Coffee and Tea: ಈ ಸಮಯದಲ್ಲಿ ಕಾಫಿ, ಟೀ ಕುಡಿಯಲೇಬೇಡಿ!

ನಿಮಗೇನಾದರೂ ಯಾವಾಗಂದರೆ ಅವಾಗ ಕಾಫಿ ಅಥವಾ ಕುಡಿಯುವ ಅಭ್ಯಾಸ ಇದೆಯಾ? ಈಗಲೇ ನೀವು ಅದನ್ನು ಬಿಡುವುದು ಒಳಿತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಾಫಿ, ಟೀ ಸೇವಿಸುವವರಿಗೆ ಸಲಹೆ ನೀಡಿದ್ದು, ಉತ್ತಮ ಆರೋಗ್ಯಕ್ಕಾಗಿ ಮಿತವಾಗಿ ಸೇವಿಸುವಂತೆ ಹೇಳಿದೆ.

ವೈದ್ಯಕೀಯ ಸಂಸ್ಥೆಯು ಇತ್ತೀಚೆಗೆ 17 ಹೊಸ ಆಹಾರ ಮಾರ್ಗಸೂಚಿಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಸಹಭಾಗಿತ್ವದಲ್ಲಿ ಪರಿಚಯಿಸಿದೆ, ಇದು ಭಾರತದಾದ್ಯಂತ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗಸೂಚಿಗಳು ವೈವಿಧ್ಯಮಯ ಆಹಾರ ಮತ್ತು ಸಕ್ರಿಯ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳಿವೆ.

When to Have Tea or Coffee ICMR Advises Avoiding Before and After Meals

ಅತಿಯಾದ ಸೇವನೆ ಬೇಡ

ವೈದ್ಯಕೀಯ ತಜ್ಞರು ಸಂಭಾವ್ಯ ಆರೋಗ್ಯದ ಕಾಳಜಿಯಿಂದಾಗಿ ಚಹಾ ಮತ್ತು ಕಾಫಿಯ ಅತಿಯಾದ ಸೇವನೆ ಮಾಡದಂತೆ ಎಚ್ಚರಿಕೆ ನೀಡಿದರು.

ಕಾಫಿ ಮತ್ತು ಟೀ ಪಾನೀಯದಲ್ಲಿ ಕೆಫೀನ್ ಅನ್ನು ಒಳಗೊಂಡಿರುತ್ತದೆ, ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಶಾರೀರಿಕ ಅವಲಂಬನೆಯನ್ನು ಪ್ರೇರೇಪಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಾರ್ಗಸೂಚಿಗಳು ಕಾಫಿ ಮತ್ತು ಟೀ ಯಲ್ಲಿರುವ ಕೆಫೀನ್ ಅಂಶದ ಮೇಲೆ ಬೆಳಕು ಚೆಲ್ಲುತ್ತವೆ, 150 ಮಿಲಿ ಕಪ್ ಕುದಿಸಿದ ಕಾಫಿಯು 80 - 120 ಮಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ, ಇನ್‌ಸ್ಟಾಂಟ್‌ ಕಾಫಿ 50 - 65 ಮಿಗ್ರಾಂ ಮತ್ತು ಚಹಾವು 30 - 65 ಮಿಗ್ರಾಂ ಅನ್ನು ಕೆಫೀನ್ ಹೊಂದಿರುತ್ತದೆ ಎಂದು ಹೇಳಿದೆ.

ಒಂದು ದಿನಕ್ಕೆ 300 ಮಿ.ಗ್ರಾಂ ಕೆಫೀನ್‌ ಸೇವನೆಯಲ್ಲಿ ಮಾತ್ರ ಸಲಹೆ ಮಾಡಿದ್ದು, ಅದನ್ನು ಮೀರದಂತೆ ನೋಡಿಕೊಳ್ಳುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಈ ಸಮಯದಲ್ಲಿ ಸೇವನೆ ಬೇಡ

ಕಾಫಿ ಮತ್ತು ಟೀನಲ್ಲಿ ಟ್ಯಾನಿನ್‌ಗಳನ್ನು ಒಳಗೊಂಡಿರುವ ಕಾರಣ, ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಊಟಕ್ಕೆ ಮೊದಲು ಮತ್ತು ಊಟದ ನಂತರ ಕನಿಷ್ಠ ಒಂದು ಗಂಟೆ ಚಹಾ ಅಥವಾ ಕಾಫಿಯನ್ನು ಸೇವಿಸದಂತೆ ವೈದ್ಯಕೀಯ ಸಂಸ್ಥೆ ಸಲಹೆ ನೀಡಿದೆ.

ಟ್ಯಾನಿನ್‌ಗಳಿಂದ ದೇಹವು ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅದು ಹೇಳಿದೆ.

ಹಾಲು ಇಲ್ಲದೆ ಚಹಾ ಕುಡಿಯುವುದರಿಂದ, ಸುಧಾರಿತ ರಕ್ತ ಪರಿಚಲನೆ ಮತ್ತು ಹೃದಯದ ಕಾಯಿಲೆ ಮತ್ತು ಹೊಟ್ಟೆಯ ಕ್ಯಾನ್ಸರ್‌ನಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದೆ.

ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮಾಂಸ ಮತ್ತು ಮೀನು ಆಹಾರವನ್ನು ಶಿಫಾರಸು ಮಾಡಿದ್ದು, ಎಣ್ಣೆ, ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+