FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?
ಸುಂಕ ಸಂಗ್ರಹ ಕೇಂದ್ರಗಳಲ್ಲಿ ಉಂಟಾಗುವ ವಾಹನದಟ್ಟಣೆಯನ್ನು ತಡೆಯಲು, ವಾಹನ ಸವಾರರ ಸಮಯ ಉಳಿತಾಯ ಮತ್ತು ಇಂಧನ ಉಳಿತಾಯದ ಜತೆಗೆ ವಾಯುಮಾಲಿನ್ಯವನ್ನು ತಗ್ಗಿಸಲು ಕೂಡ ಫಾಸ್‌ಟ್ಯಾಗ್ (FASTag) ನೆರವಾಗಲಿದೆ ಎನ್ನುತ್ತದೆ ಸರ್ಕಾರ. ಇದು ದೇಶದಾದ್ಯಂತ ಜಾರಿಯಾದರೆ ಪ್ರತಿ ವರ್ಷ ವ್ಯವಸ್ಥೆಯ ನಿರ್ವಹಣೆಗೆ 27,000 ಕೋಟಿ ಮತ್ತು ಇಂಧನದ 7,000 ಕೋಟಿ ರೂ. ಉಳಿತಾಯವಾಗುತ್ತದೆ.
ಹಾಗೆಂದು ಫಾಸ್‌ಟ್ಯಾಗ್ ಸಂಪೂರ್ಣ ವಾಹನ ಮಾಲೀಕರ ಸ್ನೇಹಿ ಎಂದು ಹೇಳಲು ಸಾಧ್ಯವಿಲ್ಲ. ಅನುಕೂಲಗಳಿರುವಂತೆಯೇ ಇದರಿಂದ ಹಲವ ಅನನುಕೂಲಗಳೂ ಇವೆ ಎಂಬ ಆರೋಪಗಳು ಕೇಳಿಬಂದಿವೆ. ಫಾಸ್‌ಟ್ಯಾಗ್‌ನಿಂದ ಇರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವಿದೆಯೇ?
ಫಾಸ್‌ಟ್ಯಾಗ್ ಖರೀದಿಸಲು ವಾಹನ ನೋಂದಣಿ ಪ್ರಮಾಣಪತ್ರ, ಫೋಟೊ ಮತ್ತು ವಿಳಾಸ ಖಾತರಿಪಡಿಸುವ ಗುರುತಿನ ಚೀಟಿ ನೀಡಬೇಕಾಗುತ್ತದೆ. ಅಂದರೆ ಫಾಸ್‌ಟ್ಯಾಗ್ ಪಡೆಯಲು ಅದನ್ನು ಪೂರೈಸುವ ಸಂಸ್ಥೆಗೆ ನಮ್ಮ ಖಾಸಗಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ನಾವು ಡೌನ್‌ಲೋಡ್ ಮಾಡಿಕೊಂಡು ಬಳಸುವ ಆಪ್, ವೆಬ್‌ಸೈಟ್ ಅಥವಾ ಬೇರೆ ಮೂಲಗಳಿಗೆ ಈ ದಾಖಲೆಗಳನ್ನು ಸಲ್ಲಿಸಬೇಕು. ಇದಕ್ಕೆ ನಮ್ಮ ಬ್ಯಾಂಕ್ ಖಾತೆಯನ್ನು ಕೂಡ ಜೋಡಣೆ ಮಾಡಿಕೊಳ್ಳಬೇಕು. ಇದು ಎಷ್ಟರ ಮಟ್ಟಿಗೆ ಸುರಕ್ಷಿತ? ನಮ್ಮ ಖಾಸಗಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಹಾಗೂ ಅದರ ಮೂಲಕ ಜೋಡಣೆಯಾದ ಬ್ಯಾಂಕ್ ಖಾತೆಯೂ ಎಷ್ಟರ ಮಟ್ಟಗೆ ಸುರಕ್ಷಿತವಾಗಿರುತ್ತದೆ? ಎಂಬ ಪ್ರಶ್ನೆಗಳು ಅನೇಕರಲ್ಲಿ ಉಂಟಾಗಿದೆ.

ಆರ್‌ಎಫ್‌ಡಿ ಕೈಕೊಟ್ಟರೆ ಕಷ್ಟ
ರೇಡಿಯೋ ತರಂಗಾಂತರವನ್ನ ಗುರುತಿಸುವ ತಂತ್ರಜ್ಞಾನವು (ಆರ್‌ಎಫ್‌ಐಡಿ) ಫಾಸ್‌ಟ್ಯಾಗ್‌ನ ಮೇಲೆ ಹಾದು ಅದರಲ್ಲಿನ ಕೋಡ್‌ಗಳನ್ನು ಓದುತ್ತದೆ. ಆಗ ಅದರ ವಿವರಗಳು ಸ್ಕ್ಯಾನ್ ಆಗಿ ವಾಹನದ ಸುಂಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ ಆರ್‌ಎಫ್‌ಐಡಿ ಅನೇಕ ಮಿತಿಗಳನ್ನು ಹೊಂದಿವೆ. ಅದು ತನ್ನ ತರಂಗಾಂತರ ತಲುಪುವ ದೂರದವರೆಗಿನ ಟ್ಯಾಗ್‌ಗಳನ್ನು ಮಾತ್ರ ಓದಬಲ್ಲದು. ಜತೆಗೆ ಮಳೆ ಜೋರಾಗಿರುವ ಸಂದರ್ಭದಲ್ಲಿ ಅದರ ನಿಖರತೆ ಕ್ಷೀಣಿಸುತ್ತದೆ.

ಕಳ್ಳತನವಾಗುವ ಅಪಾಯ
ವಾಹನಗಳ ಮುಂಭಾಗದಲ್ಲಿ ಅಂಟಿಸುವ ಫಾಸ್‌ಟ್ಯಾಗ್‌ಗಳು ಕಳ್ಳತನವಾಗಬಹುದು ಅಥವಾ ಕಳೆದುಹೋಗಬಹುದು. ಬೇರೆ ವಾಹನಗಳಿಂದ ಕದ್ದ ಫಾಸ್‌ಟ್ಯಾಗ್‌ಅನ್ನು ತಮ್ಮ ವಾಹನಕ್ಕೆ ಅಂಟಿಸಿಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹೀಗೆ ತಮ್ಮ ಫಾಸ್‌ಟ್ಯಾಗ್ ಕಳುವಾದ ಅಥವಾ ಕಳೆದುಹೋದ ಬಗ್ಗೆ ತಿಳಿದ ಕೂಡಲೇ ಮೊಬೈಲ್ ಫೋನ್ ಕಳೆದುಹೋದಾಗ ಸಿಮ್ ಬ್ಲಾಕ್ ಮಾಡುವಂತೆಯೇ ಸಂಬಂಧಿಸಿದ ಸಂಸ್ಥೆ ಅಥವಾ ಬ್ಯಾಂಕ್‌ಗೆ ಗಮನಕ್ಕೆ ಅದನ್ನು ತಂದು ಬ್ಲಾಕ್ ಮಾಡಿಸಬೇಕಾಗುತ್ತದೆ. ಬಳಿಕ ಹೊಸ ಟ್ಯಾಗ್ ಪಡೆದುಕೊಳ್ಳಬೇಕು.

ತಾಂತ್ರಿಕ ಸಮಸ್ಯೆಯಿಂದ ಹೆಚ್ಚು ಹಣ ಕಡಿತ
ಟ್ಯಾಗ್‌ಅನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾದರೆ ನಿಮ್ಮ ಖಾತೆಯಿಂದ ದುಪ್ಪಟ್ಟು ಹಣ ಕಡಿತವಾದರೂ ಅಚ್ಚರಿಯಿಲ್ಲ. ಅಥವಾ ಕೆಲವೆಡೆ ಫಾಸ್‌ಟ್ಯಾಗ್ ಕೆಲಸ ಮಾಡದೆಯೂ ಇರಬಹುದು. ನಿಮ್ಮ ವಾಹನ ಆರ್‌ಎಫ್‌ಐಡಿ ಸ್ಕ್ಯಾನರ್ ಮೂಲಕ ತೆರಳಬೇಕು. ಅದು ಕೆಲವೊಮ್ಮೆ ನಿಮ್ಮ ವಾಹನಕ್ಕೆ ಅಂಟಿಸಿದ ಫಾಸ್‌ಟ್ಯಾಗ್‌ಅನ್ನು ಪತ್ತೆಹಚ್ಚದೆಯೂ ಇರಬಹುದು. ಈ ಸಮಸ್ಯೆ ಎದುರಾದರೆ ಫಾಸ್‌ಟ್ಯಾಗ್ ಗ್ರಾಹಕ ಕೇಂದ್ರಕ್ಕೆ ಮಾಹಿತಿ ನೀಡಬೇಕು.

ಟ್ಯಾಗ್ ಇಲ್ಲದವರೂ ಸರದಿಯಲ್ಲಿ
ಟೋಲ್ ಪ್ಲಾಜಾಗಳಲ್ಲಿ ಫಾಸ್‌ಟ್ಯಾಗ್ ಹೊಂದಿರುವ ವಾಹನಗಳಿಗೆ ಪ್ರತ್ಯೇಕ ಸಾಲು ಇರುತ್ತದೆ. ಆದರೆ ಇದರ ಮಧ್ಯೆ ಫಾಸ್‌ಟ್ಯಾಗ್ ಹೊಂದಿರದ ವಾಹನ ಸೇರಿಕೊಂಡರೆ ಉಳಿದ ವಾಹನಗಳು ಅವರು ಸುಂಕ ಪಾವತಿಸುವವರೆಗೆ ಕಾಯುವುದು ಅನಿವಾರ್ಯ. ಹೀಗೆ ಟ್ಯಾಗ್ ಹೊಂದಿರದವರು ಅಲ್ಲಿ ಎರಡು ಪಟ್ಟು ಸುಂಕ ತೆರಬೇಕಾಗುತ್ತದೆ. ಕೆಲವು ವಾಹನಗಳು ಈಗ ಟೋಲ್ ಲೇನ್‌ಗಳಲ್ಲಿ ತೂರಿಕೊಳ್ಳುವಂತೆಯೇ ಅಡ್ಡಾದಿಡ್ಡಿ ವಾಹನಗಳನ್ನು ನುಗ್ಗಿಸಬಹುದು. ಇದರಿಂದ ಸುಂಕ ಕೇಂದ್ರಗಳಲ್ಲಿ ಗೊಂದಲ, ಗದ್ದಲಗಳು ಉದ್ಭವಿಸುವ ಸಾಧ್ಯತೆ ಇದೆ. ಅಲ್ಲದೆ, ಫಾಸ್‌ಟ್ಯಾಗ್ ಮತ್ತು ವಿಐಪಿ ವಾಹನಗಳಿಗೆ ಒಂದೇ ಲೇನ್ ನೀಡುವ ಯೋಜನೆ ಕೆಲವೆಡೆ ಇದೆ. ಇಲ್ಲಿಯೂ ಗೊಂದಲಗಳು ಉಂಟಾಗುತ್ತವೆ.

ಖಾತೆಯಿಲ್ಲ ಸಾಕಷ್ಟು ಹಣವಿರಬೇಕು
ವಾಹನ ಮಾಲೀಕರು ತಮ್ಮ ಬ್ಯಾಂಕ್ ಖಾತೆ ಅಥವಾ ಫಾಸ್‌ಟ್ಯಾಗ್ ವ್ಯಾಲೆಟ್‌ನಲ್ಲಿ ಸೂಕ್ತ ಪ್ರಮಾಣದ ಬ್ಯಾಲೆನ್ಸ್ ಕಾಪಾಡಿಕೊಳ್ಳದೆ ಇದ್ದರೆ ಆ ಫಾಸ್‌ಟ್ಯಾಗ್‌ಅನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಬಳಿಕ ಅದು ಬಳಕೆಗೆ ನಿಷ್ಪ್ರಯೋಜಕವಾಗಬಹುದು. ಫಾಸ್‌ಟ್ಯಾಗ್ ಹೊಂದಿದ್ದರೂ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿರದೆ ಇದ್ದರೆ ಅದು ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನ್‌ಇಟಿಸಿ) ಸೇವೆಗಳಿಗೆ ಒಳಪಡುವುದಿಲ್ಲ. ಆಗ ನಗದು ರೂಪದಲ್ಲಿ ದುಪ್ಪಟ್ಟು ಸುಂಕ ಕಟ್ಟಿ ಸಾಗಬೇಕಾಗುತ್ತದೆ. ಹೀಗಾಗಿ ಬಳಕೆದಾರರು ತಾವು ಹೆಚ್ಚು ಬಳಸುವ ಮತ್ತು ಅಧಿಕ ಬ್ಯಾಲೆನ್ಸ್ ಹೊಂದಿರುವ ಖಾತೆಗಳನ್ನೇ ಟ್ಯಾಗ್‌ಗೆ ಜೋಡಣೆ ಮಾಡಬೇಕು.

