ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vokal : ಕಲಿಕೆಯ ಹೊಸ ರೂಪ, ಎಲ್ಲಾ ಪ್ರಶ್ನೆಗೂ ಉತ್ತರಭೂಪ

|
Google Oneindia Kannada News

ಬೆಂಗಳೂರು, ಆಗಸ್ಟ್ 06: ಪ್ರತಿಯೊಬ್ಬರು ಮಾಹಿತಿ ಹಾಗೂ ಜ್ಞಾನವನ್ನು ಬೆರಳ ತುದಿಯಲ್ಲಿ ಪಡೆಯಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ. ಅದಕ್ಕಾಗಿ ವಿಶ್ವದ ಪ್ರಸಕ್ತ ವಿದ್ಯಮಾನಗಳು, ಜ್ಞಾನ ವೃದ್ಧಿಗಾಗಿ ಬೇಕಾದ ಹಲವು ವಿಚಾರ, ಮಾಹಿತಿಗಳನ್ನು ಒಳಗೊಂಡ 'ವೋಕಲ್ ಆ್ಯಪ್' ನಿಮ್ಮ ಮಾತೃಭಾಷೆಯಾದ ಕನ್ನಡದಲ್ಲಿಯೂ ಬಳಕೆಗೆ ಲಭ್ಯವಾಗಿದೆ.

ಭಾರತದ ಅತಿದೊಡ್ಡ ಪ್ರಾದೇಶಿಕ ಭಾಷೆ ಆಧಾರಿತ ವೋಕಲ್ ಆ್ಯಪ್ ನಲ್ಲಿ ದೇಶಿಯ ಆಸಕ್ತಿಯ ಜ್ಞಾನ ಹಂಚಿಕೆಗಾಗಿ ಕನ್ನಡ ಸೇರಿದಂತೆ ಭಾರತದ 9 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

ಈಗಾಗಲೇ ವೋಕಲ್ ಆ್ಯಪ್ ನ್ನು 20 ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದು, ಈ ಆ್ಯಪ್ ಬಳಕೆದಾರರ ಸಂಖ್ಯೆಯು ಪ್ರತಿ ತಿಂಗಳು ಶೇ.30ರಿಂದ 50ರವರೆಗೆ ಬೆಳವಣಿಗೆ ಹೊಂದುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ತಿಂಗಳು 1 ಕೋಟಿಗೂ ಅಧಿಕ ಆ್ಯಪ್ ಬಳಕೆದಾರರನ್ನು ಹೊಂದುವ ಗುರಿ ಹೊಂದಿದೆ.

ವೋಕಲ್ ಜ್ಞಾನ ಹಂಚಿಕೆಯ ವೇದಿಕೆಯಾಗಿದ್ದು,ಪ್ರತಿದಿನ ಹೊಸದನ್ನು ಕಲಿಯಲು ದೇಶೀಯ ಬಳಕೆದಾರರು ವೋಕಲ್ ಆ್ಯಪ್ ನ್ನು ಬಳಸುತ್ತಾರೆ.

ಈ ಜ್ಞಾನ ಹಂಚಿಕೆ ಹೆಚ್ಚಿನ ಪ್ರಮಾಣದಲ್ಲಿಜನರಲ್ಲಿ ಆಸಕ್ತಿ ಹೆಚ್ಚಿಸುವುದಲ್ಲದೆ, 10ಕ್ಕೂ ಹೆಚ್ಚು ಆಯ್ಕೆ ಮತ್ತು 1000 ಕ್ಕಿಂತ ಉಪಹಿತಾಸಕ್ತಿಗಳ ನಡುವೆ ಪ್ರಶ್ನೆ ಕೇಳಿರುವವರನ್ನು ಅನುಸರಿಸಬಹುದು. ಈಗ ಜ್ಞಾನ ಹಂಚಿಕೆಯು ಆಡಿಯೋ ಹಾಗೂ ವಿಡಿಯೋ ಮೂಲಕ ದೊರೆಯುತ್ತದೆ.

ಪ್ರಶ್ನೆಗಳನ್ನು ನಿಮ್ಮದೇ ಭಾಷೆಯಲ್ಲಿ ಕೇಳಿ

ಪ್ರಶ್ನೆಗಳನ್ನು ನಿಮ್ಮದೇ ಭಾಷೆಯಲ್ಲಿ ಕೇಳಿ

ಈಗಾಗಲೇ ವೋಕಲ್ ಆ್ಯಪ್ ನ್ನು 20 ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದು, ಆ್ಯಪ್ ಬಳಕೆದಾರರು ಹಿಂದಿ, ಕನ್ನಡ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿ ಹೆಚ್ಚಿನ ಪ್ರಮಾಣದಲ್ಲಿ ಜ್ಞಾನ ಪಡೆಯಬಹುದು. ಪ್ರಶ್ನೆಗಳಿಗೆ ಉತ್ತರಗಳನ್ನು ವೀಡಿಯೊ ಮತ್ತು ಆಡಿಯೋ ಮೂಲಕ ಜ್ಞಾನವು ವೇದಿಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳ್ಳುತ್ತದೆ.

ಶೇ.90 ಮಂದಿ ಪ್ರಾದೇಶಿಕ ಭಾಷೆ ಬಳಸುತ್ತಿದ್ದಾರೆ

ಶೇ.90 ಮಂದಿ ಪ್ರಾದೇಶಿಕ ಭಾಷೆ ಬಳಸುತ್ತಿದ್ದಾರೆ

ಭಾರತದಲ್ಲಿ ಶೇ.10 ರಷ್ಟು ಮಂದಿ ಇಂಗ್ಲೀಷ್ ಭಾಷೆ ಬಳಸುತ್ತಿದ್ದು, ಆದರೆ ದೇಶದಲ್ಲಿ ಶೇ.90 ಮಂದಿ ಪ್ರಾದೇಶಿಕ ಭಾಷೆ ಮಾತನಾಡುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ಸಂಭಾಷಣೆ ಮಾಡಲು ಕಷ್ಟವೆನಿಸುವ ದೇಶೀಯ ಜನರು ತಮಗೆ ಬೇಕಾದ ಮಾಹಿತಿ ಮತ್ತು ಜ್ಞಾನವನ್ನು ಸೂಕ್ತ ಪ್ರಮಾಣದಲ್ಲಿ ವಿವಿಧ ಭಾಷೆಗಳ ಪ್ರಶ್ನೆಗಳಿಗೆ ಅವರವರ ಭಾಷೆಯಲ್ಲಿ ಉತ್ತರಗಳನ್ನು ವೋಕಲ್ ಮೂಲಕ ಪಡೆಯಬಹುದು.

ತಜ್ಞರಿಂದ ಆಡಿಯೋ ಅಥವಾ ವಿಡಿಯೋ ಪ್ರತಿಕ್ರಿಯೆ

ತಜ್ಞರಿಂದ ಆಡಿಯೋ ಅಥವಾ ವಿಡಿಯೋ ಪ್ರತಿಕ್ರಿಯೆ

ಇಂಗ್ಲೀಷ್ ಭಾಷೆ ಅರಿಯದ ಮೊಬೈಲ್ ಬಳಕೆದಾರರು ಮೊಬೈಲ್ ಬಳಸುವಾಗ ಅಂತರ್ಜಾಲದಲ್ಲಿ ಮಾಹಿತಿ ಮತ್ತು ಜ್ಞಾನದ ಕೊರತೆ, ಸಮಸ್ಯೆಯನ್ನು ಎದುರಿಸುವ ಬಳಕೆದಾರರು ವೋಕಲ್ ಆ್ಯಪ್ ಬಳಕೆಯು ಬಹಳ ಉಪಯುಕ್ತ . ಕೆಪಿಎಂಜಿ ಮತ್ತು ಗೂಗಲ್ ನಡೆಸಿದ ಅಧ್ಯಯನವೊಂದರ ಪ್ರಕಾರ, ಪ್ರಾದೇಶಿಕ ಭಾಷಾ ಬಳಕೆದಾರರು 2021 ರ ಹೊತ್ತಿಗೆ ಭಾರತದ ಅಂತರ್ಜಾಲದ ಬಳಕೆದಾರರು ಸುಮಾರು 75% ನಷ್ಟು ಪಾಲನ್ನು ನಿರೀಕ್ಷಿಸುತ್ತಾರೆ.

ಯಾವುದೇ ಭಾಷೆಯ ಜನರು ವೋಕಲ್‌‌ ಆ್ಯಪ್ ನಲ್ಲಿ ತಮ್ಮ ಪ್ರಶ್ನೆಯಲ್ಲಿ ಆಡಿಯೋ ಮೂಲಕ ತಿಳಿಸಿದರೆ ಆ ಪ್ರಶ್ನೆಗೆ ಆ ಕ್ಷೇತ್ರಕ್ಕೆ ಸಂಬಂಧಿತ ತಜ್ಞರೇ ಆಡಿಯೋ ಅಥವಾ ವಿಡಿಯೋ ಮೂಲಕ ಉತ್ತರಿಸಲಿದ್ದಾರೆ.

