Ganesha Favorite Rashi: ಈ ರಾಶಿಯವರೆಂದರೆ ಗಣೇಶನಿಗೆ ತುಂಬಾ ಇಷ್ಟ- ನಿಮ್ಮ ರಾಶಿ ಇದೆನಾ?

ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿಯನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಗಣೇಶನನ್ನು ಬುದ್ಧಿವಂತಿಕೆ, ಶಿಕ್ಷಣ ಮತ್ತು ಸಮೃದ್ಧಿಯ ದೇವರು ಎಂದು ಪೂಜಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿಯಂದು ಗಜಾನನ್ನನ್ನು ಪೂಜಿಸಲು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ.

ಗಣೇಶ ಅಡೆತಡೆಗಳನ್ನು ನಿವಾರಿಸುವವನು, ದುಃಖಗಳನ್ನು ಹೋಗಲಾಡಿಸುವವನು ಮತ್ತು ಸಂತೋಷವನ್ನು ನೀಡುವವನು ಎಂದು ಪೂಜಿಸಲ್ಪಡುತ್ತಾನೆ. ಗಣೇಶನು ಜೀವನದ ಸಮಸ್ಯೆಗಳನ್ನು ನಾಶಮಾಡಿ ಯಶಸ್ಸು ಮತ್ತು ಸಂಪತ್ತನ್ನು ತರುವ ದೇವರು. ಹೀಗಾಗಿ ಆತನನ್ನು ಪೂಜಿಸದೆ ಮಾಡಿದ ಯಾವುದೇ ಕೆಲಸವು ಯಶಸ್ವಿಯಾಗುವುದಿಲ್ಲ ಎಂದು ನಂಬಲಾಗುತ್ತದೆ.

Astrology ganesh chaturthi 2024 lord ganesha favorite zodiac signs in kannada

ಹಿಂದೂ ಪುರಾಣಗಳ ಪ್ರಕಾರ, ಗಣೇಶನು ಅತ್ಯಂತ ಪೂಜ್ಯನೀಯ ದೇವರು ಮತ್ತು ಗಣೇಶನು ಎಲ್ಲಾ ದೇವರುಗಳಿಗಿಂತ ಮೊದಲು ಪೂಜಿಸಲ್ಪಡುತ್ತಾನೆ. ಯಾವುದೇ ಹೊಸ ಕೆಲಸ ಅಥವಾ ಪೂಜೆಯನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಗಣೇಶನ ಕೃಪೆ ಇದ್ದರೆ ಅತ್ಯಂತ ಶಕ್ತಿಶಾಲಿಯಾಗಿ ಬುದ್ಧಿವಂತರಾಗಿ ಜೀವಿಸಬಹುದು ಎಂಬ ನಂಬಿಕೆ ಇದೆ.

ವಿನಾಯಕ ಚತುರ್ಥಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷ ಚತುರ್ಥಿಯಂದು ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿ ದೇಶದ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದಲ್ಲಿ 12 ರಾಶಿಗಳಿವೆ. ಈ 12 ರಾಶಿಗಳಲ್ಲಿ ಕೆಲವರಿಗೆ ಗಣೇಶನ ವಿಶೇಷ ಕೃಪೆ ಇದೆ. ಅಂತಹ ರಾಶಿಯವರು ಯಾರು? ಎಂದು ಈಗ ತಿಳಿಯೋಣ.

Astrology ganesh chaturthi 2024 lord ganesha favorite zodiac signs in kannada

ಮೇಷ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಜನರು ಗಣೇಶನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಈ ರಾಶಿಯವರು ತುಂಬಾ ಬುದ್ಧಿವಂತರು. ಅವರು ಎಲ್ಲಾ ವಿಷಯಗಳಲ್ಲಿ ಪರಿಣತರಾಗಿರುತ್ತಾರೆ. ಮೇಷ ರಾಶಿಯವರಿಗೆ ಗಣೇಶನ ಕೃಪೆಯಿಂದ ತಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೀಗಾಗಿ ಈ ರಾಶಿಯವರು ಪ್ರತಿದಿನ ಗಣಪತಿಯನ್ನು ಪೂಜಿಸಬೇಕು.

ಮಿಥುನ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿ ಎಂದರೆ ಗಣೇಶನಿಗೆ ತುಂಬಾ ಇಷ್ಟ. ಈ ರಾಶಿಗಳು ತುಂಬಾ ಬುದ್ಧಿವಂತರು. ಗಜಾನನ ಕೃಪೆಯಿಂದ ಮಿಥುನ ರಾಶಿಯವರು ಉನ್ನತ ಶೈಕ್ಷಣಿಕ ಸಾಧನೆಗಳನ್ನು ಮಾಡುತ್ತಾರೆ. ಮಿಥುನ ರಾಶಿಯವರು ಓದುವುದು ಮತ್ತು ಬರೆಯುವುದರಲ್ಲಿ ತುಂಬಾ ವೇಗವನ್ನು ಹೊಂದಿರುತ್ತಾರೆ. ಇಂತಹ ಜನರೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಅಲ್ಲದೆ ಮಿಥುನ ರಾಶಿಯವರು ತುಂಬಾ ಸೌಮ್ಯ ಸ್ವಭಾವದವರು. ಈ ರಾಶಿಯವರು ಪ್ರತಿದಿನ ಗಣಪತಿಯನ್ನು ಪೂಜಿಸಬೇಕು.

ಮಕರ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಣೇಶ ಮಕರ ರಾಶಿಯವರಿಗೆ ತುಂಬಾ ಶುಭಫಲವನ್ನು ನೀಡುತ್ತಾನೆ. ಈ ರಾಶಿ ಅಡಿಯಲ್ಲಿರುವ ಜನರು ಕಠಿಣ ಕೆಲಸಗಾರರಾಗಿರುತ್ತಾರೆ. ಈ ರಾಶಿಯ ಜನರು ನಂಬಿಕೆಗೆ ಅರ್ಹರಾಗಿರುತ್ತಾರೆ. ಬಹಳ ತ್ವರಿತ ಮನಸ್ಸಿನ ಜನರು. ಮಕರ ರಾಶಿಯವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುತ್ತಾರೆ. ಮಕರ ರಾಶಿಯವರು ಪ್ರತಿನಿತ್ಯ ಗಣೇಶನ ಧ್ಯಾನ ಮಾಡಬೇಕು.

ಗಣೇಶ ಚತುರ್ಥಿ 2024 ಯಾವಾಗ?

ಗಣೇಶ ಚತುರ್ಥಿ ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. 2024 ರಲ್ಲಿ ವಿನಾಯಕ ಚತುರ್ಥಿ ಹಬ್ಬ ಸೆಪ್ಟೆಂಬರ್ 6, ಮಧ್ಯಾಹ್ನ 03:01ಕ್ಕೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 17ರ ಮಂಗಳವಾರ ಸಂಜೆ 05:37ಕ್ಕೆ ಕೊನೆಗೊಳ್ಳುತ್ತದೆ. ಗಣೇಶ ವಿಸರ್ಜನ 2024 ಸೆಪ್ಟೆಂಬರ್ 17 ರಂದು ಮಂಗಳವಾರ ಇದೆ. ಪೂಜೆ ಮುಹೂರ್ತ ಬೆಳಿಗ್ಗೆ 11:03 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು 01:34 ರವರೆಗೆ ಅಂದರೆ 2 ಗಂಟೆ 31 ನಿಮಿಷಗಳವರೆಗೆ ಇರುತ್ತದೆ. ವಿನಾಯಕ ಚತುರ್ಥಿಯಂದು ಚಂದ್ರನನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+