ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year end 2022; ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ

|
Google Oneindia Kannada News

2022ರಲ್ಲಿ ಉದ್ಯಾನ ನಗರಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕರ್ನಾಟಕ ಸರ್ಕಾರ ಇದಕ್ಕೆ 'ಪ್ರಗತಿಯ ಪ್ರತಿಮೆ' ಎಂದು ನಾಮಕರಣ ಮಾಡಿದೆ.

ಬೆಂಗಳೂರಿನ ಬೆಳವಣಿಗೆಗೆ ನಗರ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಕರ್ನಾಟಕ ಸರ್ಕಾರ ಈ ಪ್ರತಿಮೆಯನ್ನು ನಿರ್ಮಿಸಿದೆ. ಪ್ರಧಾನಿ ಮೋದಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಪವಿತ್ರ ಜಲವನ್ನು ಸಮರ್ಪಿಸಿದರು. ಸವಿನೆನಪಿಗಾಗಿ ಸಸಿಯನ್ನೂ ನೆಟ್ಟರು.

Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ನಗರದಲ್ಲಿರುವ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಈ ಪ್ರತಿಮೆಯದ್ದಾಗಿದೆ. ಸುಮಾರು 18 ತಿಂಗಳಿನಲ್ಲಿ 84 ಕೋಟಿ ರೂ. ಖರ್ಚು ಮಾಡಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ

Year End 2022 Narendra Modi Unveiled 108 Feet Statue Of Kempegowda At Bengaluru

ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿಕ ನರೇಂದ್ರ ಮೋದಿ ಪ್ರತಿಮೆ ಬಳಿ 23 ಎಕರೆ ಪ್ರದೇಶದಲ್ಲಿ ಸ್ಥಾಪನೆ ಮಾಡುವ ಥೀಮ್‌ ಪಾರ್ಕ್‌ಗೆ ಸಹ ಶಂಕುಸ್ಥಾಪನೆ ಮಾಡಿದರು. ಕೆಂಪೇಗೌಡರ ಪ್ರತಿಮೆ ನಗರದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

108-ft Kempegowda statue : 108 ಅಡಿ ಕೆಂಪೇಗೌಡ ಪ್ರತಿಮೆ ವಿಶೇಷತೆಗಳು 108-ft Kempegowda statue : 108 ಅಡಿ ಕೆಂಪೇಗೌಡ ಪ್ರತಿಮೆ ವಿಶೇಷತೆಗಳು

ಪ್ರತಿಮೆ ಅನಾವರಣ ಮಾಡಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಬೆಂಗಳೂರು ನಿರ್ಮಾಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಪಾತ್ರ ಅಸಾಧಾರಣವಾದುದು. ಜನರ ಕಲ್ಯಾಣವನ್ನು ಯಾವಾಗಲೂ ಎಲ್ಲಕ್ಕಿಂತ ಮಿಗಿಲಾಗಿ ನೋಡುತ್ತಿದ್ದ ಕ್ರಿಯಾಶೀಲ ದಾರ್ಶನಿಕ ಎಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಪ್ರಗತಿಯ ಪ್ರತಿಮೆಯನ್ನು ಉದ್ಘಾಟಿಸಿರುವುದು ಗೌರವದ ವಿಷಯವಾಗಿದೆ' ಎಂದು ಹೇಳಿದರು.

ಪ್ರತಿಮೆ ವಿಶೇಷತೆಗಳು; ಬೆಂಗಳೂರು ನಗರದ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆ ಖ್ಯಾತಿಯ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಈ ಪ್ರತಿಮೆಯ ತೂಕ 220 ಟನ್. ಕಂಚು 98 ಕೆಜಿ. ಅಡಿಪಾಯಕ್ಕಾಗಿ ಬಳಕೆ ಮಾಡಲಾದ ಕಬ್ಬಿಣ 120 ಟನ್. 18 ಅಡಿ ವಿಸ್ತಾರವಾದ ಕಟ್ಟೆಯ ಮೇಲೆ ಪ್ರತಿಮೆ ಅಡಿಪಾಯ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳನ್ನು ಸಹ ರಚಿಸಲಾಗಿದೆ.

