ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು?

|
Google Oneindia Kannada News

ನವದೆಹಲಿ, ಮೇ 20: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಆತಂಕದ ನಡುವೆಯೇ ಬ್ಲ್ಯಾಕ್ ಫಂಗಸ್ ಸಮಸ್ಯೆ ಸೃಷ್ಟಿಯಾಗಿರುವುದು ವೈದ್ಯಕೀಯ ಲೋಕದ ನಿದ್ದೆ ಕೆಡಿಸಿದೆ. ಹಲವು ರಾಜ್ಯಗಳಲ್ಲಿ ಈ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಆದರೆ ಇದೀಗ ಬೆಂಕಿಗೆ ತುಪ್ಪ ಸುರಿದಂತೆ ವೈಟ್ ಫಂಗಸ್ ಸಮಸ್ಯೆಯೂ ಕಾಣಿಸಿಕೊಂಡಿದೆ.

ಬ್ಲ್ಯಾಕ್ ಫಂಗಸ್ ಪ್ರಕರಣಗಳ ಬೆನ್ನಲ್ಲೇ ದೇಶದಲ್ಲಿ ವೈಟ್ ಫಂಗಸ್ ಸೋಂಕು ಕಂಡುಬಂದಿದ್ದು, ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಇದು ಬ್ಲಾಕ್ ಫಂಗಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ವೈಟ್ ಫಂಗಸ್ ಪ್ರಕರಣ ಎಲ್ಲೆಲ್ಲಿ ಕಂಡುಬಂದಿದೆ? ಇದರ ಲಕ್ಷಣ, ಅಪಾಯಗಳೇನು? ಮುಂದೆ ಓದಿ...

 ಎಲ್ಲೆಲ್ಲಿ ವೈಟ್ ಫಂಗಸ್ ಪ್ರಕರಣ ಕಂಡುಬಂದಿದೆ?

ಎಲ್ಲೆಲ್ಲಿ ವೈಟ್ ಫಂಗಸ್ ಪ್ರಕರಣ ಕಂಡುಬಂದಿದೆ?

ಬ್ಲ್ಯಾಕ್ ಫಂಗಸ್‌ಗಿಂತಲೂ ಅಪಾಯಕಾರಿ ಎನ್ನಲಾಗುವ ಈ ವೈಟ್ ಫಂಗಸ್ ಪ್ರಕರಣ ಪಾಟ್ನಾ, ಬಿಹಾರದಲ್ಲಿ ಪತ್ತೆಯಾಗಿದೆ. ಪಾಟ್ನಾದಲ್ಲಿನ ವೈದ್ಯರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ತಜ್ಞರ ಪ್ರಕಾರ ಈ ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್‌ಗಿಂತ ಹೆಚ್ಚು ಅಪಾಯಕಾರಿ. ಇದು ಶ್ವಾಸಕೋಶಕ್ಕೆ ನೇರ ಹಾನಿ ತರುತ್ತದೆ. ಇದರ ಬಹುಪಾಲು ಲಕ್ಷಣಗಳು ಬ್ಲ್ಯಾಕ್‌ ಫಂಗಸ್‌ನಂತೆಯೇ ಇರುತ್ತವೆ.

ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆ

 ವೈಟ್ ಫಂಗಸ್‌ನಿಂದ ಏನಾಗುತ್ತದೆ?

ವೈಟ್ ಫಂಗಸ್‌ನಿಂದ ಏನಾಗುತ್ತದೆ?

ವೈಟ್ ಫಂಗಸ್ ನೇರ ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ. ಇದರ ಜೊತೆ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಮೆದುಳು, ಬಾಯಿ ಹಾಗೂ ಖಾಸಗಿ ಭಾಗಗಳಿಗೆ ಹೆಚ್ಚು ಹಾನಿ ಮಾಡುತ್ತದೆ.

 ವೈಟ್ ಫಂಗಸ್ ಲಕ್ಷಣಗಳೇನು?

ವೈಟ್ ಫಂಗಸ್ ಲಕ್ಷಣಗಳೇನು?

