Sharadiya Navratri 2023: ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು? ಗರ್ಬಾ ದಾಂಡಿಯಾ ನಡುವಿನ ವ್ಯತ್ಯಾಸವೇನು?
ನವರಾತ್ರಿ ಅಕ್ಟೋಬರ್ 15ರಿಂದ ಆರಂಭವಾಗಿದೆ. ಅಕ್ಟೋಬರ್ 23ರವರೆಗೆ ಅಂದರೆ ಒಂಬತ್ತು ದಿನ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಹತ್ತನೆ ದಿನ ಅಂದರೆ ಅ. 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕೆಲವೆಡೆ ಗರ್ಬಾ ಮತ್ತು ದಾಂಡಿಯಾ ಆಡುವುದು ವಿಶೇಷವಾಗಿದೆ. ಅಷ್ಟಕ್ಕೂ ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು? ಎಂದು ತಿಳಿಯೋಣ.
ಶಕ್ತಿಶಾಲಿ ರಾಕ್ಷಸ ಮಹಿಷಾಸುರನು ದೇವತೆಗಳಿಗೆ ತೊಂದರೆ ನೀಡಲು ಪ್ರಾರಂಭಿಸಿದಾಗ ಇದು ಬ್ರಹ್ಮ, ವಿಷ್ಣು ಮತ್ತು ಮಹೇಶರ ಚಿಂತೆಗೆ ಕಾರಣವಾಯಿತು. ನಂತರ ವಿಷ್ಣು ಮತ್ತು ಶಿವ ತಮ್ಮ ಶಕ್ತಿಯಿಂದ ಶಕ್ತಿ ಸ್ವರೂಪ ದುರ್ಗೆಯನ್ನು ಹುಟ್ಟಿಕೊಂಡಲು. ಇತರ ದೇವರುಗಳು ತಮ್ಮ ಆಯುಧಗಳಿಂದ ದುರ್ಗೆಯನ್ನು ಸಜ್ಜುಗೊಳಿಸಿದರು.

ನಂತರ ಒಂಬತ್ತು ದಿನಗಳ ಕಾಲ ಮಾತೆ ದುರ್ಗಾ ಮತ್ತು ರಾಕ್ಷಸ ಮಹಿಷಾಸುರನ ನಡುವೆ ಘೋರ ಯುದ್ಧ ನಡೆಯಿತು. ಒಂಬತ್ತು ದಿನ ಹೋರಾಡಿ ದುರ್ಗಾ ಮಾತೆ ರಾಕ್ಷಸ ಮಹಿಷಾಸುರನನ್ನು ಕೊಂದಳು. ಒಂಬತ್ತು ದಿನಗಳ ಕಾಲ ನಡೆಯುವ ಈ ಯುದ್ಧವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ಮಾತೃದೇವತೆಯ ಒಂಬತ್ತು ರೂಪಗಳನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ದಶಮಿಯ ದಿನದಂದು ಮಹಿಷಾಸುರನನ್ನು ವಧೆ ಮಾಡಲಾಯಿತು. ಆದ್ದರಿಂದ ಇದನ್ನು ಅತ್ಯಂತ ಉತ್ಸಾಹದಿಂದ ದಸರಾ ಹಾಗೂ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಹೀಗಾಗಿ ಮಾತೃದೇವತೆಯ ಈ ವಿಜಯೋತ್ಸವವನ್ನು ಹಬ್ಬದಂತೆ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು.
ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು?
ವಿಜಯದಶಮಿ ಹೆಸರೇ ಹೇಳುವಂತೆ ಇದು ಜಯ ಸಾಧಿಸಿದ ದಿನ. ಕೆಟ್ಟದನ್ನು ತೊಡೆದುಹಾಕಿ ಒಳ್ಳೆಯದನ್ನು ಸ್ವಾಗತಿಸಿದ ದಿನ. ಹೀಗಾಗಿ ಈ ದಿನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದುರ್ಗಾ ದೇವಿ ಜಯದ ಸಂಕೇತವಾಗಿ ಜನ ಈ ದಿನ ನೃತ್ಯ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಈ ಸಂಭ್ರಮದಲ್ಲಿ ದಾಂಡಿಯಾ, ಗರ್ಬಾ ಕೂಡ ಹೆಸರುವಾಸಿಯಾಗಿವೆ. ದಾಂಡಿಯಾ ಮತ್ತು ಗರ್ಬಾ ಆಡುವ ಮೂಲಕ ಜನ ಈ ದಿನ ಸಂತೋಷದಿಂದ ಕಳೆಯುತ್ತಾರೆ.

