2020 ರಲ್ಲಿ ಬ್ರೆಜಿಲ್‌ನಲ್ಲಿ ಕಾಡ್ಗಿಚ್ಚು ಕೊಂದ ಪ್ರಾಣಿಗಳೆಷ್ಟು?

ಬ್ರೆಸಿಲಿಯಾ, ಡಿಸೆಂಬರ್ 30: ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಅನೇಕ ಸಮಸ್ಯೆಗಳನ್ನು ಉಲ್ಬಣಗೊಳಿಸುವುದರೊಂದಿಗೆ ಬ್ರೆಜಿಲ್‌ನಲ್ಲಿ ಕಾಡ್ಗಿಚ್ಚಿಗೆ 17 ಮಿಲಿಯನ್ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಹೊಸ ಅಧ್ಯಯನ ಕಂಡುಹಿಡಿದಿದೆ. 2020ರಲ್ಲಿ ಬ್ರೆಜಿಲ್‌ನ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡ ಕಾಳ್ಗಿಚ್ಚುಗಳಿಂದ ಪ್ರಾಣಿಗಳ ಸಾವಿನ ಅಂಕಿಅಂಶಗಳನ್ನು ಎಣಿಸಲು ವಿಜ್ಞಾನಿಗಳು ಪ್ರಯತ್ನಿಸಿದರು. ಈ ವೇಳೆ 2020ರಲ್ಲಿ ಕಾಡ್ಗಿಚ್ಚಿಗೆ 17 ಮಿಲಿಯನ್ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಕಂಡುಹಿಡಿಯಲಾಗಿದೆ. ಬ್ರೆಜಿಲ್ ವಿಶ್ವದ ಅತಿದೊಡ್ಡ ಮಳೆಕಾಡು ಮತ್ತು ಉಷ್ಣವಲಯದ ತೇವ ಪ್ರದೇಶಗಳಿಗೆ ನೆಲೆಯಾಗಿದೆ. ಅಮೆಜಾನ್ ಮತ್ತು ಪಂಟಾನಾಲ್ ಕ್ರಮವಾಗಿ 2019 ಮತ್ತು 2020 ರಲ್ಲಿಅಪಾರ ಕಾಡ್ಗಿಚ್ಚಿಗೆ ಸಾಕ್ಷಿಯಾಗಿವೆ. ಇದು 2015 ರಿಂದ ಹೆಚ್ಚಿನ ವಾರ್ಷಿಕ ಅರಣ್ಯ ನಷ್ಟಕ್ಕೆ ಕಾರಣವಾಗಿದೆ. ಅಪಾರ ಮಾಲಿನ್ಯಕ್ಕೆ ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಹವಾಮಾನ ಬದಲಾಗಿ ಹೋಗಿದೆ. ಹೆಚ್ಚಿನ ತಾಪಮಾನ, ಗಾಳಿ, ಮಳೆ ಪ್ರಮಾಣದಲ್ಲಿ ಇಳಿಕೆ ಗಮನಾರ್ಹವಾಗಿ ಪ್ರಭಾವ ಬೀರಿದೆ. ಹವಮಾನ ಬದಲಾವಣೆಯಿಂದ ಕಾಳ್ಗಿಚ್ಚುಗಳು ಹೆಚ್ಚಾಗಿವೆ. ಮಾನವ-ಪ್ರೇರಿತ ಹವಾಮಾನ ಬದಲಾವಣೆಯ ಪರಿಣಾಮಗಳಲ್ಲಿ ಇದು ಒಂದಾಗಿದೆ.

17 ಮಿಲಿಯನ್ ಪ್ರಾಣಿಗಳು ಬಲಿ

17 ಮಿಲಿಯನ್ ಪ್ರಾಣಿಗಳು ಬಲಿ

ಹವಾಮಾನ ವೈಪರಿತ್ಯ ಸಮಸ್ಯೆಗೆ ಉಂಟಾದ ಈ ಕಾಡ್ಗಿಚ್ಚಿನಲ್ಲಿ ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ಸೇರಿದಂತೆ ಸುಮಾರು 17 ಮಿಲಿಯನ್ ಪ್ರಾಣಿಗಳು ತಮ್ಮ ಜೀವನ ಮತ್ತು ಜೀವವೈವಿಧ್ಯತೆಯನ್ನು ಕಳೆದುಕೊಂಡಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ವೈಜ್ಞಾನಿಕ ವರದಿಗಳಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ಜೀವವೈವಿಧ್ಯದ ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ಬೆಂಕಿಯ ಪಾತ್ರದ ಹೊರತಾಗಿಯೂ, ಕಾಡ್ಗಿಚ್ಚುಗಳು ವನ್ಯಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಪಾರ ಪ್ರದೇಶ ಸುಟ್ಟು ಕರಕಲು