ವಾಹನದಟ್ಟಣೆ ನಿಯಂತ್ರಣ
ಮುಂಬೈ-ದೆಹಲಿ ಎನ್‌ಎಚ್8ರಲ್ಲಿ ಫಾಸ್‌ಟ್ಯಾಗ್ ಈ ಮೊದಲೇ ಜಾರಿಗೆ ಬಂದಿದೆ. ಆದರೆ ಇಲ್ಲಿ ವಾಹನ ಚಾಲಕರಲ್ಲಿ ಸರದಿ ಕಾಪಾಡುವ ಶಿಸ್ತು ಇಲ್ಲದಿರುವುದನ್ನು ಅನೇಕರು ಪ್ರಸ್ತಾಪಿಸಿದ್ದಾರೆ. ಫಾಸ್‌ಟ್ಯಾಗ್ ಇಲ್ಲದ ವಾಹನಗಳೂ ಇಲ್ಲಿ ಬಂದು ನಗದು ರೂಪದಲ್ಲಿ ಸುಂಕ ಪಾವತಿಸುವುದರಿಂದ ಉಳಿದ ವಾಹನಗಳು ಸರದಿಯಲ್ಲಿ ಕಾಯುವುದು ಅನಿವಾರ್ಯ. ಫಾಸ್‌ಟ್ಯಾಗ್‌ಗೆ ಮೀಸಲಾಗಿರುವ ಲೇನ್‌ಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ. ಹೀಗಾಗಿ ಉಳಿದ ಲೇನ್‌ಗಳಲ್ಲಿನ ವಾಹನದಟ್ಟಣೆ ತಡೆಯಲು ಈ ಲೇನ್‌ನಲ್ಲಿಯೂ ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸುಂಕ ಸಂಗ್ರಹಕಾರರು ವಿವರಣೆ ನೀಡುತ್ತಾರೆ.

ಜನರಿಗೆ ಸೂಕ್ತ ಮಾಹಿತಿ ಇಲ್ಲ
ಫಾಸ್‌ಟ್ಯಾಗ್ ಅಳವಡಿಸಿಕೊಳ್ಳಲು ವಾಹನಗಳ ಮಾಲೀಕರಿಗೆ ನೀಡಿದ ಗಡುವು ತೀರಾ ಕಡಿಮೆ. ಇದರಲ್ಲಿ ಅವರು ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಟ್ಯಾಗ್ ಖರೀದಿ ಮಾಡಬೇಕಾಗಿದೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ನಡೆದಿಲ್ಲ. ಫಾಸ್‌ಟ್ಯಾಗ್ ವಿತರಣೆಗೆ ಟೋಲ್ ಪ್ಲಾಜಾಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೆ, ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ಕೂಡ ಸರಳವಾಗಿಲ್ಲ. ಟ್ಯಾಗ್ ಇಲ್ಲದ ವಾಹನಗಳು ಡಿ.1ರಿಂದ ಎರಡುಪಟ್ಟು ಹಣ ತೆರಬೇಕಿರುವುದು ವಾಹನ ಮಾಲೀಕರಿಗೆ ದೊಡ್ಡ ಹೊಡೆತ ನೀಡಲಿದೆ.

ಟ್ರಾವೆಲ್ಸ್ ಮಾಲೀಕರಿಗೆ ಸಂಕಷ್ಟ
ಈ ವ್ಯವಸ್ಥೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವವರು ಟ್ರಾವೆಲ್ಸ್ ವಾಹನಗಳ ಮಾಲೀಕರು. ಅವರು ತಮ್ಮ ವಾಹನಗಳಿಗೆ ಫಾಸ್‌ಟ್ಯಾಗ್ ಬಳಸಲು ಪ್ರತ್ಯೇಕ ಖಾತೆಗಳನ್ನು ತೆರೆದು ಅದರಲ್ಲಿ ಹೆಚ್ಚಿನ ಹಣ ಜಮೆ ಮಾಡಬೇಕಾಗುತ್ತದೆ. ನಿರಂತರ ವ್ಯವಹಾರಗಳನ್ನು ನಡೆಸುವುದರಿಂದ ಅವರು ತಮ್ಮ ದೈನಂದಿನ ವ್ಯವಹಾರಗಳ ಖಾತೆಯಲ್ಲದೆ ವಾಹನಗಳಿಗೆಂದೇ ಪ್ರತ್ಯೇಕ ಖಾತೆ ತೆರೆಯಬೇಕಾದ ಕಷ್ಟಕ್ಕೆ ಸಿಲುಕಲಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications