Maha Kumbh Mela 2025: ಮಹಾ ಕುಂಭಮೇಳಕ್ಕೆ ಪ್ರಧಾನಿ ಮೋದಿ ಭೇಟಿ ಯಾವಾಗ? ಇಲ್ಲಿದೆ ವಿವರ

ಕಳೆದ ಸೋಮವಾರ ಅಂದರೆ ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್​​ನ ತ್ರಿವೇಣಿ ಸಂಗಮದಲ್ಲಿ ಆರಂಭವಾದ ಮಹಾ ಕುಂಭ ಮೇಳ ಯಶಸ್ವಿಯಾಗಿ ಸಾಗುತ್ತಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಕೋಟ್ಯಂತರ ಭಕ್ತರು ಪವಿತ್ರಾ ಸ್ನಾನ ಕೈಗೊಂಡಿದ್ದು, ಫೆಬ್ರವರಿ 26ರವರೆಗೆ ಸುಮಾರು 40 ಕೋಟಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳದಲ್ಲಿ ಲಕ್ಷಾಂತರ ಸಾಧು-ಸಂತರು ನಾಗಸಾಧುಗಳು, ದೇಶದ ಮೂಲೆ ಮೂಲೆಯ ಭಕ್ತರು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಅನೇಕ ಗಣ್ಯರು ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದು, ಇದೀಗ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್‌ ರಾಜ್‌ಗೆ ಆಗಮಿಸುವ ದಿನಾಂಕ ನಿಗದಿಯಾಗಿದೆ.

When Will Prime Minister Narendra Modi Visit Prayagraj Maha Kumbh Mela 2025

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ತಿಂಗಳ ಮೊದಲ ವಾರ ಕುಂಭ ಮೇಳದಲ್ಲಿ ಭಾಗಿಯಾಗಲಿದ್ದು, ಮಹಾಕುಂಭದ ಪವಿತ್ರ ಸ್ನಾನ ಮಾಡಲಿದ್ದಾರೆ. ಫೆಬ್ರವರಿ 5 ಬುಧವಾರದಂದು ಪ್ರಧಾನಿ ಮೋದಿ ಪ್ರಯಾಗ್‌ ರಾಜ್‌ಗೆ ಭೇಟಿ ನೀಡಲಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಪ್ರಯಾಗ್‌ ರಾಜ್‌ನಲ್ಲಿ ಭದ್ರತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಕೂಡ ಅಧಿಕಾರಿಗಳಿಗೆ ಕೆಲವು ಸೂಚನೆಗಳು ನೀಡಿದ್ದಾರೆ.

ಇನ್ನು ಜನವರಿ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಫೆಬ್ರವರಿ 10ರಂದು ರಾಷ್ಟ್ರಪತಿಗಳು ಹಾಗೂ ಫೆಬ್ರವರಿ 1ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಹಾ ಕುಂಭ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಪೊಲೀಸರು ಪ್ರಯಾಗ್‌ ರಾಜ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

When Will Prime Minister Narendra Modi Visit Prayagraj Maha Kumbh Mela 2025

ಇನ್ನು ಮಹಾ ಕುಂಭ ಮೇಳ ಆರಂಭವಾದ ದಿನದಿಂದ ಅಂದರೆ ಜನವರಿ 13ರಿಂದ ನಿನ್ನೆಯವರೆಗೆ 8 ಕೋಟಿ 80 ಲಕ್ಷ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. 40 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆಯಲ್ಲಿರುವ ಮಹಾ ಕುಂಭ ಮೇಳದಲ್ಲಿ ಈ ಒಂದೇ ದಿನ ಎಂಟರಿಂದ ಹತ್ತು ಕೋಟಿ ಭಕ್ತರು ಆಗಮನಿಸುವ ನಿರೀಕ್ಷೆ ಇದೆ. ಜನವರಿ 29ರಂದು ನಡೆಯುವ ಮೌನಿ ಅಮಾವಾಸ್ಯೆ ಪುಣ್ಯಸ್ನಾನದ ಒಂದೇ ದಿನ ಪ್ರಯಾಗ್‌ ರಾಜ್‌ನ ಮಹಾ ಕುಂಭ ಮೇಳದಲ್ಲಿ ಕನಿಷ್ಠ 8 ಕೋಟಿ ಭಕ್ತರು ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭಕ್ತರಿಗಾಗಿ ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+