20 ಲಕ್ಷಕ್ಕೂ ಹೆಚ್ಚು ಮಾಸಿಕ ಬಳಕೆದಾರರು

20 ಲಕ್ಷಕ್ಕೂ ಹೆಚ್ಚು ಮಾಸಿಕ ಬಳಕೆದಾರರು

ಅಷ್ಟೆ ಅಲ್ಲದೆ ತಜ್ಞರು ಆ ವಿಚಾರ ಕುರಿತು ಲೈವ್‌ ವಿಡಿಯೋ ಕೂಡ ಮಾಡಲಿದ್ದಾರೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಮಾಸಿಕ ಬಳಕೆದಾರರನ್ನು ಹೊಂದಿದ್ದು ಈ ಸಂಖ್ಯೆ ವೇಗವಾಗಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ತಮ್ಮ ಸ್ಥಳೀಯ ಭಾರತೀಯ ಭಾಷೆಯಲ್ಲಿ ವೋಕಲ್ ಪ್ರತಿಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಪ್ರಾರಂಭಿಸುವ ಮೊದಲು ತಜ್ಞರಿಂದ ಪರಿಶೀಲಿಸಲಾಗುತ್ತದೆ.

ವೋಕಲ್ ಸಂಸ್ಥೆಯ ಸಿಇಒ ಅಪ್ರಮೇಯ

ವೋಕಲ್ ಸಂಸ್ಥೆಯ ಸಿಇಒ ಅಪ್ರಮೇಯ

"ವೋಕಲ್ ಆ್ಯಪ್ ನ್ನು 10 ಪ್ರಾದೇಶಿಕ ಭಾಷೆಗಳಿಗೆ ತೆರೆಯಲು ಉತ್ಸುಕರಾಗಿದ್ದು, ಭಾರತವು ಭಾಷಾ ವೈವಿಧ್ಯತೆಯನ್ನು ಹೊಂದಿದೆ.ಈ ವೈವಿಧ್ಯತೆಯನ್ನು ಅವಕಾಶವಾಗಿ ಬಳಸಿ ನಾವು ಅಂತರ್ಜಾಲದ ಶಕ್ತಿಯನ್ನು ಉಪಯೋಗಿಸಿಕೊಂಡು ಜ್ಞಾನವನ್ನು ಪ್ರಾದೇಶಿಕ ಭಾಷೆಯಲ್ಲಿ ಪಸರಿಸಲು ಭಾರತದ ಅತ್ಯುತ್ತಮ ಮನಸ್ಸನ್ನು ಸಕ್ರಿಯಗೊಳಿಸಲು ಬಯಸುತ್ತೇವೆ. ಇದೀಗ ಹೆಚ್ಚಿನ ಸಂಖ್ಯೆ ಸಮುದಾಯಗಳಿಗೆ ಜ್ಞಾನ ಪೂರೈಸಲು ನಮಗೆ ಸಂತೋಷವಾಗುತ್ತದೆ." ಎಂದು ವೋಕಲ್ ಸಂಸ್ಥೆಯ ಸಿಇಒ ಅಪ್ರಮೇಯ ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ .

ಸಹ-ಸಂಸ್ಥಾಪಕ ಮಾಯಾಂಕ್

ಸಹ-ಸಂಸ್ಥಾಪಕ ಮಾಯಾಂಕ್

ವೋಕಲ್ ಸಂಸ್ಥೆಯ ಸಹ-ಸಂಸ್ಥಾಪಕ ಮಾಯಾಂಕ್ ಬಿಡಾವಾಟ್ಕಾ ಅವರ ಪ್ರಕಾರ " ಭಾರತದ 500 ದಶಲಕ್ಷ ಇಂಟರ್ನೆಟ್ ಬಳಕೆದಾರರಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ವೋಕಲ್ ಮೊದಲ ಉತ್ಪನ್ನಗಳಲ್ಲಿ ಒಂದಾಗಿದೆ. ಆಯಾ ಸಮುದಾಯಗಳಿಂದ ಇತರ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದೇವೆ. ಪ್ರತಿ ಹೊಸ ಭಾಷೆ ನಮ್ಮ ಆಂದೋಲನವನ್ನು ಹೆಚ್ಚಿಸುತ್ತದೆ .ಹಿಂದಿ ಭಾಷಿಕರ ಪ್ರಾಶಸ್ತ್ಯಗಳು ತಿಳಿದಿದ್ದು, ಮುಂದಿನ ದಿನಗಳಲ್ಲಿ ಇತರ ಭಾರತೀಯ ಭಾಷೆಗಳಲ್ಲಿ ವೋಕಲ್ ಆರಂಭಿಸುವ ಸಾಮರ್ಥ್ಯ ಹೊಂದಿದ್ದೇವೆ ' ಎಂದರು.

ಹೆಚ್ಚಿನ ವಿವರಗಳಿಗಾಗಿ, ಗೆಟ್ ವೋಕಲ್ ವೆಬ್ ಸೈಟ್, ಗೂಗಲ್ ಪ್ಲೇನಲ್ಲಿ ವೋಕಲ್ ಆಪ್ ನೋಡಬಹುದು.

English summary
Vokal is Question Answer App for Learning in Kannada and other Vernacular Languages that enables Video chat with experts and gets them to share their learning with everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X