ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯಲ್ಲಿ ನಂಬರ್‌ ಹರಟೆ

By Staff
|
Google Oneindia Kannada News


ಮೂರು ಮೈಲಿ ದೂರ ನಿಲ್ಲದೇ, 3ರ ಬಳಿ ಬನ್ನಿ!
ಮೂರು ಅಂದ ತಕ್ಷಣ ಬಹುಮಂದಿಗೆ ತಿರುಪತಿ ವೆಂಕಟರಮಣನ ನಾಮ ನೆನಪಾಗುತ್ತದೆ! ನಾಮ ಹಾಕೋದು ಅಥವಾ ನಾಮ ಹಾಕಿಸಿಕೊಳ್ಳೋದು ಇದ್ದೇ ಇದೆ! ಅವೆಲ್ಲವನ್ನೂ ಮರೆತು, 3ರ ವಿಶೇಷತೆ ಅರಿಯೋಣವೇ?

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ಗುಣತ್ರಯ, ರತ್ನತ್ರಯ ಮುಂತಾದ ಪದಗಳನ್ನೆಲ್ಲಾ ನೀವು ಕೇಳಿರಬಹುದು. ಸತ್‌, ರಜೋ ಮತ್ತು ತಮೋ ಗುಣಗಳನ್ನು ಮೀರಿದವರಿಗೆ ತ್ರಿಗುಣಾತೀತರು ಎನ್ನುತ್ತಾರೆ. ಇದೇನಿದು, ಏನೋ ಗಣಿತ-ಅಂಕಿ-ಸಂಖ್ಯೆ ಅಂತ ಹೇಳಿ ತ್ರಿಗುಣಗಳ ಬಗ್ಗೆ ಕೊರೀತಿದಾರೆ ಅಂತ ಶಂಕೇನಾ. ಇಲ್ಲ, ನನಗೇನೂ ತ್ರಿಗುಣಾತೀತೆ ಆಗುವ ಹಂಬಲ ಇಲ್ಲ, ಮತ್ತು ನಿಮ್ಮನ್ನು 3ಖರನ್ನಾಗಿ ಮಾಡಲು ಏಪ್ರಿಲ್‌ ಇನ್ನೂ ತುಂಬಾ ದೂರ ಇದೆ. ಸದ್ಯಕ್ಕೆ ತ್ರಿಗಣಿತಾತೀತ (ತ್ರಿ+ಗಣಿತ+ಅತೀತ) ಅಥವಾ 3ರ ಗಣಿತದಲ್ಲಿ ಅತೀತರಾಗೋಣ ಬನ್ನಿ.

ಇಂದಿನ 3ರ ಪ್ರಮೇಯ....

ಅಂಕಿ 3ನ್ನು ಬೇರೆ ಯಾವುದೇ X ಸಂಖ್ಯೆಯಿಂದ ಗುಣಿಸಿ. ದೊರೆತ ಗುಣಲಬ್ಧ ಸಂಖ್ಯೆಯ ಪ್ರತಿ ಅಂಕಿಗಳ ಮೊತ್ತವನ್ನು 3ರಿಂದ ನಿಶ್ಶೇಷವಾಗಿ ಭಾಗಿಸಬಹುದು.

ಗಣಿತ ಮತ್ತು ಭಾಷೆ ಬಗ್ಗೆ ಹೇಳೋದಾದ್ರೆ, ನಮ್ಮ ಗಣಿತಕ್ಕೆ, ಪದಗಳ ಭಾಷೆ ಒಗ್ಗಲ್ಲ. ಅಂಕಿಗಳ ಭಾಷೆಯೇ ಸರಿ. so, let us talk in numbers. ಈಗೀಗ ಸಿನಿಮಾ ತಾರೆಯರೆಲ್ಲಾ ತಮ್ಮ ಹೆಸರಿನ ಸ್ಪೆಲ್ಲಿಂಗ್‌ನ್ನು ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಅದಲಿಸೋದು ನೋಡಿದ್ರೆ ಗೊತ್ತಾಗುತ್ತೆ ಗ್ಲಾಮರ್ಗೂ ಗಣಿತ ಬೇಕು ಅಂತ. ಅಯ್ಯಯ್ಯೋ, ವಿಷಯ ಬಿಟ್ಟು 3 ಮೈಲಿ ಹೊರಟೋದೆ. ಏನು ಹೇಳ್ತಾ ಇದ್ದೆ....

