‘ನಾಡಹಬ್ಬ ದಸರಾದಲ್ಲಿ ಭಟ್ಟಂಗಿ ಸಾಹಿತಿಗಳು, ಬೂಸಾ ಸಾಹಿತ್ಯ’
ರಾಜರ ಕಾಲದ ಭಟ್ಟಂಗಿ ಸಂಸ್ಕೃತಿಯ ಪುನರುತ್ಥಾನ
ದಸರಾದಲ್ಲಿ ಕಂಡುಬರುತ್ತಿರುವ ಬೂಸಾ ಸಾಹಿತ್ಯದ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ರಾಮದಾಸ್ ಅವರ ಹೇಳಿಕೆಯ ಮುಖ್ಯಾಂಶಗಳು ಇಂತಿವೆ :
- ಸರ್ಕಾರ ಮೋಡಬಿತ್ತನೆ ನಡೆಸಿ ಮಳೆ ಬರಿಸಲು ಪ್ರಯತ್ನಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಳೆ ಸುರಿಸುವಂತೆ ಖ್ಯಾತ ವಿಜ್ಞಾನಿ ಡಾ. ಸಿಎನ್ನಾರ್ ರಾವ್ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಇದು ಹಾಸ್ಯಾಸ್ಪದ.
- ದಸರಾ ಕವಿಗೋಷ್ಠಿ ಖಾಸಗಿ ಮರ್ಜಿಯ ಗೋಷ್ಠಿಯಾಗಿ ಪರಿವರ್ತಿತಗೊಂಡಿದೆ.
- ಭಟ್ಟಂಗಿ ಸಾಹಿತಿಗಳಿಂದಾಗಿ ಕರ್ನಾಟಕ ಸಂಸ್ಕೃತಿಯ ಪತನವಾಗಿದೆ. ರಾಜರ ಕಾಲದ ಭಟ್ಟಂಗಿ ಸಂಸ್ಕೃತಿ ಪ್ರತಿಬಿಂಬಿತವಾಗಿದೆ.
- ಕುವೆಂಪು ಅವರು ಅಭಿಪ್ರಾಯಪಟ್ಟಂತೆ ಗುಲಾಮಗಿರಿಗೆ ಪರಂಪರೆಯ ಹೆಸರಿನಲ್ಲಿ ಚಿನ್ನದ ಲೇಪ ಹಚ್ಚುವ ಕೆಲಸದಲ್ಲಿ ಸಾಹಿತಿಗಳು ತೊಡಗಿದ್ದಾರೆ.
ಕೆ. ರಾಮದಾಸ್ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ?
ವಾರ್ತಾ ಸಂಚಯ












Click it and Unblock the Notifications