ಬೆಳ್ಳಂ ಬೆಳಗ್ಗೆ ಪತಿಯನ್ನು ಬೆಂಡೆತ್ತಿದ ಪತ್ನಿ: ವಿಡಿಯೋ ಸಖತ್ ವೈರಲ್
ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೂ ಎನ್ನುವ ಮಾತಿದೆ. ಆದರೆ ಈ ವಿಡಿಯೋ ನೋಡಿದರೆ, ಎದ್ದ ಮೇಲೆ ಮತ್ತೆ ಫೈಟ್ ಸ್ಟಾರ್ಟ್ ಎಂಬಂತಿದೆ. ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿರುವು ಈ ವಿಡಯೋ ಒಮ್ಮೆ ನೋಡಿದರೆ ಪದೆ ಪದೇ ನೋಡ್ತಾನೆ ಇರಬೇಕು ಅನಿಸುತ್ತದೆ.
ಆ ಗಂಡನ ಮೇಲೆ ಅವಳಿಗೆ ಅದೆಂತಾಹ ಸಿಟ್ಟು ರೀ.. ಛೇ ಅವಳ ಕೈಗೆ ಸಿಕ್ಕಿದ್ದನ್ನೆಲ್ಲಾ ಎಸೆಯುತ್ತಿದ್ದಾಳೆ. ಪಾಪಾ ಆ ಗಂಡ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡಿದ ಪರಿ ನಿಜಕ್ಕೂ ಕರುಣೆ ಹುಟ್ಟಿಸುವಂತಿದೆ. ಆದರೆ ಆ ಮಹಾಶಯನೂ ಸಹ ಏನೋ ದೊಡ್ಡ ತಪ್ಪನ್ನೇ ಮಾಡಿದ್ದಂತೂ ಪಕ್ಕಾ. ಇಲ್ಲಾ ಅಂದರೆ ಯಾರೀ ಸುಕಾ ಸುಮ್ಮನೆ ಪತ್ನಿಯಿಂದ ಹೀಗೆ ಒದೆ ತಿಂತಾರೆ.

ಸಾಮಾಜಿತ ತಾಣ ಅಂತಾರ್ಜಾಲ ಬಂದು ಮೇಲೆ ವಿಶ್ವವೇ ಚಿಕ್ಕದು ಎಂಬಂತೆ ಭಾಸವಾಗುತ್ತಿದೆ. ವಿಶ್ವದ ನಾನಾ ಮೂಲೆಗಳ ವಿದ್ಯುನ್ಮಾನಗಳು ಕ್ಷಣಾರ್ಧದಲ್ಲಿ ನಮ್ಮ ಅಂಗೈ ತಲುಪುತ್ತವೆ. ದಿನವೂ ಇಂಟರನೆಟ್‌ನಲ್ಲಿ ಒಂದಿಲ್ಲಾ ಒಂದು ವಿಡಿಯೋ ಸಖತ್ ಟ್ರೆಂಡ್ ಸೃಷ್ಟಿಸಿರುತ್ತದೆ. ಕೆಲವೊಮ್ಮೆ ಆಘಾತಕಾರಿ ಮತ್ತು ಗೊಂದಲದ ವೀಡಿಯೊ ವೈರಲ್ ಆಗುತ್ತದೆ ಮತ್ತು ಕೆಲವೊಮ್ಮೆ ಜನರನ್ನು ನಗಿಸುವ ವೀಡಿಯೊ ವೈರಲ್ ಆಗುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತಿ ಈ ಜಗತ್ತಿನಲ್ಲಿ ಎಲ್ಲರ ಮುಂದೆ ಸಿಂಹದಂತೆ ಘರ್ಜಿಸಿದರೂ, ಹೆಂಡತಿಯ ಮುಂದೆ ಸಿಂಹದಂತೆ ಬದುಕಲು ಸಾಧ್ಯವಿಲ್ಲ. ಒಳ್ಳೆಯ ಗಂಡಂದಿರು ಕೂಡ ತಮ್ಮ ಹೆಂಡತಿಯರ ಮುಂದೆ ಒದ್ದೆ ಬೆಕ್ಕುಗಳಾಗುತ್ತಾರೆ. ಇದಕ್ಕೊಂದು ಉದಾಹರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
पत्नी से बहस यानी जीवन में तहस-नहस।
— Reetesh Pal (@PalsSkit) June 6, 2024
बोल रहा था की बहुत जुबान चला रही हो 👅 pic.twitter.com/qRUB07Oehj
ಪತಿ ತನ್ನ ಹೆಂಡತಿಯೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿರಬಹುದು, ನಂತರ ಅವನ ಹೆಂಡತಿ ಕೋಪಗೊಂಡಳು. ಆ ನಂತರ ನಡೆದ ಘಟನೆಯನ್ನು ಚಿತ್ರಿಕರಿಸಲಾಗಿದೆ. ವ್ಯಕ್ತಿಯೋರ್ವ ತಗಡಿನ ಛಾವಣಿಯ ಮೇಲೆ ಹತ್ತುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅವನ ಹೆಂಡತಿ ಕೆಳಗೆ ನಿಂತ್ತು, ಆಕೆಯ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಪತಿಗೆ ಎಸೆಯುತ್ತಿದ್ದಾಳೆ.
ಈ ವೀಡಿಯೊವನ್ನು X ಪ್ಲಾಟ್‌ಫಾರ್ಮ್ ನಲ್ಲಿ @PalsSkit ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಸುದ್ದಿ ಬರೆಯುವ ಈ ವಿಡಿಯೋವನ್ನು ಸಾವಿರಾರು ಜನರು ನೋಡಿದ್ದಾರೆ.











Click it and Unblock the Notifications