ಅಪಾರ ಪ್ರದೇಶ ಸುಟ್ಟು ಕರಕಲು

ಬ್ರೆಜಿಲ್‌ನ ಪಂಟಾನಲ್ ವೆಟ್‌ಲ್ಯಾಂಡ್‌ನಲ್ಲಿ 2020 ರ ಕಾಳ್ಗಿಚ್ಚುಗಳ ಪರಿಣಾಮವನ್ನು ಅಂದಾಜು ಮಾಡಲು ಅವರು ನೆಲದ ಸಮೀಕ್ಷೆಗಳನ್ನು ನಡೆಸಿದರು. ಬೆಂಕಿಯಿಂದ ಪ್ರಭಾವಿತವಾಗಿರುವ 39,030 ಚದರ ಕಿಲೋಮೀಟರ್ಗಳಷ್ಟು ದೊಡ್ಡ ಪ್ರದೇಶದಲ್ಲಿ ಅಧ್ಯಯನವನ್ನು ನಡೆಸಲಾಯಿತು. ಈ ಘಟನೆ ಬ್ರೆಜಿಲ್ ಇರುವ ಖಂಡದಲ್ಲಿ ಅಮೆಜಾನ್ ನಂತರ 2ನೇ ಅತಿ ಉದ್ದದ ನದಿ ಎನಿಸಿಕೊಂಡಿರುವ ಪರಾನಾ ಮಟ್ಟ 1944 ರ ನಂತರ ಅತ್ಯಂತ ಹೀನಾಯ ಪರಿಸ್ಥಿತಿಗೆ ಬಂದು ತಲುಪಿರುವುದನ್ನು ನೆನಪಿಸುತ್ತದೆ ಎಂದು ವರದಿ ಹೇಳಿದೆ.

ಕಾಡ್ಗಿಚ್ಚಿಗೆ ಕಾರಣವೇನು?

ಕಾಡ್ಗಿಚ್ಚಿಗೆ ಕಾರಣವೇನು?

ಕಾಡ್ಗಿಚ್ಚುಗಳ ತೀವ್ರತೆ ವಿಜ್ಞಾನಿಗಳನ್ನೇ ಬೆಚ್ಚಿ ಬೀಳಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಕಾಡ್ಗಿಚ್ಚಿನಿಂದ ಜಾಗತಿಕವಾಗಿ ಅಭೂತಪೂರ್ವವಾದ ಪ್ರದೇಶ ಸುಟ್ಟು ಕರಕಲಾಗಿದೆ. ಆದಾಗ್ಯೂ, ವನ್ಯಜೀವಿಗಳ ಮೇಲೆ ಕಾಡ್ಗಿಚ್ಚಿನ ಪರಿಣಾಮಗಳು ಇನ್ನೂ ಸರಿಯಾಗಿ ತಿಳಿದಿಲ್ಲ. ಹವಾಮಾನ ಬದಲಾವಣೆಯ ಹೊರತಾಗಿ ಅವರು ಅರಣ್ಯನಾಶ, ತಪ್ಪಾದ ದಹನ ಮತ್ತು ಬೆಂಕಿಯ ಬಳಕೆ, ಅನುಪಸ್ಥಿತಿ ಅಥವಾ ಅಸಮರ್ಪಕ ಭೂದೃಶ್ಯ ನಿರ್ವಹಣೆ ತಂತ್ರಗಳು, ಸಸ್ಯವರ್ಗದ ಅತಿಕ್ರಮಣ ಮತ್ತು ಹಸಿರುಮನೆ ಅನಿಲಗಳ ಬಿಡುಗಡೆಯಂತಹ ಪ್ರಾದೇಶಿಕ ಅಂಶಗಳನ್ನು ದೂಷಿಸುತ್ತಾರೆ. ತೀವ್ರವಾದ ಕಾಡ್ಗಿಚ್ಚು ಹಿಂದಿನ ಪ್ರಮುಖ ಕಾರಣವೆಂದರೆ ಹವಾಮಾನ ಬದಲಾವಣೆ ಎಂದಿದ್ದಾರೆ.

