Viral Video: 250 ಪೌಂಡ್ ಮೊಸಳೆಯನ್ನು ಎತ್ತಿ ಮುದ್ದಾಡಿದ ಯುವತಿ; ಇವರ ಸ್ನೇಹಕ್ಕೆ ನೆಟ್ಟಿಗರು ಫಿದಾ!
ನಾಯಿ, ಬೆಕ್ಕು, ಮೊಲ, ಗಿಳಿ ಹೀಗೆ ಕೆಲವೊಂದು ಪ್ರಾಣಿಗಳನ್ನ ಸಾಕೋದು, ಅಪ್ಪಿಕೊಂಡು ಮುದ್ದಾಡೋದು ಸಹಜ. ಆದರೆ ಮೊಸಳೆಯನ್ನು ಬಿಗಿದಪ್ಪಿ ಮುದ್ದಾಡೋದು ಖಂಡಿತಾ ಸಾಮಾನ್ಯವಲ್ಲ. ಮೊಸಳೆ ಮನುಷ್ಯರನ್ನು ತಿನ್ನುತ್ತದೆ ಎನ್ನುವ ಭಯ ಒಂದು ಕಡೆ ಆದರೆ, ಬಾಲದಲ್ಲಿ ಹೊಡೆಯುವ ಗುಣವೂ ಅದಕ್ಕಿದೆ. ಬಲು ಅಪಾಯಕಾರಿ ಜೀವಿ ಅದು. ಏನೂ ಗೊತ್ತಿಲ್ಲದ ಹಾಗೆ ಸುಮ್ಮನೆ ಇದ್ದು ಯಾವ ಹೊತ್ತಿನಲ್ಲಿ ಗಬ್ಬಕ್ಕನೇ ಬಾಯಿ ಹಾಕುವುದೋ ಗೊತ್ತೇ ಆಗಲ್ಲ. ನೋಡುವುದಕ್ಕೂ ಸುಂದರ ಎನ್ನುವಂತ ಪ್ರಾಣಿ ಅದಲ್ಲ.

Viral Video: 250 ಪೌಂಡ್ ತೂಕದ ಮೊಸಳೆ
ಆದರೂ ಇಲ್ಲೊಬ್ಬ ಮಹಿಳೆಗೆ ಮಾತ್ರ ಈ ಮೊಸಳೆ ಅಚ್ಚು ಮೆಚ್ಚು. ಮೊಸಳೆಯ ಹೆಸರು ಡಾರ್ತ್. ಡಾರ್ತ್‌ನ ತೂಕ ಬರೋಬ್ಬರಿ 250 ಪೌಂಡ್. ಈ ಡಾರ್ತ್ ಮತ್ತು ಅವನ ಕೇರ್ ಟೇಕರ್ ವಿಡಿಯೋ ಇದೀಗ ಭಾರೀ ವೈರಲ್ ಆಗ್ತಾ ಇದೆ. 250 ಪೌಂಡ್ ತೂಕವಿದ್ದರೂ ಇದರ ಕೇರ್ ಟೇಕರ್ ಮಾತ್ರ ಪುಟ್ಟ ಮಗುವನ್ನು ಎತ್ತಿಕೊಳ್ಳುವ ರೀತಿ ಎತ್ತಿಕೊಂಡು ಮುದ್ದಾಡುತ್ತಾರೆ. ಮೊಸಳೆ ಕೂಡಾ ತುಂಬಾನೇ ಶಾಂತವಾಗಿ ಇವರ ಬಳಿ ಇರುತ್ತದೆ. ಅಷ್ಟಕ್ಕೂ ಇದು ಪ್ರಾಣಿ ಸಂಗ್ರಹಾಲಯದ ಮೊಸಳೆ.
ವೈರಲ್ ಆಗ್ತಾ ಇದೆ ವಿಡಿಯೋ
ಈ ಕೇರ್ ಟೇಕರ್‌ಗೆ ಡಾರ್ತ್ ಅಂದರೆ ಒಂಚೂರು ಭಯ ಇಲ್ಲ. ಹಾಗಾಗಿಯೇ ಆರಾಮಾಗಿ ಎತ್ತಿಕೊಂಡು ಹೋಗ್ತಾರೆ. ಈ ವಿಡಿಯೋವನ್ನು ಮೃಗಾಲಯದ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲಿನ ಕೇರ್ ಟೇಕರ್ ಮೊಸಳೆ ಡಾರ್ತ್ ಜೊತೆಗಿನ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
250 ಪೌಂಡ್ ತೂಕವಿರೋ ಮೊಸಳೆಯನ್ನು ಒಂದು ಕ್ಷಣಕ್ಕೆ ಎತ್ತಿ ಅಲ್ಲಿಯೇ ಬಿಡುವುದು ದೊಡ್ಡ ವಿಷಯವಲ್ಲ. ಆದ್ರೆ ಅದನ್ನು ಎತ್ತಿಕೊಂಡು ಸುತ್ತಾಡುವುದು ಸಾಹಸಾನೇ. ಕತ್‌ರೋಂಖೆ ಕಿಲಾಡಿ ರಿಯಾಲಿಟಿ ಶೋನಲ್ಲಿ ಸಣ್ಣ ಸಣ್ಣ ಗಾತ್ರದ ಮೊಸಳೆಗಳನ್ನು ಎತ್ತಲು ಅಥವಾ ಅವುಗಳ ಹತ್ತಿರ ಹೋಗಲು ಸ್ಪರ್ಧಿಗಳು ಎಷ್ಟು ಹೆದರುತ್ತಾರೆ. ಹಾಗಿರುವಾಗ ಈ ದೈತ್ಯ ಮೊಸಳೆಯನ್ನ ಎತ್ತುವುದಕ್ಕೆ ಗಟ್ಟಿ ಗುಂಡಿಗೆಯೇ ಬೇಕು.
