ವೈರಲ್ ವಿಡಿಯೋ: ಟ್ರಕ್‌ನ ಹಾರ್ನ್‌ಗೆ ನಡುರಸ್ತೆಯಲ್ಲಿ ಬೈಕರ್ಸ್‌ನ 'ನಾಗಿನ್' ನೃತ್ಯ
ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಮುಂಗಾರು ಅದೆಷ್ಟು ಖುಷಿ ಕೊಟ್ಟಿದೆ ಎಂದು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಯಾಕೆಂದ್ರೆ ಕಳೆದೆರೆಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಮನೆ ಬಿಟ್ಟು ಹೊರಬರಲು ಹಿಂದಾಟುತ್ತಿದ್ದ ಜನಕ್ಕೆ ಈ ಬಾರಿಯ ಮುಂಗಾರು ಸ್ವರ್ಗದ ಬಾಗಿಲು ತೆರೆದಷ್ಟೇ ಖುಷಿ ನೀಡಿದೆ. ಪ್ರವಾಸ, ಟ್ರಕ್ಕಿಂಗ್, ಔಟಿಂಗ್ ಹೋಗುವ ಯುವಕರಿಗೆ ಇದು ಸಖತ್ ಚಿಲ್ ನೀಡಿದ್ದು ಸುಳ್ಳಲ್ಲ.
ಬೇಸಿಗೆಯ ಸುದೀರ್ಘ ಅವಧಿಯ ನಂತರ ಮಳೆ ಜನರ ಹೃದಯವನ್ನು ಸಂತೋಷಗೊಳಿಸಿದೆ. ಈ ಮುಂಗಾರು ಮಳೆಯನ್ನು ಆನಂದಿಸಲು ಬೈಕ್ ಸವಾರರು ರಸ್ತೆಯಲ್ಲಿ 'ನಾಗಿನ್' ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಈ ಘಟನೆ ನಡೆದಿದೆ. ಟ್ರಕ್‌ನ ಹಾರ್ನ್‌ನ ಸಂಗೀತಕ್ಕೆ ಬೈಕರ್‌ಗಳ ಗುಂಪು ಉಲ್ಲಾಸದ ನೃತ್ಯವನ್ನು ಮಾಡಿದೆ. ಮಳೆಯಿಂದ ತೋಯ್ದ ರಸ್ತೆಯ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಅವರು ಆಹ್ಲಾದಕರ ವಾತಾವರಣವನ್ನು ಮನಬಿಚ್ಚಿ ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ.

ಟ್ರಕ್‌ನ ಮುಂದೆ ಬೈಕ್‌ಗಳ ಡ್ಯಾನ್ಸ್
ಜೋರಾಗಿ ಹಾರ್ನ್ ಮಾಡುವ ಟ್ರಕ್‌ನ ಮುಂದೆ ಬೈಕ್‌ಗಳು ನಿಲ್ಲಿಸುವದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. 'ನಾಗಿನ್' ಹಾರ್ನ್ ಹೇಳಿಸುತ್ತಿದ್ದಂತೆ ಬೈಕರ್‌ಗಳು ಬೇಗನೆ ತಮ್ಮ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ನಂತರ ಚಾಲಕನು ಶ್ರೀದೇವಿ ಅಭಿನಯದ 'ನಾಗಿನ್' ಚಿತ್ರದ ಜನಪ್ರಿಯ "ಮೇನ್ ತೇರಿ ದುಷ್ಮನ್" ಹಾಡಿನ ಟ್ಯೂನ್ ಅನ್ನು ಆಧರಿಸಿದ ಟ್ಯೂನ್ ಇದಾಗಿತ್ತು.

ರಸ್ತೆಯಲ್ಲಿ ತೆವಳುತ್ತಾ ನಾಗಿನ್ ನೃತ್ಯ
ಈ ಟ್ಯೂನ್ ಕೇಳುತ್ತಿದ್ದಂತೆ ಯುವಕರು ಉತ್ಸಾಹದಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಅವರಲ್ಲಿ ಕೆಲವರು ಕಿರಿಚುವ ಮತ್ತು ಉತ್ಸಾಹದಿಂದ ಕೂಗುವುದನ್ನು ಸಹ ಕೇಳಿಬರುತ್ತದೆ. ಒಬ್ಬ ಹುಡುಗ ರಸ್ತೆಯಲ್ಲಿ ತೆವಳುತ್ತಾ ಹಾವಿನ ಸ್ಲಿಥರಿಂಗ್ ಕ್ರಿಯೆಯನ್ನು ನಕಲಿಸುತ್ತಾನೆ.

ಕಾಲೇಜು ದಿನಗಳನ್ನು ನೆನೆಸಿಕೊಂಡ ನೆಟ್ಟಿಗರು
ಟ್ವಿಟರ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ಲಿಪ್‌ಗಳು ಹೊರಹೊಮ್ಮುವುದರೊಂದಿಗೆ ಅವರ ನಾಗಿನ್ ನೃತ್ಯವು ಇಂಟರ್ನೆಟ್‌ನಲ್ಲಿ ತ್ವರಿತ ಹಿಟ್ ಆಗಿದೆ. "ನೀವು ಸಂತೋಷವಾಗಿರಲು ಯಾವುದೇ ಕಾರಣ ಬೇಕಾಗಿಲ್ಲ" ಎಂದು ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸಂತೋಷ ಆಯ್ಕೆಯ ವಿಷಯವಾಗಿದೆ ಇದು ಯಾರ ಸ್ವತ್ತಲ್ಲ" ಎಂದು ಇನ್ನೊಬ್ಬರು ಹೇಳಿದರು. ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಕಾಲೇಜಿನಲ್ಲಿನ ಸಮಯ ಮತ್ತು ನೃತ್ಯದ ದಿನಚರಿಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ.

ಐಎಂಡಿ ಸೂಚನೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ. "2022 ರ ಜುಲೈ 12 ರಿಂದ ಗುಜರಾತ್, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ" ಎಂದು ಅದು ಟ್ವೀಟ್‌ನಲ್ಲಿ ತಿಳಿಸಿದೆ.
Recommended Video












Click it and Unblock the Notifications