ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು

Posted By:
Subscribe to Oneindia Kannada

ಅದರ ಹೆಸರೇ 'ನಾಣಿ' ಹೋಟೆಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಈ ಹೋಟೆಲ್ ಇರೋದು. ಏರ್ ಪೋರ್ಟ್ ನ ರಸ್ತೆಯಲ್ಲಿ ಹೋದರೆ ತುಂಬ ಸಲೀಸಾಗಿ ಅಲ್ಲಿಗೆ ಹೋಗಬಹುದು. ನಾಣಿ ಹೋಟೆಲ್ ಅಂದರೆ ಅಲ್ಲಿನ ಜನ ಬಹಳ ಸುಲಭವಾಗಿ ಹೇಳ್ತಾರೆ. ವಿಜಯಪುರ ಸರ್ಕಲ್ ನ ಹತ್ತಿರವೇ ಈ ಹೋಟೆಲ್ ಇದೆ.

ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್!

ಚಿಕ್ಕಬಳ್ಳಾಪುರಕ್ಕೆ ಟ್ರೆಕ್ಕಿಂಗ್ ಗೆ ಹೋಗುವವರ ಪಾಲಿಗಂತೂ ನಾಣಿ ಹೋಟೆಲ್ ಕಾಯಂ ಅಡ್ಡಾ. ಬೆಳಗ್ಗೆ ಇಲ್ಲಿ ಉಪಾಹಾರ ಮುಗಿಸಿ, ಒಂದಿಷ್ಟು ಬುತ್ತಿ ಕಟ್ಟಿಕೊಂಡು ಹೊರಡುತ್ತಾರೆ. ಬೆಂಗಳೂರಿನಿಂದ ಸ್ವಲ್ಪ ದೂರವೇ ಇದ್ದರೂ ಈ ಹೋಟೆಲ್ ಗೆ ತೆರಳುವ ಕಾಯಂ ಗ್ರಾಹಕರಂತೂ ಇದ್ದೇ ಇದ್ದಾರೆ.

Vijayapura Nani hotel unique place for snacks

ಬೆಳಗ್ಗೆ ಬೇಗ ಹೋದರೆ ಮಾತ್ರ ಎಲ್ಲ ತಿಂಡಿಗಳನ್ನು ರುಚಿ ನೋಡುವ ಅವಕಾಶ ಸಿಗುತ್ತದೆ. ಏಕೆಂದರೆ ತಿಂಡಿ ಮಾಡಿಕೊಂಡು ತಂದಂತೆಲ್ಲ ಖಾಲಿಯಾಗುತ್ತಲೇ ಇರುತ್ತದೆ. ಇಲ್ಲಿನ ಮಸಾಲೆ ದೋಸೆ, ಶಾವಿಗೆ ಉಪ್ಪಿಟ್ಟು, ಇಡ್ಲಿ, ರೈಸ್ ಬಾತ್, ತುಪ್ಪದವಲಕ್ಕಿ, ಹಲ್ವಾ... ಎಲ್ಲವೂ ಬಹಳ ರುಚಿ. ಇದರ ಜತೆಗೆ ಉಪ್ಪಿಟ್ಟು- ಕೇಸರಿ ಬಾತ್ ಕೂಡ ಬಾಯಿ ಚಪ್ಪರಿಸುವಂತಿರುತ್ತದೆ.

Vijayapura Nani hotel unique place for snacks

ಉಳಿದ ಹೋಟೆಲ್ ಗಳಲ್ಲಿ ಶಾವಿಗೆ ಬಾತ್ ಗೆ ಚಟ್ನಿಯನ್ನು ನೀಡಿದರೆ, ಇಲ್ಲಿ ಮೊಸರು ಪಚಡಿಯನ್ನು ಕೊಡುತ್ತಾರೆ. ರೈಸ್ ಬಾತ್, ದೋಸೆ ಮತ್ತಿತರ ತಿಂಡಿಗಳು ಒಂದು ತೂಕವಾದರೆ, ಹಲ್ವಾ, ಮೈಸೂರು ಪಾಕ್, ತುಪ್ಪದವಲಕ್ಕಿಯದು ಮತ್ತೊಂದು ತೂಕ. ಬೆಲೆ ಕೂಡ ಜೇಬಿಗೆ ತೀರಾ ಭಾರವಲ್ಲ.

Vijayapura Nani hotel unique place for snacks

ಯಾವುದಾದರೂ ಶನಿವಾರ ಅಥವಾ ಭಾನುವಾರ ಬಿಡುವು ಮಾಡಿಕೊಂಡು ಹೋದರೆ, ನಾಣಿ ಹೋಟೆಲ್ ನಲ್ಲಿ ತಿಂಡಿ ತಿಂದುಕೊಂಡು ದೇವನಹಳ್ಳಿಯಲ್ಲಿರುವ ಪ್ರವಾಸಿ ತಾಣಗಳನ್ನು ನೋಡಿಕೊಂಡು ವಾಪಸ್ ಬರಲು ಅಡ್ಡಿಯಿಲ್ಲ. ನಾಣಿ ಹೋಟೆಲ್ ವಿಳಾಸ ಹುಡುಕುವುದು ಸಹ ಕಷ್ಟವಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nani hotel located in Vijayapura, Devanahalli taluk, Begaluru rural district. This is unique hotel for vegetarian snacks. Masala dosa, upma, Shavige bath and other snacks which are really taste.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