ಇಬ್ಬರ ನಡುವಿನ ಸ್ನೇಹ
ಡಾರ್ತ್ ನನ್ನೊಂದಿಗೆ ತುಂಬಾ ಸಮಯದಿಂದ ಇದ್ದಾನೆ ಹಾಗಾಗಿ ಅವನ ಮತ್ತು ನಮ್ಮ ನಡುವಿನ ಸಂಬಂಧ ಚೆನ್ನಾಗಿದೆ. ಅವನು ನಾನು ಅವನನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇನೆಯೋ ಅವನು ಕೂಡಾ ನನ್ನನ್ನು ಹಾಗೆಯೇ ಅರ್ಥ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಕೇರ್ ಟೇಕರ್. ಮೊಸಳೆ ಮನುಷ್ಯನ ಜೊತೆ ಅಷ್ಟೂ ಆರಾಮಾಗಿ ಇರುವ ರೀತಿ ಎಲ್ಲರ ಆಶ್ವರ್ಯಕ್ಕೆ ಕಾರಣವಾಗಿದೆ.
ಸಣ್ಣ ಎಚ್ಚರಿಕೆ ಯಾವತ್ತೂ ಇರುತ್ತದೆ
ಹಾಗಂತ ಇನ್ನು ಮೃಗಾಲಯದ ಕೇರ್ ಟೇಕರ್‌ಗಳು ಇಲ್ಲಿನ ಪ್ರಾಣಿಗಳ ನಡವಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳೋದಿಲ್ಲ. ಅವರ ನಡುವಿನ ಸಂಬಂಧ ವರ್ಷಗಳದ್ದೇ ಆಗಿರಬಹುದು. ಆಪ್ತತೆ, ಸಲಿಗೆ ಬೆಳೆದಿರಬಹುದು. ಆದರೆ ಅವು ಕಾಡು ಪ್ರಾಣಿ ಎನ್ನುವ ಸತ್ಯ ಕೂಡಾ ಅವರ ಮನಸ್ಸಿನ ಮೂಲೆಯಲ್ಲಿ ಯಾವಾಗಲೂ ಇರುತ್ತದೆ. ಈ ದೈತ್ಯ ಮೊಸಳೆ ಡಾರ್ತ್ ಕೂಡಾ ಹಾಗೆಯೇ. ಯಾವಾಗ ಅದರ ಬಳಿ ಹೋಗಬೇಕು, ಮುದ್ದಾಡಬೇಕು, ಎತ್ತಬೇಕು ಎಲ್ಲವೂ ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಯಾವತ್ತೂ ಎಚ್ಚರಿಕೆಯಿಂದ ಮತ್ತು ಗೌರವದಿಂದಲೇ ಅವುಗಳನ್ನು ನಡೆಸಿಕೊಳ್ತಾರೆ.
ಸೋಶಿಯಲ್ ಮಿಡಿಯಾದಲ್ಲಿ ಬರುತ್ತಿರುವ ಕಾಮೆಂಟ್
ಮೊಸಳೆ ಮತ್ತು ಮಹಿಳೆಯ ಈ ವಿಡಿಯೋ ನೋಡಿದ ತುಂಬಾ ಜನ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಆ ಮೊಸಳೆಯ ಗಾತ್ರ ಮತ್ತು ಮೃಗಾಲಯದ ಕೇರ್ ಟೇಕರ್‌ನ ಆತ್ಮವಿಶ್ವಾಸ ಮತ್ತು ದೈಹಿಕ ಬಲವನ್ನು ಮೆಚ್ಚಿದ್ದಾರೆ.
ಇದು ತುಂಬಾ ದೊಡ್ಡ ಮೊಸಳೆ ಎಂದು ಒಬ್ಬರು ಬರೆದರೆ, ನಾನು ಇಷ್ಟು ಧೈರ್ಯ ಮಾಡಲು ಸಾಧ್ಯವೇ ಇಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಇಬ್ಬರ ನಡುವಿನ ನಂಬಿಕೆ ಅದ್ಭುತವಾಗಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
