Man riding bull: ಗೂಳಿ ಮೇಲೆ ಸವಾರಿ ಮಾಡಿದ ಭೂಪ- ವಾಹನ ಸವಾರರು ಕಕ್ಕಾಬಿಕ್ಕಿ- ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಜನರು ತಮ್ಮ ವಿಡಿಯೋಗಳಿಗೆ ಲೈಕ್ಸ್ ಪಡೆಯಲು ಮತ್ತು ವೀಕ್ಷಣೆಗಳನ್ನು ಹೆಚ್ಚಿಸುವ ಸಲುವಾಗಿ ತಮ್ಮ ಜೀವನದ ಜೊತೆ ಆಟವಾಡುವುದನ್ನು ಕಾಣಬಹುದು. ಇಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಸಾಮಾನ್ಯವಾಗಿ ನಾವು ಕುದುರೆ ಸವಾರಿ ಮಾಡುವುದನ್ನು ನೋಡಿದ್ದೇವೆ. ಕತ್ತೆ ಸವಾರಿ ಕೂಡ ನೋಡಿದ್ದೇವೆ. ಆದರೆ ವೈರಲ್ ವೀಡಿಯೋದಲ್ಲಿ ಭೂಪನೊಬ್ಬ ಗೂಳಿ ಮೇಲೆ ಸವಾರಿ ಮಾಡಿದ್ದು ಕಂಡುಬಂದಿದೆ. ಕುದುರೆ ಮೇಲೆ ಕುಳಿತು ಕೊಂಚ ತರಬೇತಿ ನೀಡಿ ನಿಯಂತ್ರಣಕ್ಕೆ ತೆಗೆದುಕೊಂಡು ಸವಾರಿ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಎದ್ವಾತದ್ವಾ ನುಗ್ಗುವ ಗೂಳಿ ಮೇಲೆ ಕುಳಿತು ಸವಾರಿ ಮಾಡಿದ್ದಾನೆ.

Young man riding bull - motorists were shocked - video

ವೈರಲ್ ಆದ ವಿಡಿಯೋದಲ್ಲಿ ರಾತ್ರಿ ವೇಳೆ ವಾಹನ ಸವಾರರು ಅಷ್ಟಾಗಿ ಕಂಡು ಬರುವುದಿಲ್ಲ. ಇದನ್ನು ನೋಡಿದರೆ ಈ ವಿಡಿಯೋ ಮಧ್ಯರಾತ್ರಿ ಸೆರೆ ಹಿಡಿದಿರಬಹುದು ಎನಿಸುತ್ತದೆ. ಖಾಲಿ ರಸ್ತೆಯಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಚಲಿಸುವುದನ್ನು ಕಾಣಬಹುದು. ಅವರು ಇದ್ದಕ್ಕಿದ್ದಂತೆ ಯೂಟರ್ನ್ ಪಡೆದುಕೊಳ್ಳುತ್ತಾರೆ. ತಕ್ಷಣ ಅವರ ಹಿಂಬದಿಯಿಂದ ಗೂಳಿಯೊಂದು ಹಾದು ವೇಗವಾಗಿ ಓಡುತ್ತದೆ. ಆ ಗೂಳಿ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಕಾಣಬಹುದು. ಮುಂದೆ ಹೋಗುತ್ತಿದ್ದಂತೆ ಗೂಳಿ ಬಲಕ್ಕೆ ತಿರುಗುತ್ತದೆ. ಇದು ನಿಜಕ್ಕೂ ಆಶ್ಚರ್ಯ ಹಾಗೂ ಭಯಾನಕ ದೃಶ್ಯ.

ರಿಷಿಕೇಶದ ಬೀದಿಗಳಲ್ಲಿ ತೆಗೆದ ವಿಡಿಯೋ

ಯೂಟ್ಯೂಬರ್ ಸತ್ಯ ಪ್ರಕಾಶ್ ಭಾರತಿ ಅವರು ತಮ್ಮ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ಲಿಪ್ ರಿಷಿಕೇಶದಿಂದ ಬಂದಿದೆ. ಇದರಲ್ಲಿ ಹುಡುಗನು ಗೂಳಿಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಆತ ನಿರ್ಭೀತನಾಗಿ ಕುದುರೆ ಸವಾರಿ ಮಾಡುತ್ತಿರುವಂತೆ ಗೂಳಿಯ ಮೇಲೆ ಕುಳಿತಿದ್ದಾನೆ. ವೀಡಿಯೊದಲ್ಲಿ ವ್ಯಕ್ತಿ ಕೈಶಾಲ್ ಪತಿ ನಾಥ್ ಕಿ ಜೈ ಹೋ ಎಂದು ಹೇಳುವುದನ್ನು ಕೇಳಬಹುದು.

ಈ ರೀತಿಯಾಗಿ ಯುವಕನೊಬ್ಬ ಗೂಳಿಯನ್ನು ಬೀದಿಗಳಲ್ಲಿ ಓಡಿಸುತ್ತಿರುವುದನ್ನು ಕಂಡು ಜನರು ಆಶ್ಚರ್ಯ ಪಡುತ್ತಿದ್ದು, ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹಲವರು ಯುವಕನಿಗೆ ಹುಚ್ಚು ಹಿಡಿದಿದ್ದು, ಇಂತಹ ಅಪಾಯಕಾರಿ ಕೆಲಸ ಮಾಡಬೇಡಿ ಎಂದು ಹಲವರು ಸಲಹೆ ನೀಡುತ್ತಿದ್ದಾರೆ. ಆತ ಗೂಳಿಯನ್ನು ಓಡಿಸುವ ವೇಗದಲ್ಲಿ ಯಾವುದೇ ಘಟನೆ ಸಂಭವಿಸಬಹುದು. ಆದರೆ ಇದನ್ನು ಮೀರಿ ಈ ಯುವಕ ಗೂಳಿ ಮೇಲೆ ಸವಾರಿ ಮಾಡಿದ್ದಾನೆ.

ಅಪಾಯಕಾರಿ ಸ್ಟಂಟ್

ವಾಹನಗಳ ಮೇಲೆ ಅಥವಾ ಪ್ರಾಣಿಗಳ ಮೇಲೆ ಸ್ಟಂಟ್‌ಗಳು ನಿಮಗೆ ಹಾಗೂ ಇತರರಿಗೆ ಅಪಾಯಕಾರಿಯಾಗಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಲೈಕ್‌ಗಳು ಅಥವಾ ಕಾಮೆಂಟ್‌ಗಳಿಗಾಗಿ ಜನರು ತಮ್ಮ ಪ್ರಾಣವನ್ನು ಪಣಕ್ಕಿಡುವ ಮೊದಲು ಒಮ್ಮೆಯೂ ಯೋಚಿಸುವುದಿಲ್ಲ. ಆದರೆ ಹಾಗೆ ಮಾಡುವುದು ಅತ್ಯಂತ ಅಪಾಯಕಾರಿ.

ಮತ್ತೊಂದು ವೈರಲ್ ವಿಡಿಯೋ

ಆತ್ಮ ವಿಶ್ವಾಸ ಇರಬೇಕು, ಆದರೆ ಅತಿಯಾದ ಆತ್ಮವಿಶ್ವಾಸ ಯಾವತ್ತು ಒಳ್ಳೆಯದಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗ್ಗುವವರ ಜೊತೆ ಏನಾಗುತ್ತದೆ ಎನ್ನುವುದನ್ನು ಅನೇಕ ಬಾರಿ ಕೇಳಿರಬಹುದು, ಓದಿರಬಹುದು. ಅತಿಯಾದ ಆತ್ಮವಿಶ್ವಾಸ ತೋರುವ ವ್ಯಕ್ತಿ ಜೊತೆ ಏನಾಗುತ್ತದೆ ಎಂದು ಇತ್ತೀಚೆಗೆ ವೈರಲ್ ವಿಡಿಯೋ ತೋರಿಸಿತ್ತು.

ಇಲ್ಲಿ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಕುಳಿತುಕೊಂಡು ಅದನ್ನು ನಿಯಂತ್ರಿಸುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗುತ್ತಾನೆ. ಆದರೆ ಮರು ಕ್ಷಣವೇ ಗೂಳಿ ಆ ವ್ಯಕ್ತಿಯ ಆತ್ಮವಿಶ್ವಾಸವನ್ನು ಮುರಿಯುತ್ತದೆ. ಆವರಣದಲ್ಲಿರುವ ಗೂಳಿ ತನ್ನ ಮೇಲೆ ಕುಳಿತ ವ್ಯಕ್ತಿಯನ್ನು ಕ್ಷಣ ಮಾತ್ರದಲ್ಲಿ ನೆಲಕ್ಕಪ್ಪಳಿಸುತ್ತದೆ. ಇಲ್ಲಿ ವ್ಯಕ್ತಿ ಬಿದ್ದ ರೀತಿಯನ್ನು ನೋಡಿದರೆ ಆತನಿಗೆ ಸಾಕಷ್ಟು ಗಾಯಗಳಾಗಿರಬೇಕೆಂದು ಎನ್ನುವುದನ್ನು ಸ್ಪಷ್ಟವಾಗಿ ಊಹಿಸಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಗೂಳಿ ಆವರಣದಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಂದು ಗೂಳಿಯ ಮೇಲೆ ಸವಾರಿ ಮಾಡುತ್ತಾನೆ. ತನ್ನ ಮೇಲೆ ಸವಾರಿ ಮಾಡುತ್ತಿರುವ ವ್ಯಕ್ತಿಯನ್ನು ನೋಡಿ, ಗೂಳಿಯು ಕೋಪಗೊಂಡು ಎತ್ತರಕ್ಕೆ ಜಿಗಿಯುತ್ತದೆ. ಕಣ್ಣು ಮಿಟುಕಿಸುವುದರೊಳಗೆ ಗೂಳಿ ವ್ಯಕ್ತಿಯನ್ನು ನೆಲಕ್ಕುರುಳಿಸಿ ಬಿಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+