ದಾಂಡಿಯಾ ಮತ್ತು ಗರ್ಬಾ ನಡುವಿನ ವ್ಯತ್ಯಾಸ
ಗುಜರಾತಿನಲ್ಲಿ ಈ ಹಬ್ಬವನ್ನು ದಾಂಡಿಯಾ ನೃತ್ಯ ಮಾಡುವ ಮೂಲಕ ಆಚರಿಸಲಾಗುತ್ತದೆ. ದಾಂಡಿಯಾದಲ್ಲಿ ತಾಯಿ ದೇವಿಯ ಖಡ್ಗವನ್ನು ಸಂಕೇತಿಸುವ ಎರಡು ಮರದ ಕೋಲುಗಳನ್ನು ಬಳಸಿ ನೃತ್ಯವನ್ನು ಮಾಡಲಾಗುತ್ತದೆ. ಅದಕ್ಕಾಗಿಯೇ ದಾಂಡಿಯಾವನ್ನು ಕತ್ತಿ ನೃತ್ಯ ಎಂದೂ ಕರೆಯುತ್ತಾರೆ.
ಗರ್ಬಾ ನೃತ್ಯ
ಗಾರ್ಬಾ ನೃತ್ಯ ದಾಂಡಿಯಾ ನೃತ್ಯಕ್ಕಿಂದ ಸ್ವಲ್ಪ ವಿಭಿನ್ನವಾಗಿದೆ. ಗರ್ಬಾ ಎಂದರೆ ಗರ್ಭಾ ಪದಕ್ಕೆ ಸಂಬಂಧಿಸಿದೆ. ಅಂದರೆ ಗರ್ಭದಲ್ಲಿರುವ ಮಗು ಎಂದರ್ಥ. ಗರ್ಭದಲ್ಲಿರುವ ಮಗು ಎಷ್ಟು ಸುರಕ್ಷಕವೋ ಅಷ್ಟೇ ಸುರಕ್ಷತೆ ನೀಡಿದ ತಾಯಿ ದೇವಿಯ ಸುತ್ತ ಒಂದು ವೃತ್ತ ರಚಿಸಲಾಗುತ್ತದೆ.
ಗರ್ಭ ದುಂಡಾಗಿರುತ್ತದೆ ಮತ್ತು ಜೀವನದ ವೃತ್ತವೂ ದುಂಡಾಗಿರುತ್ತದೆ. ಆದ್ದರಿಂದ ನರ್ತಕರು ಒಂದು ಸುತ್ತಿನ ವೃತ್ತವನ್ನು ರಚಿಸುತ್ತಾರೆ. ಬಳಿಕ ನೃತ್ಯ ಮಾಡುತ್ತಾರೆ. ಮಾತೆಯ ವಿಗ್ರಹ ಮತ್ತು ಅಲ್ಲಿ ಉರಿಯುತ್ತಿರುವ ಜ್ವಾಲೆಯ ಸುತ್ತ ಗರ್ಬಾವನ್ನು ಆಡಲಾಗುತ್ತದೆ. ಈ ಸಂದರ್ಭದಲ್ಲಿ ತೆಂಗಿನಕಾಯಿ, ವೀಳ್ಯದೆಲೆ ಮುಂತಾದ ಪೂಜಾ ಸಾಮಗ್ರಿಗಳನ್ನು ಸುತ್ತಿನ ವೃತ್ತದೊಳಗೆ ಮಣ್ಣಿನ ತಟ್ಟೆಯಲ್ಲಿ ಇರಿಸಲಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications