Ghost in Dream: ಕನಸಿನಲ್ಲಿ ಪದೇ ಪದೇ ನಗುತ್ತಾ, ಅಳುತ್ತಾ ದೆವ್ವ ಕಾಣಿಸುತ್ತಾ? ಇದರ ಮುನ್ಸೂಚನೆ ಏನು?
ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡುವುದರಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಇದು ದೈನಂದಿನ ಕೆಲಸಕ್ಕೆ ಹೊಸತನವನ್ನು ಒದಗಿಸುತ್ತದೆ. ಅದಾಗ್ಯೂ ಎಷ್ಟೋ ಜನರಿಗೆ ರಾತ್ರಿ ಮಲಗಿದರೆ ಮಲಗಿದಂತಾಗಿರುವುದಿಲ್ಲ. ಗಾಢವಾಗಿ ನಿದ್ದೆ ಮಾಡಿದಂತೆ ಅನಿಸುವುದಿಲ್ಲ. ಮನಸ್ಸಿನಲ್ಲಿ ಏನೋ ತಳಮಳ. ಅದೆನೋ ಆತಂಕ. ರಾತ್ರಿ ಮಲಗಿದಾಗ ಏನೋ ನೋಡಿದ ನೆನೆಪು ಆಗಬಹುದು.
ಇದಕ್ಕೆಲ್ಲ ಕಾರಣ ರಾತ್ರಿ ಹೊತ್ತು ನೀವು ಕಂಡ ಕನಸು ಆಗಿರಬಹುದು. ಎಸ್... ರಾತ್ರಿ ಮಲಗಿದಾಗ ನೀವು ಕೆಟ್ಟ ಕನಸು ಕಂಡರೆ ಆ ದಿನ ನಿಮಗೆ ನಿದ್ದೆ ಆದಂತೆ ಅನಿಸುವುದೇ ಇಲ್ಲ. ಅದ್ರಲ್ಲೂ ಭೂತ, ಪೇತಗಳಂತಹ ಕೆಟ್ಟ ಕನಸು ಬಿದ್ದು ಬಿಟ್ಟರಂತು ನಿಮ್ಮ ಆ ದಿನದ ನೆಮ್ಮದಿಯೇ ಹಾಳಾಗಿ ಬಿಡುತ್ತದೆ. ಆ ಕನಸಿನ ಬಗ್ಗೆ ನಿಮ್ಮ ಕುಟುಂಬಸ್ಥರು ಹಾಗೂ ಸ್ನೆಹಿತರ ಬಳಿ ನೀವು ಹಂಚಿಕೊಳ್ಳುತ್ತೀರಿ. ಆದರೂ ನಿಮಗೆ ಸಮಾಧಾನವಾಗುವುದಿಲ್ಲ.

ಈ ಕೆಟ್ಟ ಕನಸಿನ ಹಿಂದಿನ ಕಾರಣ ಏನಿರಬಹುದು ಎಂದು ನಿಮ್ಮ ಮನಸ್ಸು ಯೋಚನೆ ಮಾಡುತ್ತಲೇ ಇರುತ್ತದೆ. ಇದಕ್ಕೆ ಉತ್ತರ ಸ್ವಪ್ನ ಶಾಸ್ತ್ರದಲ್ಲಿ ಸಿಗುತ್ತದೆ. ಹಾಗಾದರೆ ಕನಸಿನಲ್ಲಿ ದೆವ್ವ ಕಾಣಿಸುವುದರ ಅರ್ಥವೇನು? ದೆವ್ವ ನಗುತ್ತಾ ಕನಸಿನಲ್ಲಿ ಕಾಣಿಸಿಕೊಂಡರೆ ಅಥವಾ ಅಳುತ್ತಾ ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಹಿಂದಿನ ಅರ್ಥವೇನು ಎನ್ನುವುದನ್ನು ಈ ತಿಳಿಯೋಣ.
ಅನೇಕ ಜನರು ದೆವ್ವಗಳನ್ನು ನೋಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕೆಲವರು ದೆವ್ವಗಳ ಅಸ್ತಿತ್ವವನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಇನ್ನೂ ಕೆಲವರು ಅವುಗಳನ್ನು ನೋಡಿರುವುದಾಗಿ ಹೇಳಿಕೊಳ್ಳುತ್ತಾರೆ. ಮತ್ತೂ ಕೆಲವರು ಮನುಷ್ಯರಿಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಾರೆ. ಅವುಗಳನ್ನು ಓಡಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
ದೆವ್ವ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರತಿಯೊಬ್ಬರಿಗೂ ತಮ್ಮದೇ ಆದ ಭಿನ್ನಾಭಿಪ್ರಾಯವಿದೆ. ಆದರೆ ಕನಸಿನಲ್ಲಿ ಯಾರಾದರೂ ದೆವ್ವ ಅಥವಾ ಭಯಾನಕ ವ್ಯಕ್ತಿಗಳನ್ನು ನೋಡಿದರೆ ಅದಕ್ಕೆ ಹಲವು ಅರ್ಥಗಳಿವೆ. ಕನಸಿನಲ್ಲಿ ದೆವ್ವವನ್ನು ನೋಡುವುದು ವ್ಯಕ್ತಿಯ ಹೃದಯ ಮತ್ತು ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ. ಹಾಗಾದರೆ ಸ್ವಪ್ನ ಶಾಸ್ತ್ರದ ಪ್ರಕಾರ ಈ ಕನಸು ಏನನ್ನು ಎಚ್ಚರಿಸುತ್ತದೆ ಅಥವಾ ಏನನ್ನು ಸೂಚಿಸುತ್ತದೆ ಎಂದು ತಿಳಿಯೋಣ.

ಕನಸಿನಲ್ಲಿ ಭೂತ ಕಂಡರೆ
ನಿಮ್ಮ ಕನಸಿನಲ್ಲಿ ಭೂತವನ್ನು ನೋಡುವುದು ಎಂದರೆ ಮುಂದಿನ ದಿನಗಳಲ್ಲಿ ನೀವು ಯಾವುದೇ ಭರವಸೆ ಇಲ್ಲದ ಸ್ಥಳದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳು ಇದ್ದಕ್ಕಿದ್ದಂತೆ ಉದ್ಭವಿಸಬಹುದು.
ಹಾರುವ ಪ್ರೇತ
ನಿಮ್ಮ ಕನಸಿನಲ್ಲಿ ಹಾರುವ ಪ್ರೇತವನ್ನು ನೀವು ನೋಡಿದರೆ, ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡುತ್ತಾರೆ ಎಂದರ್ಥ. ಈ ಸಮಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಶತ್ರುಗಳಿಂದ ಆದಷ್ಟು ದೂರವಿರಬೇಕು. ಆದಷ್ಟು ತಾಳ್ಮೆಯಿಂದ ವರ್ತಿಸಬೇಕು.
ಕನಸಿನಲ್ಲಿ ದೆವ್ವದೊಂದಿಗೆ ಹೋರಾಡುವುದು
ದೆವ್ವದೊಂದಿಗೆ ಹೋರಾಡುವಂತೆ ನಿಮಗೆ ಕನಸು ಬಿದ್ದರೆ ಅಥವಾ ನಿಮ್ಮ ಕನಸಿನಲ್ಲಿ ನೀವು ದೆವ್ವವನ್ನು ಸೋಲಿಸಿದರೆ ಅದು ಒಳ್ಳೆಯ ಸಂಕೇತವಾಗಿದೆ. ಅಂದರೆ ನಿಜ ಜೀವನದಲ್ಲಿ ನಿಮಗೆ ತೊಂದರೆ ಉಂಟುಮಾಡುವ ಅಡೆತಡೆಗಳನ್ನು ಎದುರಿಸಲು ನೀವು ಸಿದ್ಧರಿದ್ದೀರಿ ಎಂದರ್ಥ.

ಕನಸಿನಲ್ಲಿ ಪುರುಷ ಮತ್ತು ಮಹಿಳೆಯ ಪ್ರೇತ ಒಟ್ಟಿಗೆ ನೋಡುವುದು
ದೆವ್ವದ ಕನಸು ಬಿದ್ದರೆ ಅದು ಕೆಟ್ಟದ್ದೇ ಆಗುತ್ತದೆ ಎಂದರ್ಥವಲ್ಲ. ಬದಲಿಗೆ ಅದು ಶುಭ ಸೂಚನೆ ಕೂಡ ಆಗಿರಬಹುದು. ಕನಸಿನಲ್ಲಿ ಪುರುಷ ಮತ್ತು ಮಹಿಳೆ ಒಟ್ಟಿಗೆ ಕಾಣಿಸಿಕೊಂಡರೆ ಅದು ಶುಭ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಹೀಗಾಗಿ ಇಂತಹ ಕನಸು ಬಿದ್ದರೆ ಭಯ ಪಡುವ ಅಗತ್ಯವಿಲ್ಲ.
ನಗುವ ದೆವ್ವ
ನಿಮ್ಮ ಕನಸಿನಲ್ಲಿ ಸಂತೋಷದ ಪ್ರೇತ ಅಂದರೆ ನಗುವುದನ್ನು ನೀವು ನೋಡಿದರೆ, ಚಿಂತೆ ಮಾಡಬೇಡಿ. ಇದರರ್ಥ ಪ್ರೇತವು ನಿಮಗೆ ಹಾನಿ ಮಾಡಲು ಬಯಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಚ್ಚರವಾದ ನಂತರ ಇದರ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.
ಕನಸಿನಲ್ಲಿ ಸತ್ತ ವ್ಯಕ್ತಿಯು ಅಳುವುದು ಅಥವಾ ತುಂಬಾ ಕೋಪಗೊಂಡಿರುವುದು ಕಂಡುಬಂದರೆ
ಕನಸಿನಲ್ಲಿ ಸತ್ತ ವ್ಯಕ್ತಿಯು ಅಳುವುದು ಅಥವಾ ತುಂಬಾ ಕೋಪಗೊಂಡಿರುವುದು ಕಂಡುಬಂದರೆ ನೀವು ಮಾಡಲು ಬಯಸಿದ ಕೆಲಸವನ್ನು ನೀವು ಮಾಡುತ್ತಿದ್ದೀರಿ ಎಂದರ್ಥ. ಅಥವಾ ಆ ಆತ್ಮದ ಕೆಲವು ಈಡೇರದ ಬಯಕೆ ಇದೆ, ಅದು ನಿಮ್ಮಿಂದ ಈಡೇರುತ್ತದೆ ಎಂದು ಅದು ನಿರೀಕ್ಷಿಸುತ್ತದೆ ಎಂದರ್ಥವೂ ಆಗುತ್ತದೆ.
ಕನಸಿನಲ್ಲಿ ನಿಮಗರ್ಥವಾಗದ ದೆವ್ವದ ಮಾತು
ಅನೇಕ ಬಾರಿ ಸತ್ತವರು ಕನಸಿನಲ್ಲಿ ಬಂದು ಮಾತನಾಡುತ್ತಾರೆ. ಆದರೆ ಅವರು ಏನು ಹೇಳುತ್ತಾರೆಂದು ಅರ್ಥವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಈ ಕನಸು ಅಶುಭ ಫಲಿತಾಂಶಗಳನ್ನು ನೀಡಬಹುದು ಮತ್ತು ಜೀವನದಲ್ಲಿ ಕೆಲವು ಅಪಘಾತಗಳು ಸಂಭವಿಸಬಹುದು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications