122 ವರ್ಷಗಳ ಹಳೆಯ ದಾಖಲೆಯನ್ನ ಮುರಿದ ಈ ವರ್ಷದ ತಾಪಮಾನ
ನವದೆಹಲಿ, ಏಪ್ರಿಲ್ 29 : ಭಾರತದಲ್ಲಿ ಪ್ರತಿವರ್ಷ ಕಳೆದಂತೆ ತಾಪಮಾನ ಪರಿಸ್ಥಿತಿ ಹದಗೆಡುತ್ತಿದೆ. ಅದರಲ್ಲೂ ಈ ವರ್ಷ ಮಾರ್ಚ್‌ನಲ್ಲಿಯೇ ಬಿಸಿಲಿನ ಬೇಗೆ ಆರಂಭವಾಗಿದ್ದು, ಈ ತಾಪಮಾನವು ಸುಮಾರು 122 ವರ್ಷಗಳ ಹಳೆಯ ದಾಖಲೆಯನ್ನೇ ಮುರಿದಿದೆ. ಈ ಮೂಲಕ ಗರಿಷ್ಟ ತಾಪಮಾನ ಹೆಚ್ಚಾಗಿದ್ದು, ಉತ್ತರ ಭಾರತದ ರಾಜ್ಯಗಳು ಬಿಸಿಗಾಳಿಗೆ ತತ್ತರಿಸಿ ಹೋಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ವಾರ ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷದ ಭಾರತದಲ್ಲಿ ಮಾರ್ಚ್ 11 ರಿಂದಲೇ ಬಿಸಿಗಾಳಿ ಪ್ರಾರಂಭವಾಗಿದ್ದು, 15 ರಾಜ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ಪ್ರಮಾಣ ಹೆಚ್ಚಾಗಿದ್ದು, ಜನರು ಬಿಸಿಗಾಳಿಗೆ ತತ್ತರಿಸಿ ಹೋಗಿದ್ದಾರೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ವರದಿ ಮಾಡಿದೆ.

ಮುಂದಿನ ಐದು ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಬಹುದು. ಈಗಾಗಲೇ ಹವಮಾನ ಇಲಾಖೆ ಮುಂಜಾಗೃತ ಕ್ರಮವಾಗಿ ದೆಹಲಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇದರಜೊತೆಗೆ ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ತಿಂಗಳ ಕೊನೆಯವರೆಗೂ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಇನ್ನು ಪೂರ್ವ ರಾಜ್ಯಗಳಾದ ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮುಂದಿನ ಕೆಲ ದಿನಗಳಲ್ಲಿ ಬಿಸಿಗಾಳಿಯಿಂದ ತತ್ತರಿಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಏನಿದು ಬಿಸಿಗಾಳಿ ?
ಒಂದು ಸ್ಥಳದ ಗರಿಷ್ಟ ತಾಪಮಾನವು ಕನಿಷ್ಟ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಲುಪಿದರೆ ಅದನ್ನ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಈಗಾಗಲೇ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದ್ದು, ಬಿಸಿಗಾಳಿ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಜನರು ಬಿಸಿಗಾಳಿ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ.
ಭಾರತದಲ್ಲಿ ತಾಪಮಾನ ಏರಿಕೆಯಾಗಲು ಮಾನವ ಕೂಡ ಕಾರಣ
ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ ನ ವರದಿಯ ಪ್ರಕಾರ ಮಾನವನ ಜಾಗತಿಕ ಚಟಿವಟಿಕೆಗಳಿಂದ ಭೂಮಿ ಇಷ್ಟು ಪ್ರಮಾಣದಲ್ಲಿ ತಾಪಮಾನಕ್ಕೆ ಏರಲು ಕಾರಣ ಎಂದು ಹೇಳಿದೆ. 1850-1900 ರ ಕೈಗಾರಿಕಾ ಪೂರ್ವದ ಅವಧಿಗೆ ಹೋಲಿಸಿ ನೋಡಿದರೆ, ಭೂಮಿಯ ಜಾಗತಿಕ ಮೇಲ್ಮೈ ತಾಪಮಾನವು 1.09 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದೆ. ಇದೇ ರೀತಿ ಭೂಮಂಡಲದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗುತ್ತ ಹೋದರೆ 2036 -2065 ರ ವೇಳೆಗೆ ಜಾಗತಿಕ ತಾಪಮಾನ 25 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಪಿಸಿಸಿ ವರದಿ ತಿಳಿಸಿದೆ.

ಭಾರತದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ತಾಪಮಾನದ ದಿನಗಳ ಸಂಖ್ಯೆ ಏರಿಕೆಯಾಗುತ್ತಿದೆ. 1981-90 ರಲ್ಲಿ 413 ದಿನಗಳಿಂದ 2001-10 ರಲ್ಲಿ 575 ಮತ್ತು 2011-20 ರಲ್ಲಿ 600ಕ್ಕೆ ತಾಪಮಾನ ದಿನಗಳು ಏರಿಕೆಯಾಗುತ್ತಾ ಸಾಗಿದೆ. ಭಾರತೀಯ ಹವಮಾನ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತ ನಿರ್ವಹಣಾ ಪ್ರಾಧಿಕಾರದ ಪ್ರಕಾರ 2015 ರಲ್ಲಿ ಸುಮಾರು ಒಂಬತ್ತು ರಾಜ್ಯಗಳು ಬಿಸಿಗಾಳಿಗೆ ಪ್ರಭಾವಿತವಾಗಿದ್ದರೆ, 2020ರಲ್ಲಿ 23 ರಾಜ್ಯಗಳು ಬಿಸಿಗಾಳಿಯ ಪ್ರಭಾವಿತಕ್ಕೆ ಒಳಗಾಗಿದೆ. ಈ ಮೂಲಕ ವರ್ಷ ಕಳೆದಂತೆ ತಾಪಮಾನ ಮಟ್ಟ ಹೆಚ್ಚಾಗುತ್ತಾ ಸಾಗಿದೆ.
ತಾಪಮಾನ ಮಟ್ಟ ಇದೇ ರೀತಿ ಏರಿಕೆಯಾಗುತ್ತಾ ಹೋದರೆ, ಜನರಿಗೆ ಹಾಗೂ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಂತೆ ಆಗುತ್ತದೆ. ದೇಶದಲ್ಲಿ ಲಕ್ಷಾಂತರ ಜನರು ಅದರಲ್ಲೂ ವಿಶೇಷವಾಗಿ ಕಟ್ಟಡ ಕಾರ್ಮಿಕರು, ರೈತರು, ಕಾರ್ಖಾನೆ ಕೆಲಸಗಾರರು ಹಾಗೂ ಹೆಚ್ಚಾಗಿ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಈ ತಾಪಮಾನ ಹೆಚ್ಚಳದಿಂದ ಭಾರೀ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅನೇಕ ಚರ್ಮ ರೋಗ ಸಮಸ್ಯೆಗಳು, ನಿಶಕ್ತಿ ಮುಂತಾದ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಇರುತ್ತದೆ. ಇದರ ಜೊತೆಗೆ ವಿದ್ಯುತ್ ಪೂರೈಕೆ ಕೂಡ ಸರಿಯಾಗಿ ಇಲ್ಲದಿರುವುದರಿಂದ ಆರ್ಥಿಕ ಚಟುವಟಿಕೆಗೂ ಕೂಡ ಮಂದಗತಿಯಲ್ಲಿ ಸಾಗುವ ಸಾಧ್ಯತೆ ಇದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Coconut: ರೈತರ ನಿದ್ದೆಗೆಡಿಸಿದ ತೆಂಗಿನ ರೋಗ: ಶೇ.14ರಷ್ಟು ತೋಟಗಳಿಗೆ ಕೀಟಬಾಧೆ; ತಜ್ಞರ ತಂಡ ಪರಿಶೀಲನೆ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications