Viral Video: ಟ್ರಾಫಿಕ್ ಪೊಲೀಸ್ ಕಾಲಿಗೆ ಸವಾರನಿಂದ ಮಸಾಜ್: ಇದು ದರ್ಪವಾ? ಏನಿದು ತಿಳಿಯಿರಿ
ಪುಣೆ, ಜೂನ್ 03: ಪೊಲೀಸ್ ಸಿಬ್ಬಂದಿಯು ಸದಾ ತಮ್ಮ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಕೆಲವರಂತೂ ಅನಾರೋಗ್ಯದ ಮಧ್ಯದಲ್ಲೇ ನಿಯೋಜಿತ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದೇ ರೀತಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಕಾಲಿಗೆ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಪುಣೆಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಅಪರಿಚಿತ ಯುವಕರಿಂದ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏನಾಗಿದೆ ಎಂದು ಹತ್ತಿರದಿಂದ ನೋಡಿದರೆ, ಪೊಲೀಸ್ ಕಾಲು ನೋವಿನಿಂದ ಬಳಲುತ್ತಿರುವುದು ಗೊತ್ತಾಗುತ್ತದೆ.

ಇತ್ತೀಚೆಗೆ ಪುಣೆಯಲ್ಲಿ ಪೋರ್ಸೆ ಕಾರು ಅಪಘಾತವಾಗಿತ್ತು. ಇದರಲ್ಲಿ ಅಪ್ರಾಪ್ತ ಬಾಲಕನಿಂದ ಕೃತ್ಯ ನಡೆದಿತ್ತು. ಆತನ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಆತನ ತಾಯಿಯ ರಕ್ತದ ಮೂಲಕ ಬದಲಾಯಿಸಲಾಗಿತ್ತು ಎಂಬುದು ಖಚಿತವಾದ ಬಳಿಕ ಪೊಲೀಸರು ಬಾಲ ಆರೋಪಿಯ ತಾಯಿಯನ್ನು ಬಂಧಿಸಿದ್ದಾರೆ. ಸೋಮವಾರ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.
ಇದು ಪೊಲೀಸ್ ದರ್ಪವಾ? ವಿಡಿಯೋ ಬಗ್ಗೆ ಸ್ಪಷ್ಟನೆ ಏನಿದೆ?
ಈ ಸ್ಥಳದಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ವಾಹನ ಸವಾರರೊಬ್ಬರ ಕಾಲಿಗೆ ಮಸಾಜ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಪೊಲೀಸ್ ದರ್ಪ ಎಂದಿದ್ದಾರೆ. ಬಳಿಕ ಪುಣೆ ಪೊಲೀಸ್ ಉಪ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
57 ವರ್ಷ ವಯಸ್ಸಿನ ಮತ್ತು ತೀವ್ರ ಮಧುಮೇಹ ಹೊಂದಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಈ ಸ್ಥಳದಲ್ಲಿ 'ಕುಡಿದು ವಾಹನ ಚಾಲನೆ' ತಪಾಸಣೆ ನಡೆಸುತ್ತಿದ್ದರು. ಎರಡು ದಿನಗಳ ಕಾಲ ನಿರಂತರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದರು. ಕರ್ತವ್ಯದ ಒತ್ತಡದಲ್ಲಿದ್ದ ಅವರ ರಕ್ತದಲ್ಲಿನ ಸಕ್ಕರೆ 550ಕ್ಕೆ ಏರಿದ್ದರಿಂದ ಅವರು ತೀವ್ರ ಕಾಲಿನ ಸೆಳೆತ ಎದುರಿಸಿದ್ದರು.
ಪೊಲೀಸ್ ಸಿಬ್ಬಂದಿ ಕಾಲುನೋವಿನಿಂದ ಬಳಲುತ್ತಿದ್ದನ್ನು ಕಂಡು ಒಬ್ಬ ಪ್ರಯಾಣಿಕರು ಸ್ವಯಂ ಪ್ರೇರಿತವಾಗಿ ಪೊಲೀಸ್ ಸಿಬ್ಬಂದಿಗೆ ಕಾಲಿಗೆ ಮಸಾಜ್ ಮಾಡಿ ಸಹಾಯ ಮಾಡಿದ್ದಾರೆ. ಅನಾರೋಗ್ಯ ವೇಳೆ ಅವರಿಗೆ ನೆರವಾಗಿದ್ದಾರೆ. ಈ ಘಟನೆಯ ವಿಡಿಯೋ ಮಾಡಿ ದಾರಿಹೋಕರು ವೈರಲ್ ಮಾಡಿದ್ದಾರೆ. ಈ ಬಗ್ಗೆ ತಪ್ಪು ಅರ್ಥೈಸುವುದು ಬೇಡ ಎಂದು ಪೊಲೀಸ್ ಉಪ ಆಯುಕ್ತರು (ಟ್ರಾಫಿಕ್) ಸ್ಪಷ್ಟನೆ ನೀಡಿದರು.
ಕಾರು ಅಪಘಾತದ ಸ್ಥದಲ್ಲಿ ಪೊಲೀಸ್ ಸಿಬ್ಬಂದಿ ಎರಡು ದಿನದಿಂದ ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಅವರು ಕುಸಿದು ಬಿದ್ದಿದ್ದರು. ಆಗ ಕಾಲಿಗೆ ಮಸಾಜ್ ಮಾಡುವ ವಿಡಿಯೋ ಸೆರೆ ಹಿಡಿದು ವೈರಲ್ ಮಾಡಲಾಗಿದೆ. ವಾಸ್ತವದಲ್ಲಿ ಇದು ಮಾನೀವಿಯತೆ ಕೆಲಸವಾಗಿದೆ. ಈ ನಿಟ್ಟಿನಲ್ಲಿ ವಿಡಿಯೋ ವೈರಲ್ ಆಗಬೇಕಿತ್ತು ಎಂದು ಕೆಲವರು ಅಭಿಪ್ರಾಯ ಹೊರ ಹಾಕಿದ್ದಾರೆ.












Click it and Unblock the Notifications