ಈ ಸೋಂಕಿನ ಬಹುಪಾಲು ಲಕ್ಷಣಗಳು ಬ್ಯ್ಲಾಕ್ ಫಂಗಸ್‌ ಅನ್ನೇ ಹೋಲುತ್ತವೆ. ತಲೆ ನೋವು, ಮುಖದಲ್ಲಿ ಊತ ಅಥವಾ ಬಾವು, ಮೂಗು ಕಟ್ಟುವಿಕೆ ಇದರ ಸಾಮಾನ್ಯ ಲಕ್ಷಣಗಳು. ಭಾರತದಲ್ಲಿ ಪತ್ತೆಯಾಗಿರುವ ವೈಟ್ ಫಂಗಸ್ ಪ್ರಕರಣಗಳಲ್ಲಿ ಕೊರೊನಾ ರೀತಿಯ ಲಕ್ಷಣಗಳು ಗೋಚರಿಸಿವೆ. ನಾಲ್ಕು ಮಂದಿಯಲ್ಲಿ ಲಕ್ಷಣಗಳು ಕಂಡುಬಂದಿದ್ದು, ಅವರಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಸದ್ಯಕ್ಕೆ ಬ್ಲ್ಯಾಕ್‌ ಫಂಗಸ್‌ಗೆ ನೀಡಲಾಗುವ ಆಂಟಿಫಂಗಲ್ ಔಷಧಿಗಳನ್ನೇ ಚಿಕಿತ್ಸೆಯಾಗಿ ನೀಡಲಾಗುತ್ತಿದೆ.

ಬ್ಲ್ಯಾಕ್ ಫಂಗಸ್ ಅನುಮಾನಗಳಿಗೆ ಇಲ್ಲಿದೆ ಉತ್ತರ: ಏಮ್ಸ್ ಹೊಸ ಮಾರ್ಗಸೂಚಿಯಲ್ಲಿ ಏನಿದೆ?ಬ್ಲ್ಯಾಕ್ ಫಂಗಸ್ ಅನುಮಾನಗಳಿಗೆ ಇಲ್ಲಿದೆ ಉತ್ತರ: ಏಮ್ಸ್ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

Recommended Video

ಗಾಳಿಯಲ್ಲಿ ಸೀನಿದ್ರು , ಕೆಮ್ಮಿದ್ರು ಕೊರೊನ ಹರಡುತ್ತದೆ!! | Oneindia Kannada
 ಯಾರು ಜಾಗರೂಕರಾಗಿರಬೇಕು?

ಯಾರು ಜಾಗರೂಕರಾಗಿರಬೇಕು?

ಬ್ಲ್ಯಾಕ್ ಫಂಗಸ್ ನಂತೆಯೇ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಮಧುಮೇಹಿಗಳಿಗೆ ಹಾಗೂ ದೀರ್ಘಾವಧಿ ಸ್ಟೆರಾಯ್ಡ್ ಬಳಕೆ ಮಾಡುತ್ತಿರುವವರಲ್ಲಿ ವೈಟ್ ಫಂಗಸ್ ಸಮಸ್ಯೆ ಗೋಚರಿಸುತ್ತಿದೆ. ಎಂದು ಅವರು ತಿಳಿಸಿದ್ದಾರೆ. ಕೊರೊನಾ ವೈರಸ್‌ನ ಗಂಭೀರ ಸಮಸ್ಯೆಗೆ ಒಳಗಾಗಿ ವೆಂಟಿಲೇಟರ್ ಮಾಸ್ಕ್ ಅಥವಾ ಮೂಗಿನ ಕೊಳವೆ ಮೂಲಕ ಆಮ್ಲಜನಕದ ಸಹಾಯದಲ್ಲಿದ್ದ ರೋಗಿಗಳು ಈ ಸಮಸ್ಯೆಗೆ ತುತ್ತಾಗುವ ಅಪಾಯವಿದೆ. ಕ್ಯಾನ್ಸರ್ ರೋಗವಿರುವವರು ಎಚ್ಚರಿಕೆಯಿಂದಿರಬೇಕೆಂದು ವೈದ್ಯರು ಸೂಚಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಹಾಗೂ ಆಮ್ಲಜನಕದ ವ್ಯವಸ್ಥೆಯನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

English summary
After cases of black fungus in covid patients, four cases of White Fungus infection, which is considered dangerous than Black Fungus, have been reported in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X