• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವರಾತ್ರಿಯಲ್ಲಿ ನಂಬರ್‌ ಹರಟೆ

By Staff
|

ಮಹಾ ನವಮಿ ಏಕೆ ಗೊತ್ತೇ, 9 ಅಂಕಿಗಳ ರಾಜ

9ರಿಂದ ಕೊನೆಗೊಳ್ಳುವ ಯಾವುದೇ ಸಂಖ್ಯೆಯ ಮಗ್ಗಿ ಬಹಳ ಸುಲಭ. ಗುಣಾಕಾರವೇ ಇಲ್ಲದೆ ಸಂಕಲನದಲ್ಲೇ ಸುಲಭವಾಗಿ ಬರೆಯಬಹುದು.

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.

poornimakh@hotmail.com

ಮೊನ್ನೆ ಮಹಾನವಮಿಯ ದಿನ.... ಮಹಾ ನವಮಿ ಏಕೆ ಗೊತ್ತೇ, 9 ಅಂಕಿಗಳ ರಾಜ. ಗರಿಷ್ಠ ಮೂಲ ಸಂಖ್ಯೆ. ಅಷ್ಟೆ ಅಲ್ಲ, ಅತ್ಯಂತ ಹೆಚ್ಚು ವಿಸ್ಮಯಗಳು ಅಡಗಿರುವುದೂ ಈ ನವಗರ್ಭದಲ್ಲೇ. ಸಂಖ್ಯಾಶಾಸ್ತ್ರದಲ್ಲೂ 9ಕ್ಕೆ ಅತ್ಯಂತ ಪ್ರಮುಖ ಸ್ಥಾನ, ಅದೃಷ್ಟದ ಸಂಖ್ಯೆ ಅಂತ.

ನಮ್ಮ ತಾತನಿಗೆ ನಾವು ಒಟ್ಟು 9 ಜನ ಮೊಮ್ಮಕ್ಕಳು. ನಾವೆಲ್ಲಾ ಚೆನ್ನಾಗಿ ಗಲಾಟೆ ಮಾಡ್ತಿದ್ದರೆ ನಮ್ಮ ತಾತ ಒಳ್ಳೇ ನವಗ್ರಹಗಳು ಅಂತ ಬಯ್ತಾ ಇದ್ರು. ಜೊತೆಗೆ ಆಟಕ್ಕೆ ಬೇರೆ ಮನೆ ಮಕ್ಕಳು ಬರ್ತಾ ಇದ್ರು. ಆಗ ನಮಗೆ ನವಗ್ರಹ ಪೂಜೆ, ಅವರಿಗೆ ಉಪಗ್ರಹ ಪೂಜೆ. ನಾವೇನು ಕಡಿಮೆ ಇರಲಿಲ್ಲ, ಹಾಗಾದ್ರೆ ನೀನು ಏನು, ದೊಡ್ಡ ಗ್ರಹ ಅಂತ ತಾತನ್ನೇ ಕಿಚಾಯಿಸುತ್ತಿದ್ದೆವು.

ಇತ್ತೀಚೆಗೆ ಅಮೆರಿಕದವರು ಪ್ಲೂಟೋನ ಸೋಲಾರ್‌ ಸಿಸ್ಟಮ್‌ ಇಂದ ಹೊರದಬ್ಬಿದಾರೆ, ಕುಬ್ಜ ಗ್ರಹ ಅಂತ. ನಾವು ರಾಹು-ಕೇತುನ ಕ್ಷುದ್ರ ಗ್ರಹ ಅಂತೀವಲ್ಲ, ಹಾಗೆ. ಈಗ ಸೌರವ್ಯೂಹದಲ್ಲಿ ಎಂಟೇ ಗ್ರಹ ಅಂತೆ. ಅದಕ್ಕೆ ನಾವು ನವಗ್ರಹ ಪೂಜೆ ಬಿಟ್ಟು ಅಷ್ಟಗ್ರಹ ಪೂಜೆ ಮಾಡಬೇಕಾ ? ಹಾಗಾದ್ರೆ ನಮ್ಮ ಮಂತ್ರ ಎಲ್ಲ ಮಾರ್ಪಡಿಸಬೇಕಾ? ದೇವಸ್ಥಾನದಲ್ಲಿ ಇರೋ ನವ(ವಿ)ಗ್ರಹ ತೆಗೆದು ನವನವೀನ ಅಷ್ಟಗ್ರಹ ಸ್ಥಾಪಿಸಬೇಕಾ? ಅದೆಲ್ಲಾ ಏನೂ ಬೇಡ. ಏಕೆಂದರೆ ಸೋಲಾರ್‌ ಸಿಸ್ಟಮ್‌ ಪ್ಲಾನೆಟ್ಸೇ ಬೇರೆ, ನವಗ್ರಹದ ಗ್ರಹಗಳೇ ಬೇರೆ.

