Akshaya Tritiya 2023: ಅಕ್ಷಯ ತೃತೀಯ ತಯಾರಿ, ಚಿನ್ನದ ಬೆಲೆ ದುಬಾರಿ
ಅಕ್ಷಯ ತೃತೀಯ ಅಂದರೆ ಮೊದಲು ನೆನಪಾಗೋದು ಚಿನ್ನ. ಯಾಕೆಂದ್ರೆ ಈ ದಿನ ಚಿನ್ನ ಖರೀದಿ ಮಾಡಿದರೆ ಪ್ರತೀ ವರ್ಷ ಚಿನ್ನ ಖರೀದಿ ಮಾಡ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ದಿನ ಚಿನ್ನಕ್ಕೆ ಬೇಡಿಕೆ ಹೆಚ್ಚು. ಜೊತೆಗೆ ಚಿನ್ನದ ವ್ಯಾಪಾರ ಕೂಡ ಬಲೂ ಜೋರಾಗೇ ನಡೆಯುತ್ತೆ. ಈ ಬಾರಿ ಏಪ್ರಿಲ್ 23 ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ದೇಶದೆಲ್ಲಡೆ ಹಬ್ಬದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನ ದೊಡ್ಡ ಮಟ್ಟದಲ್ಲಿ ಇಲ್ಲವಾದರೂ ಚಿಕ್ಕದೊಂದು ಚಿನ್ನ ಖರೀದಿ ಮಾಡುವ ಪದ್ಧತಿ ಇದೆ. ಆದರೆ ಇದಕ್ಕೆ ಚಿನ್ನದ ಬೆಲೆ ಕೂಡ ಅಷ್ಟೇ ಮುಖ್ಯ. ಅಕ್ಷಯ ತೃತೀಯದಂದು ಕೆಲ ಬಾರಿ ಚಿನ್ನದ ಬೆಲೆ ಗಗನಕ್ಕೇರಿರುತ್ತದೆ. ಇನ್ನೂ ಕೆಲ ಬಾರಿ ಕೈಗೆಟಕುವ ದರದಲ್ಲಿ ಚಿನ್ನ ಖರೀದಿ ಮಾಡಬಹುದು. ಆದರೂ ಚಿನ್ನ ಯಾವತ್ತಿದ್ದರೂ ಚಿನ್ನನೇ. ಅದು ಕಡಿಮೆ ಬೆಲೆ ಸಿಗುವುದಾದರೆ ಅದಕಿಷ್ಟು ಪ್ರಾಮುಖ್ಯತೆ ಇರುತ್ತಿರಲಿಲ್ಲ.

ಹಾಗಾದರೆ ಈ ಬಾರಿಯ ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಲು ಇರುವ ಉತ್ತಮ ಸಮಯ ಯಾವುದು ಜೊತೆಗೆ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯೋಣ.
ಈ ಬಾರಿಯ ಅಕ್ಷಯ ತೃತೀಯಕ್ಕೆ ಚಿನ್ನದ ಖರೀದಿ ಸಮಯ ಏಪ್ರಿಲ್ 22 ರಂದು ಬೆಳಗ್ಗೆ 07:49 ಕ್ಕೆ ಪ್ರಾರಂಭವಾಗುತ್ತದೆ. ಏಪ್ರಿಲ್ 23 ರಂದು ಬೆಳಿಗ್ಗೆ 06:13 ಕ್ಕೆ ಕೊನೆಗೊಳ್ಳುತ್ತದೆ.
ಕಳೆದ 10 ದಿನದಲ್ಲಿ 4 ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಉಳಿದ ಆರು ದಿನಗಳ ಪೈಕಿ ನಾಲ್ಕು ಬಾರಿ ಇಳಿಕೆಯಾಗಿದ್ದರೆ, ಕೇವಲ ಒಂದು ಬಾರಿ ಮಾತ್ರ ಅಂದರೆ ಏಪ್ರಿಲ್ 17 ರಂದು ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಹಲವಾರು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ.

ನೀವು ಅಕ್ಷಯ ತೃತೀಯಕ್ಕೆ ಮುಂಚಿತವಾಗಿ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಚಿನ್ನದ ದರ ಹೇಗಿದೆ ಎಂಬುದನ್ನು ಪಟ್ಟಿಯಲ್ಲಿ ಗಮನಿಸಬಹುದು.
ಅಕ್ಷಯ ತೃತೀಯಕ್ಕೂ ಮುನ್ನ ಅಂದರೆ ಏಪ್ರಿಲ್ 21 ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಇಂಡಿಯಾ ಬುಲಿಯಾನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಶನ್ (ಐಬಿಜೆಎ) ವೆಜ್‌ಸೈಟ್ ಪ್ರಕಾರ, ಇಂದು ಚಿನ್ನದ ಬೆಲೆಯು 174 ರೂ. ಕುಸಿದು 60446 ರೂ.ಗೆ ತಲುಪಿದೆ.
ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ? 18 ಕ್ಯಾರೆಟ್‌ನಿಂದ 24 ಕ್ಯಾರೆಟ್‌ವರೆಗೆ ಚಿನ್ನದ ಬೆಲೆ 10 ಗ್ರಾಂಗೆ ಎಷ್ಟಿದೆ? ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಕ್ಯಾರೆಟ್ ಬೆಲೆ:
| ಕ್ಯಾರೆಟ್ | ಬೆಲೆ |
| 24 | 60,446 |
| 23 | 60,204 |
| 22 | 55,335 |
| 18 | 45,335 |
ಬೆಳ್ಳಿ 75 ಸಾವಿರಕ್ಕಿಂತ ಕಡಿಮೆ ಆಗಿದೆ. ಐಬಿಜೆಯ ವಬ್‌ಸೈಟ್ ಪ್ರಕಾರ, ಇಂದು ಬೆಳ್ಳಿಯ ಬೆಲೆಯೂ ಇಳಿಕೆ ಕಂಡಿದೆ. ಪ್ರತಿ ಕೆಜಿಗೆ 656 ರೂ.ನಷ್ಟು ಕುಸಿದು 74,763 ರೂ.ಗೆ ಅಗ್ಗವಾಗಿದೆ. ಮೊದಲು 75,419 ರೂ. ನಷ್ಟಿತ್ತು.
ಏಪ್ರಿಲ್ 22ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 300 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 55,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 330 ರೂಪಾಯಿ ಕುಗ್ಗಿದ್ದು ಪ್ರಸ್ತುತ 60,820 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂಪಾಯಿ ಇಳಿಕೆಯಾಗ್ಗಿದ್ದು ಪ್ರಸ್ತುತ 76,900 ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು 22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ) 24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)
ಮಂಗಳೂರು 22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ) 24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)
ಮೈಸೂರು 22 ಕ್ಯಾರೆಟ್ ಚಿನ್ನ: 55,800 ರೂಪಾಯಿ (-300 ರೂಪಾಯಿ) 24 ಕ್ಯಾರೆಟ್ ಚಿನ್ನ: 60,870 ರೂಪಾಯಿ (-310 ರೂಪಾಯಿ)
ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ
ಕೆಡಿಯಾ ಅಡ್ವೈಸರಿಯ ನಿರ್ದೇಶಕ ಅಜಯ್ ಕೇಡಿಯಾ ಪ್ರಕಾರ ಈ ವರ್ಷ ಚಿನ್ನದ ಬೆಲೆಯು ಮತ್ತಷ್ಟು ಏರಿಕೆಯಾಗುವ ಸಾಧ್ತೆಯಿದೆ ಎಂದು ಅಂದಾಜಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಹೀಗೆ ಹೆಚ್ಚಾದರೆ ಅದು 64,000 ತಲುಪಬಹುದು ಎನ್ನಲಾಗಿದೆ.
ಷೇರುಪೆಟೆಯಲ್ಲಿ ನಡೆಯುತ್ತಿರುವ ಏರಿಳಿತಗಳಿಂದ ಚಿನ್ನಕ್ಕೆ ಬೆಂಬಲ ಸಿಗುತ್ತಿದೆ ಎನ್ನುತ್ತಾರೆ ಐಐಎಫ್‌ಎಲ್ ಸೆಕ್ಯುರಿಟೀಸ್ ಉಪಾಧ್ಯಕ್ಷ ಅನುಜ್ ಗುಪ್ತಾ. ಇದರಿಂದಾಗಿ ಈ ವರ್ಷಾಂತ್ಯದ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 65000 ರೂ ತಲುಪಿದ್ರೂ ಅಚ್ಚರಿಯಿಲ್ಲ.
2023ರಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ವ್ಯತ್ಯಾಸಗೊಂಡಿದೆ ಎಂಬುದನ್ನು ಈ ಕೆಳಗೆ ಕಾಣಬಹುದು.
ದಿನಾಂಕ ಬೆಲೆ(ರೂ.10 ಗ್ರಾಂ):
| ದಿನಾಂಕ | ಬೆಲೆ |
| ಜನವರಿ 1 | 54,867 |
| ಫೆಬ್ರವರಿ 1 | 57,910 |
| ಮಾರ್ಚ್ 1 | 56,085 |
| ಏಪ್ರಿಲ್ 1 | 59,252 |
| ಏಪ್ರಿಲ್ 21 | 60,446 |
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ












Click it and Unblock the Notifications