ಉದಾಹರಣೆಗೆ

n=4
3 x n ==> 3 x 4 = 12
1+2 = 3
3/3==> (remainder=0)

n=8
3 x n ==> 3 x 8 = 24
2+4 = 6
6/3==> (remainder=0)

n=257
3 x n ==> 3 x 257 = 771
7+7+1 = 15
1+5 = 6
6/3==> (remainder=0)

ಹೀಗೆ 3ರ ಗುಣಲಬ್ಧಗಳೆಲ್ಲಾ ಅದೇ 3ರಿಂದ ನಿಶ್ಶೇಷವಾಗಿ ಭಾಗಿಸಲ್ಪಡುತ್ತವೆ. ಈ ವಿಶೇಷ ಕೇವಲ 3ರಲ್ಲಿ ಮಾತ್ರ ಅಂತ ಕ್ರೆಡಿಟ್‌ ಕೊಟ್ಟಿದ್ದಕ್ಕೆ ಬೇರೆ ಅಂಕೆಗಳೆಲ್ಲಾ, ಅದೇನು ಮಹಾ? ನಾವೂ ಮಾಡ್ತೀವಿ ಅಂಥಾ ಜಗಳಕ್ಕೇ ಬರೋದೇ? ನೋಡೋಣ ಯಾರು ಗೆದ್ರು, ಯಾರು ಸೋತರು ಆಂತ.

1 ಬಂತು, ಎಲ್ಲರೂ ನೀನು ಲೆಕ್ಕಕ್ಕಿಲ್ಲ ಅಂತ ಪಕ್ಕಕ್ಕೆ ಸರಿಸಿಬಿಟ್ಟರು. ಪಾಪ ಅದು ಒಂಟಿ ಕಣ್ಣಲ್ಲಿ ಅಳ್ತಾ ಇದೆ :-(.

2 x 8 = 16
1+6 = 7
7/2==> ಶೇಷ=1... 2ಕ್ಕೆ ಸೋಲು

4 x 8 = 32
3+2 = 5
5/4==> ಶೇಷ=1... 4ಕ್ಕೆ ಸೋಲು

5 x 8 = 40
4+0 = 4
4/5==> ಶೇಷ=4... 5ಕ್ಕೆ ಸೋಲು

6 x 9 = 54
5+4 = 9
9/6==> ಶೇಷ=3... 6ಕ್ಕೆ ಸೋಲು

7 x 8 = 56
5+6 = 11 1+1 = 2
2/7==> ಶೇಷ=2... 7ಕ್ಕೆ ಸೋಲು

8 x 8 = 64
6+4 = 10 1+0 = 1
2/7==> ಶೇಷ=2... 8ಕ್ಕೆ ಸೋಲು

ಸ್ವಲ್ಪ ತಡೀರಿ, ಇಲ್ಲಿ ನೋಡಿ

9 x 8 = 72
7+2 = 9
9/9==> ಶೇಷ=0... 9 ಸೋಲಲಿಲ್ಲ

9 x 77 = 693
6+9+3 = 18 1+8 = 9
9/9==> ಶೇಷ=0... 9 ಊಹೂಂ, ಸೋಲಲಿಲ್ಲ

ಆದರೆ ದಯವಿಟ್ಟು ಮರೀಬೇಡಿ

9/3==>ಶೇಷ=0

ಅದಕ್ಕೇ 9 ಗೆದ್ದದ್ದು !

ಹಾಗಾದರೆ 6/3 ==> ಶೇಷ = 0ಅಲ್ಲವೇ? ಹೌದು, ಆದರೆ 6 = 3 x 2. ಇಲ್ಲಿ 2 ಟೆರರಿಸ್ಟ್‌ ಥರ ಬಂದು 6ರ ಅವಕಾಶವನ್ನು ಹಾಳುಮಾಡಿತು.

9 = 3 x 3 ಅಂದರೆ, 3ರ ವರ್ಗ

ಆದ್ದರಿಂದ ಗೆದ್ದಿತು.

ಆದ್ದರಿಂದ 3ರ ಬಗ್ಗೆ ಹುಶಾರಾಗಿರಿ. 3, ಮೂರು ನಾಮ ಹಾಕಬಹುದು. ದೀಪವೂ ನಿನ್ನದೆ ಗಾಳಿಯೂ ನಿನ್ನದೆ... ಕೊಡೋನೂ ಅವನೇ, ಕಿತ್ಕೊಳ್ಳೋನೂ ಅವನೇ ಅನ್ನೋ ಹಾಗೆ 3ರ ಕಥೆ.

ಶುಭ ಕಾರ್ಯಗಳಿಗೆ 3 ಜನ ಹೋಗಬಾರದು, ಹಬ್ಬದ ದಿನ 3 ಎಲೆ ಹಾಕಬಾರದು, ಅಷ್ಟೇಕೆ ಕವಡೆ ಆಡುವಾಗ 3 ಬಂದ್ರೆ ಮೂಶಿ ಅಂತ ಆಟ ನಿಲ್ಲಿಸೋದು... ಎಲ್ಲಾ ನೆನಪಿಗೆ ಬರ್ತಾ ಇದೆ. ನಿಮಗೇನು ನೆನಪಿಗೆ ಬರ್ತಾ ಇದೆ ?


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X