮತ್ತೊಂದು ಉದಾಹರಣೆಗೆ 5 x 5 x 5 = 125ರ ಲೆಕ್ಕ ಮಾಡೋಣ. 125 x 125 = 15625 ........ ಹೀಗೆ ಸಿಗುತ್ತವೆ. ಇಲ್ಲಿ ಎಲ್ಲಾ ಸಂಖ್ಯೆಗಳೂ ಕೇವಲ25ರಿಂದ ಮಾತ್ರ ಕೊನೆಯಾಗುತ್ತದೆ ಅಲ್ವಾ ?ಕಾರಣ ಏನಿರಬಹುದು ಊಹಿಸಿ ತಿಳಿಸಿ. ಕ್ಲೂ: 5 x 5 x 5 x 5 = 625ಗೆ ಲೆಕ್ಕ ಮಾಡಿದರೆ ತಿಳಿಯುತ್ತೆ. ಇಲ್ಲೂ ಸಹ ಪ್ರತಿ ಸಂಖ್ಯೆಯೂ ಅನುಕ್ರಮವಾಗಿ 625-125-625-125... ಮಾದರಿಯಲ್ಲೇ ಕೊನೆಗೊಳ್ಳುತ್ತವೆ. ಇಲ್ಲಿಗೆ ನಮ್ಮ ಪಂಚಾಯಣ ಮುಗಿಸೋಣ. ನಿಮ್ಮದೇನಾದರೂ ತಕರಾರು ಇದ್ದರೆ ದಯವಿಟ್ಟು ಪಂಚಾಯ್ತಿಗೆ ತಿಳಿಸಿ! |













Click it and Unblock the Notifications