ಝೀ ನ್ಯೂಸ್ ಅಭಿಮತ: ಮಣಿಪುರದಲ್ಲಿ ಬಿಜೆಪಿಗೆ ಮತ್ತೆ ಬಹುಮತ
ಮಣಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಾಗಿ ಈಗಾಗಲೇ ದಿನಾಂಕ ಪ್ರಕಟಿಸಿದ್ದು, ಫೆಬ್ರವರಿ 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ನಡುವೆ ವಿವಿಧ ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಜನಾಭಿಪ್ರಾಯ ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತಿವೆ. ಜೀ ನ್ಯೂಸ್ ಡಿಸೈನ್ ಬಾಕ್ಸ್ಡ್ ಸಂಸ್ಥೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಶುಕ್ರವಾರದಂದು ಪ್ರಕಟಿಸಿದೆ.
ಮಣಿಪುರದಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಝೀ ನ್ಯೂಸ್ ಅಭಿಪ್ರಾಯ ಸಂಗ್ರಹವನ್ನು ನಡೆಸಿದ್ದು, ನೀಡಿರುವ ವರದಿಯಂತೆ ಬಿಜೆಪಿ 33-37 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೇವಲ 13-17 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ನಿರೀಕ್ಷೆಯಿದೆ. ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಸಾರ್ವಜನಿಕ ಅಭಿಪ್ರಾಯವನ್ನು ತಿಳಿಯಲು ಝೀ ನ್ಯೂಸ್ DesignBoxed (ರಾಜಕೀಯ ಪ್ರಚಾರ ನಿರ್ವಹಣಾ ಕಂಪನಿ, ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುವ ಸುದೀರ್ಘ ಅನುಭವವನ್ನು ಹೊಂದಿದೆ) ಜೊತೆಗೆ ಕೈಜೋಡಿಸಿ ವರದಿ ತಯಾರಿಸಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಶೇಕಡಾವಾರು ಮತ ಗಳಿಕೆ:
ಬಿಜೆಪಿ ಶೇ 41 ಮತಗಳನ್ನು ಪಡೆಯುತ್ತದೆ ಮತ್ತು ಕಾಂಗ್ರೆಸ್ ಶೇ 30 ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, NPF ಕೇವಲ ಶೇ 08 ಮತ್ತು NPP ಕೇವಲ ಶೇ 5 ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಇತರೆ ಶೇ 16ರಷ್ಟು ಗಳಿಸಬಹುದು.
ಮುಂಬರುವ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ. Zee News-DesignBoxed ಪ್ರಕಾರ, ಬಿಜೆಪಿ 33-37 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 13-17 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, NPF 4-6 ಸ್ಥಾನಗಳನ್ನು ಮತ್ತು NPP ಕೇವಲ 2-4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ಸೂಕ್ತ
ಮಣಿಪುರ ಚುನಾವಣೆಯಲ್ಲಿ ಶೇ.33 ರಷ್ಟು ಮತಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಅಭ್ಯರ್ಥಿಗೆ ಅತ್ಯಂತ ಜನಪ್ರಿಯ ಆಯ್ಕೆ ಎಂದು ಜನತೆ ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಒಕ್ರಾಮ್ ಇಬೋಬಿ ಸಿಂಗ್ ಅವರು ಶೇ 19 ರಷ್ಟು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರೆ, ಮತ್ತೊಬ್ಬ ಕಾಂಗ್ರೆಸ್ ನಾಯಕ ಎನ್ ಲೋಕೇನ್ ಸಿಂಗ್ ಅವರು ಶೇ 12 ರೊಂದಿಗೆ ಮೂರನೇ ಆಯ್ಕೆಯಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ
ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 31 ರಿಂದ 37 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡದ ಕಾಂಗ್ರೆಸ್ 13-19 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಸಿಎಂ ಬಿರೇನ್ ಸಿಂಗ್ ಅವರೇ ಸೂಕ್ತ
ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಸಿಎಂ ಬಿರೇನ್ ಸಿಂಗ್ ಅವರೇ ಸೂಕ್ತ ಎಂದು ಜನಾಭಿಪ್ರಾಯ ಬಂದಿದೆ. ಯಾರಿಗೆ ಎಷ್ಟು ಮತ ಬಂದಿದೆ ಇಲ್ಲಿದೆ ಅಂಕಿ ಅಂಶ; ಬಿರೇನ್ ಸಿಂಗ್: ಶೇ 36 ಓಕ್ರಾಮ್ ಐಬೋಬಿ: ಶೇ 17 ಯುಮ್ನಮ್ ಜೋಯ್ಕುಮಾರ್ ಸಿಂಗ್: ಶೇ 11 ಗಾಯ್ ಖೆಂಗಮ್: ಶೇ 10 ಟಿ ಬಿಸ್ವಜೀತ್: ಶೇ 05 ಇತರೆ: ಶೇ 21.












Click it and Unblock the Notifications