ತಾಯಿ ಹೊಟ್ಟೇಲಿ ನವಮಾಸ ಕಳೆದ ಮೇಲೇನೇ ಮಕ್ಕಳು ಜನಿಸೋದು.

ಬನ್ನಿ, ಈಗ 9ರ ಮಗ್ಗಿ ನೋಡೋಣ. ಯಾವತ್ತೋ ಕಲಿತಿದ್ದೇವೆ, ಅದನ್ನೇನು ಮತ್ತೆ ನೋಡೋದು ಅಂದ್ರಾ? ಕಲಿತಿದ್ದು ಸರಿ, ಅದರ ವೈಶಿಷ್ಟ್ಯ ಗಮನಿಸಿದ್ದೀರಾ ?

ಈಗ ನೋಡಿ 9ರ ಮಗ್ಗಿ

09

18

27

36

45

54

63

72

81

90

ಮತ್ತೊಮ್ಮೆ ಗಮನಿಸಿ, ಬಲಭಾಗದ ಅಂಕಿಗಳು ಅನುಕ್ರಮವಾಗಿ 9-8-7-6-5-4-3-2-1-0 ಹೀಗೆ (-1) ಅಂತರದಲ್ಲಿ ಕಡಿಮೆ ಆಗುತ್ತವೆ. ಎಡಭಾಗದ ಅಂಕಿಗಳು 0-1-2-3-4-5-6-7-8-9 ಹೀಗೆ (+1) ಅಂತರದಲ್ಲಿ ಹೆಚ್ಚುತ್ತಾ ಹೋಗುತ್ತವೆ.

ಈಗ 19ರ ಮಗ್ಗಿ ನೋಡೋಣ

19

38

57

76

95

114

133

152

171

190

ಇಲ್ಲಿ ಮತ್ತೊಮ್ಮೆ ಬಲಭಾಗದ ಕೊನೆ ಅಂಕಿಗಳು ಅನುಕ್ರಮವಾಗಿ

9-8-7-6-5-4-3-2-1-0 ಹೀಗೆ (-1) ಅಂತರದಲ್ಲಿ ಕಡಿಮೆ ಆಗುತ್ತವೆ. ಎಡಭಾಗದ ಅಂಕಿಗಳು 1-3-5-7-9-11-13-15-17-19 ಹೀಗೆ (+2) ಅಂತರದಲ್ಲಿ ಹೆಚ್ಚುತ್ತಾ ಹೋಗುತ್ತವೆ.

ಈಗ 29ರ ಮಗ್ಗಿ ಗಮನಿಸೋಣ

29

58

87

116

145

174

203

232

261

290

ಇಲ್ಲಿ ಮತ್ತೊಮ್ಮೆ ಬಲಭಾಗದ ಕೊನೆ ಅಂಕಿಗಳು ಅನುಕ್ರಮವಾಗಿ 9-8-7-6-5-4-3-2-1-0 ಹೀಗೆ (-1) ಅಂತರದಲ್ಲಿ ಕಡಿಮೆ ಆಗುತ್ತವೆ. ಎಡಭಾಗದ ಅಂಕಿಗಳು 2-5-8-9-11-14-17-20-23-26-29 ಹೀಗೆ (+3) ಅಂತರದಲ್ಲಿ ಹೆಚ್ಚುತ್ತಾ ಹೋಗುತ್ತವೆ. ಅಂದರೆ

2

2+3 = 5

5+3 = 8

8+3 = 11

11+3 = 14

14+3 = 17

17+3 = 20

20+3 = 23

23+3 = 26

26+3 = 29

ಈಗಾಗಲೇ ನಿಮಗೆಲ್ಲಾ ಸುಳಿವು ಸಿಕ್ಕಿರಬಹುದು. 9ರಿಂದ ಕೊನೆಗೊಳ್ಳುವ ಯಾವುದೇ ಸಂಖ್ಯೆಯ ಮಗ್ಗಿ ಬಹಳ ಸುಲಭ. ಗುಣಾಕಾರವೇ ಇಲ್ಲದೆ ಸಂಕಲನದಲ್ಲೇ ಸುಲಭವಾಗಿ ಬರೆಯಬಹುದು.

ಉದಾಹರಣೆಗೆ, ಸಂಖ್ಯೆ x 9 ಎಂದಿಟ್ಟುಕೊಳ್ಳೋಣ. ನೀವು ಮಾಡಬೇಕಾಗಿರುವುದು ಇಷ್ಟೇ...

ಬಲಭಾಗದ ಸಂಖ್ಯೆಗಳ ಯಾವಾಗಲೂ ಅನುಕ್ರಮವಾಗಿ 9-8-7-6-5-4-3-2-1-0 ಆಗಿರುತ್ತವೆ. ಅದನ್ನು ಹೀಗೆ ಬರೆಯಿರಿ.

9

8

7

6

5

4

3

2

1

ಈಗ ಎಡಭಾಗದ ಅಂಕಿಗಳು x ಇಂದ ಪ್ರಾರಂಭಗೊಂಡು +(x+1) ಅಂತರದಲ್ಲಿ ಇರುತ್ತದೆ.

x=7 ಆದರೆ, ಬಲಭಾಗದ ಅಂಕಿಗಳು 7 ರಿಂದ ಆರಂಭವಾಗಿ (7+1=8), +8 ಅಂತರದಲ್ಲಿ ಹೆಚ್ಚುತ್ತಾ ಹೋಗುತ್ತವೆ.

7

7+8 = 15

15+8 = 23

23+8 = 31

31+8 = 39

39+8 = 47

47+8 = 55

55+8 = 63

63+8 = 71

71+8 = 79

7-15-23-31-39-47-55-63-71-79 ದೊರಕುತ್ತವೆ. ಇದನ್ನು ಮೇಲಿನ ಅಂಕೆಗಳ ಬಲಕ್ಕಿಟ್ಟರೆ 79ರ ಮಗ್ಗಿ ಸಿದ್ಧ.

79

158

237

316

395

474

553

632

711

790

ಹೀಗೆ xಗೆ ಬೇರೆ ಯಾವ ಸಂಖ್ಯೆ ಬೇಕಾದರೂ ಕೊಟ್ಟು ಪ್ರಯತ್ನಿಸಿ.

ಮತ್ತೊಂದು ಉದಾಹರಣೆ 99

99

198

297

396

495

594

693

792

891

990

ಇಲ್ಲಿಯೂ ಸಹ ಬಲಭಾಗದ ಅಂಕಿಗಳು 9-8-7-6-5-4-3-2-1 ಎಡಭಾಗದ ಸಂಖ್ಯೆಗಳು 9+1=10, (+10) ಅಂತರದಲ್ಲಿ ಹೆಚ್ಚುತ್ತಾ ಹೋಗುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಶೇಷ ಬಲಭಾಗದ 2 ಅಂಕಿಗಳು. 99-98-97-96-95-94-93-92-91-90 ಹೀಗಿವೆ ಅಲ್ಲವೆ.

ಸಂಖ್ಯೆ x99ಆದರೆ, ಮಗ್ಗಿಯ ಬಲಭಾಗದ ಕೊನೆಯ ಎರಡು ಸಂಖ್ಯೆಗಳು ಯಾವಾಗಲೂ 99-98-97-96-95-94-93-92-91-90 ಆಗಿರುತ್ತವೆ. ಬಲಭಾಗದ ಸಂಖ್ಯೆಗಳಿಗೆ ಮೇಲಿನ ಉಪಾಯವನ್ನೇ ಬಳಸಬಹುದು.

ಉದಾಹರಣೆಗೆ 799ರ ಮಗ್ಗಿ ಹೀಗಿರುತ್ತದೆ..

0799

1598

2397

3196

3995

4794

5593

6392

7191

7990

ಹೀಗೇ ಎಷ್ಟು ಬೇಕಾದರೂ ಮಗ್ಗಿ ಬರೆಯಬಹುದು. ನಾನಂತೂ ಇಲ್ಲಿಗೆ ನಿಲ್ಲಿಸುತ್ತೇನೆ, ನಿಮ್ಮ ಗಣಿತದ ನವ ಪ್ರಯೋಗಗಳು ಅಗಣಿತವಾಗಿ ನಡೆಯಲಿ. ಈಗ ಹೇಳಿ ಗಣಿತ ಕಷ್ಟವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more