ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Biography: ಉಪ ರಾಷ್ಟ್ರಪತಿ ಕಣದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಬದುಕಿನ ಹಾದಿ

|
Google Oneindia Kannada News

ನವದೆಹಲಿ, ಜುಲೈ 16: ರಾಷ್ಟ್ರಪತಿ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ವು ವಿಭಿನ್ನ ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾಗಿದೆ. ಉಪ ರಾಷ್ಟ್ರಪತಿ ಚುನಾವಣೆ ಆಯ್ಕೆ ವಿಷಯದಲ್ಲೂ ಎನ್‌ಡಿಎ ಅಂಥದ್ದೇ ನಿರ್ಧಾರವೊಂದನ್ನು ಘೋಷಿಸಿದೆ.
ಉಪ ರಾಷ್ಟ್ರಪತಿ ಚುನಾವಣೆಗಾಗಿ ಎನ್‌ಡಿಎ ಮೈತ್ರಿಕೂಟ ಘೋಷಿಸಿದ ಹೆಸರು ಕೂಡ ಅಚ್ಚರಿ ಮೂಡಿಸುವಂತಿದೆ. ಸದ್ಯಕ್ಕೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಪ್ ಧಂಖರ್ ತಮ್ಮ ಮೈತ್ರಿಕೂಟದ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಘೋಷಿಸಿದ್ದಾರೆ.

Breaking: ಉಪರಾಷ್ಟ್ರಪತಿ ಚುನಾವಣೆಗೆ ಜಗದೀಪ್ ಧಂಖರ್ ಎನ್‌ಡಿಎ ಅಭ್ಯರ್ಥಿBreaking: ಉಪರಾಷ್ಟ್ರಪತಿ ಚುನಾವಣೆಗೆ ಜಗದೀಪ್ ಧಂಖರ್ ಎನ್‌ಡಿಎ ಅಭ್ಯರ್ಥಿ

ನವದೆಹಲಿಯಲ್ಲಿ ಶನಿವಾರ ನಡೆದ ಸಂಸದೀಯ ಸಭೆಯಲ್ಲಿ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದು, ಮೈತ್ರಿಕೂಟದ ಸದಸ್ಯರೊಂದಿಗಿನ ಚರ್ಚೆ ನಂತರ ಅಭ್ಯರ್ಥಿ ಹೆಸರು ಘೋಷಣೆ ಆಯಿತು. ಈಗ ಎನ್‌ಡಿಎ ಕಲಿಯಾಗಿ ಕಣಕ್ಕಿಳಿಯಲು ಅಣಿಯಾಗಿರುವ ಜಗದೀಪ್ ಧಂಖರ್ ಸಾಗಿ ಬಂದ ರಾಜಕೀಯ ಮತ್ತು ಬದುಕಿನ ದಾರಿ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

Who is Jagdeep Dhankhar? Know all about NDAs candidate for Vice Presidential elections

ಜೀವನ ಮತ್ತು ಬೆಳವಣಿಗೆ:
ಜಗದೀಪ್ ಧಂಖರ್ 18 ಮೇ, 1951ರಂದು ರಾಜಸ್ಥಾನದ ಜುಂಜುನುದಲ್ಲಿ ಜನಿಸಿದರು. ಧಂಖರ್ ಅವರು ಮೇ 18, 1951 ರಂದು ರಾಜಸ್ಥಾನ ರಾಜ್ಯದ ಕಿತಾನ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಚಿತ್ತೋರ್‌ಗಢದ ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಧನಕರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಕಿತಾನ ಹಳ್ಳಿಯ ಶಾಲೆಯಲ್ಲಿ ಮುಗಿಸಿದರು.
70 ವರ್ಷದ ಇವರು ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಸುದೇಶ್ ಧಂಖರ್ ಆಗಿದ್ದು, ಇವರಿಗೆ ಒಬ್ಬ ಪುತ್ರರಿದ್ದಾರೆ.

ರಾಜಕೀಯ ಹಿನ್ನೆಲೆ:
ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಬ್ಬ ಭಾರತೀಯ ರಾಜಕಾರಣಿಯಾದ ಜಗದೀಪ್ ಧಂಖರ್, 2019ರ ಹೊತ್ತಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಪ್ರಾರಂಭಿಸಿದ್ದರು. ಅದಕ್ಕೂ ಪೂರ್ವದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 1989 ರಿಂದ 1991 ರವರೆಗೆ ಲೋಕಸಭೆಯ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. 9ನೇ ಲೋಕಸಭೆಯಲ್ಲಿ 1989-91ರ ಅವಧಿಯಲ್ಲಿ ರಾಜಸ್ಥಾನದ ಜುಂಜುನುದಿಂದ ಜನತಾ ದಳವನ್ನು ಪ್ರತಿನಿಧಿಸುವ ಸಂಸದರಾಗಿ ಆಯ್ಕೆ ಆಗಿದ್ದರು.
1993-98ರ ಅವಧಿಯಲ್ಲಿ 10ನೇ ವಿಧಾನಸಭೆ ಚುನಾವಣೆ ನಂತರದಲ್ಲಿ ರಾಜಸ್ಥಾನದ ಕಿಶನ್‌ಗಢ್‌ನಿಂದ ಸ್ಪರ್ಧಿಸಿ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಜೈಪುರದ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಆಸ್ತಿ-ಪಾಸ್ತಿ ಮೌಲ್ಯ:
2020-2021 ಸಾಲಿನಲ್ಲಿ ಜಗದೀಪ್ ಧಂಖರ್ ನಿವ್ವಳ ಮೌಲ್ಯವು ಗಮನಾರ್ಹವಾಗಿ ಏರಿಕೆಯಾಗುತ್ತದೆ. 70 ವರ್ಷ ವಯಸ್ಸಿನ ಜಗದೀಪ್ ಧಂಖರ್ ಅವರ ಬೆಲೆ ಎಷ್ಟು? ಜಗದೀಪ್ ಧಂಖರ್ ಅವರ ಆದಾಯದ ಮೂಲವು ಹೆಚ್ಚಾಗಿ ಯಶಸ್ವಿ ರಾಜಕಾರಣವೇ ಆಗಿದೆ. ಜಗದೀಪ್ ಧನಖರ್ ನಿವ್ವಳ ಮೌಲ್ಯವು 2021ರ ವೇಳೆಗೆ ಅಂದಾಜು 10 ರಿಂದ 50 ಲಕ್ಷ ಡಾಲರ್ ಎಂದು ಅಂದಾಜಿಸಲಾಗಿದೆ.

English summary
Who is Jagdeep Dhankhar? Know all about NDA's candidate for Vice Presidential elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X