ಪ್ರತಿಮೆಯ ಕೈಯಲ್ಲಿ ಇರುವ ಖಡ್ಗ 4 ಟನ್ ತೂಕವನ್ನು ಹೊಂದಿದೆ. ಪ್ರತಿಮೆ ಬಳಿಕ ನಿರ್ಮಾಣವಾಗುತ್ತಿರುವ ಥೀಮ್‌ ಪಾರ್ಕ್‌ಗೆ ರಾಜ್ಯಾದ್ಯಂತ 22 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ ಮೃತ್ತಿಕೆ (ಪವಿತ್ರ ಮಣ್ಣು) ಸಂಗ್ರಹ ಮಾಡಲಾಗಿದೆ.

ಈ ಪ್ರತಿಮೆ ಅನಾವರಣಗೊಳ್ಳುವುದಕ್ಕೆ ಮೊದಲೇ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್' ಸೇರಿದೆ. ನಗರವನ್ನು ನಿರ್ಮಾಣ ಮಾಡಿದವರ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗೆಳಿಕೆಗೆಗ ಪ್ರಗತಿಯ ಪ್ರತಿಮೆ ಪಾತ್ರವಾಗಿದೆ.

ಕೆಂಪೇಗೌಡರ ಕುರಿತು; 1537ರಲ್ಲಿಯೇ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರು ವಿಜಯನಗರ ಸಾಮಾಜ್ಯದ ಸಾಮಂತ ರಾಜರಾಗಿದ್ದರು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾಡಬೇಕು ಎಂದು ಅವರು ಕನಸು ಕಂಡಿದ್ದರು.

ಪ್ರವಾಣಿ ತಾಣವಾಗಿ ಅಭಿವೃದ್ಧಿ; ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಇರುವ ಪ್ರದೇಶವನ್ನು ಪ್ರಮುಖ ಪ್ರವಾಸಿ ತಾಣವಾಗಿ ಮಾಡಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ.

ಪ್ರಗತಿಯ ಪ್ರತಿಮೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಸೂಕ್ತ‌ ಸೌಲಭ್ಯ ಕಲ್ಪಿಸುವ ಸಂಬಂಧ ಯೋಜನೆ ತಯಾರು ಮಾಡಲಾಗಿದೆ. ವಾಹನ ನಿಲುಗಡೆ ವ್ಯವಸ್ಥೆ, ಪ್ರತಿಮೆಯ ಬಳಿ ತಲುಪುವ ಮಾರ್ಗದ ಕುರಿತು ಮಾಹಿತಿ ನೀಡುವುದು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ.

ಬೆಂಗಳೂರು ನಗರಕ್ಕೆ ಆಗಮಿಸುವ ಜನರು ವಿಮಾನ ನಿಲ್ದಾಣದ ಬಳಿಯಲ್ಲಿಯೇ ಪ್ರಗತಿಯ ಪ್ರತಿಮೆ ವೀಕ್ಷಣೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರತಿಮೆ ವೀಕ್ಷಿಸಲು ವ್ಯವಸ್ಥಿತ ಅವಕಾಶ ನೀಡಲಾಗುತ್ತದೆ.

ಪ್ರಗತಿಯ ಪ್ರತಿಮೆ ವೀಕ್ಷಣೆ ಮಾಡಲು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ವಾರಾಂತ್ಯದಲ್ಲಿ ಬೆಂಗಳೂರಿನ ಜನರು ವಿಮಾನ ನಿಲ್ದಾಣದ ಕಡೆ ಹೋಗಿ ಪ್ರತಿಮೆ ವೀಕ್ಷಣೆ ಮಾಡುತ್ತಿದ್ದಾರೆ.

English summary
Year end 2022; Year end 2022; Prime minister Narendra Modi unveiled a 108-feet-long bronze statue of Sri Nadaprabhu Kempegowda in Bengaluru on November 2022. Statue is built to commemorate the contribution of Nadaprabhu Kempegowda the founder of the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X