ಭೂಗಳ್ಳರಿಂದ ಅರಣ್ಯ ನಾಶ

ಭೂಗಳ್ಳರಿಂದ ಅರಣ್ಯ ನಾಶ

2019 ರಲ್ಲಿ ಪಂಟಾನಾಲ್‌ನ ಬ್ರೆಜಿಲಿಯನ್ ಭಾಗದ 16,210 ಚದರ ಕಿಲೋಮೀಟರ್ ಪ್ರದೇಶವನ್ನು ಕಾಡ್ಗಿಚ್ಚು ಸುಟ್ಟುಹಾಕಿದೆ. ಇದು 2020 ರಲ್ಲಿ 39,030 ಚದರ ಕಿಲೋಮೀಟರ್‌ಗೆ ಏರಿಕೆಯಾಗಿ ಬೆರಗುಗೊಳಿಸಿದೆ. ಮಳೆಯ ಪ್ರಮಾಣದಲ್ಲಿನ ಇಳಿಕೆ, ಹೆಚ್ಚಿನ ತಾಪಮಾನ ಮತ್ತು ವಿಪರೀತ ಹವಾಮಾನ ಬದಲಾವಣೆಯಿಂದ ಕಾಡ್ಗಿಚ್ಚು ಸಂಭವಿಸಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಬ್ರೆಜಿಲಿಯನ್ ಹೆಚ್ಚಿನ ಮಾನವ ನಿರ್ಮಿತವಾಗಿರುವ ಕಟ್ಟಡಗಳು, ಕಾನೂನುಬಾಹಿರವಾಗಿ ಅರಣ್ಯವನ್ನು ತೆರವುಗೊಳಿಸುವ ಭೂಗಳ್ಳರಿಂದ ಅರಣ್ಯ ನಾಶವಾಗುತ್ತಿದೆ. ಐತಿಹಾಸಿಕ ಮಾಹಿತಿಯ ಪ್ರಕಾರ ಬೆಂಕಿಯು ಜೂನ್‌ನಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತಿದೆ. ಹೀಗಾಗಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಈ ಪ್ರದೇಶದ ಅಭಿವೃದ್ಧಿಗೆ ಪದೇ ಪದೇ ಕರೆ ನೀಡಿದ್ದಾರೆ.

ಕಾಡು ನಾಶ

ಕಾಡು ನಾಶ

ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದ ಬರಗಾಲ ತೀವ್ರವಾಗಿದೆ ಎನ್ನುತ್ತಿದ್ದಾರೆ ತಜ್ಞರು. ಪರಾನಾ ನದಿಗೆ ಬಂದ ಪರಿಸ್ಥಿತಿಯೇ ಮುಂದೆ ಅಮೆಜಾನ್ ನದಿಗೂ ಬರಬಹುದು ಎಂಬ ಭಯ ಕಾಡುತ್ತಿದೆ. ದಿನದಿಂದ ದಿನಕ್ಕೆ ಅಮೆಜಾನ್ ಕಾಡನ್ನು ನಾಶ ಮಾಡುತ್ತಿರುವುದು. ಹವಾಮಾನ ವೈಪರಿತ್ಯ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೂಡಲೇ ಕ್ರಮಕೈಗೊಂಡು ಅರಣ್ಯ ನಾಶ ತಪ್ಪಿಸದೇ ಇದ್ದರೆ ಬರಗಾಲ ಮತ್ತಷ್ಟು ಕಠಿಣವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರು. ಆದ್ರೆ ದಕ್ಷಿಣ ಅಮೆರಿಕದ ರಾಜಕಾರಣಿಗಳಿಗೆ ಪ್ರಜೆಗಳ ಹಿತದೃಷ್ಟಿಗಿಂತಲೂ ಕಾಸು ಮಾಡುವ ಹುಚ್ಚು ಹೆಚ್ಚಾಗುತ್ತಿದೆ. ಇದು ಅಮೆಜಾನ್ ಅರಣ್ಯ ಪ್ರದೇಶವನ್ನು ಬಲಿಪಡೆಯುತ್ತಿದೆ.

Recommended Video

      ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲೋಕೆ ಕಾರಣ KL ರಾಹುಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+