ವಿಡಿಯೋ: ಇದು ಮದುವೆಯೋ ಅಥವಾ ಮುಸುಕಿನ ಗುದ್ದಾಟವೋ
ಇತ್ತೀಚಿನ ದಿನಗಳಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಹೀಗಿರುವಾಗ ವಧು-ವರರಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇತ್ತೀಚೆಗೆ ಒಂದು ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ವಧು-ವರರ ನಡುವಳಿಗೆ ವೇದಿಕೆಯ ಮುಂಬಾಗದಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳಿಸಿದೆ.
ಇಂದಿನ ಮದುವೆಗಳಲ್ಲಿ ಕ್ಷಣಮಾತ್ರದಲ್ಲಿ ವಿವಾದಗಳು ಹೆಚ್ಚಾಗುತ್ತಿದ್ದು, ಅಲ್ಲಿದ್ದವರು ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿರುವುದು ಅಂತರ್ಜಾಲದಲ್ಲಿ ಕಣ್ಣಿಗೆ ರಾಚುತ್ತಿವೆ. ಕೆಲ ಬಾರಿ ಮದುವೆಯಲ್ಲಿ ಕೆಲ ನಡೆ ಅಚ್ಚರಿ ಮೂಡಿಸುತ್ತವೆ. ಏಕೆಂದರೆ ಶುಭ ಕಾರ್ಯದ ಸಂದರ್ಭದಲ್ಲಿ ವಧು-ವರರ ಮಧ್ಯೆ ಜಗಳ ಆಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ನಿರೀಕ್ಷಿಸದವರು ಆಶ್ಚರ್ಯಗೊಳ್ಳುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಸೋಷಿಯಲ್ ಮೀಡಿಯಾ ಬಳಕೆದಾರರೂ ತಲೆತ್ತಗ್ಗಿಸಿದ್ದಾರೆ.

ವರ ತನಿಸಿದ ಸಿಹಿತಿಂಡಿ ಒಲ್ಲೇ ಎಂದ ವಧು
ಇದೀಗ ಹೆಚ್ಚು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧುವಿನ ಕೋಪ ಏಳನೇ ಸ್ವರ್ಗಕ್ಕೆ ತಲುಪಿದೆ. ಮಾಲೆ ಹಾಕಿದ ನಂತರ ವಧು-ವರರು ವೇದಿಕೆ ಮೇಲೆ ನಿಂತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದರ ನಂತರ, ವರನು ಮುಂದಿನ ಆಚರಣೆಯನ್ನು ಪೂರ್ಣಗೊಳಿಸಿ, ವಧುವಿಗೆ ಸಿಹಿತಿಂಡಿಗಳನ್ನು ತಿನ್ನಿಸಲು ತನ್ನ ಕೈಯನ್ನು ಚಾಚುತ್ತಾನೆ, ಆದರೆ ವಧು ತನ್ನ ಕೈಯಿಂದ ಸಿಹಿತಿಂಡಿಗಳನ್ನು ತೆಗೆದುಕೊಂಡು ಅತಿಥಿಗಳ ಕಡೆಗೆ ಜೋರಾಗಿ ಎಸೆಯುತ್ತಾಳೆ. ಇದಾದ ನಂತರ ಅಲ್ಲಿನ ವಾತಾವರಣ ತುಂಬಾ ಹದಗೆಡುತ್ತದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಜನ ಜೋರಾಗಿ ಕೂಗಲಾರಂಭಿಸುತ್ತಾರೆ.

ಕೋಪಗೊಂಡ ವಧು
ವಿಷಯ ಇಲ್ಲಿಗೆ ಮುಗಿಯುವುದಿಲ್ಲ, ಇದಾದ ನಂತರ ವಧುವಿನ ಸರದಿ ಬರುತ್ತದೆ ಮತ್ತು ವರನಿಗೆ ತನ್ನ ಕೈಯಿಂದ ಲೋಟದಲ್ಲಿ ನೀರು ಕುಡಿಸಲು ಅವಳು ಮುಂದಾಗುತ್ತಾಳೆ. ನಂತರ ವರನು ಸಹ ಅಸಮಾಧಾನವನ್ನು ತೋರಿಸುತ್ತಾನೆ ಮತ್ತು ವಧುವಿನ ಕೈಯಲ್ಲಿ ಹಿಡಿದಿದ್ದ ಲೋಟವನ್ನು ತಳ್ಳುತ್ತಾನೆ. ಇದರ ನಂತರ ವಧು ಹೆಚ್ಚು ಕೋಪಗೊಳ್ಳುತ್ತಾಳೆ ಮತ್ತು ಅತಿಥಿಗಳ ಕಡೆಗೆ ಲೋಟವನ್ನು ಎಸೆಯುತ್ತಾಳೆ. ವಧುವಿನ ಇಂತಹ ಕೋಪದ ಸ್ವಭಾವವನ್ನು ನೋಡಿ ಮದುವೆಗೆ ಬಂದವರು ಬೆರಗಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಬಳಕೆದಾರರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಧು ಏಕೆ ಕೋಪಗೊಂಡಳು ಮತ್ತು ಅವಳು ಏಕೆ ಹೀಗೆ ಮಾಡಿದಳು ಎಂದು ತಿಳಿಯಲು ಅನೇಕ ಬಳಕೆದಾರರು ಬಯಸುತ್ತಾರೆ. ಎಷ್ಟೋ ಜನ ವಧುವಿನ ವರ್ತನೆಯನ್ನು ಕಂಡು ಬೆರಗಾಗಿದ್ದಾರೆ. ಆದರೆ, ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಈ ಮದುವೆಯ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ವಧುವಿನ ಕೋಪದ ಈ ವಿಡಿಯೋವನ್ನು ನೀವೂ ನೋಡಿ.
(ಒನ್ಇಂಡಿಯಾ ಸುದ್ದಿ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Live-in Couples: 2027ರ ಜನಗಣತಿ: ಲಿವ್-ಇನ್ ಸಂಬಂಧದಲ್ಲಿರುವವರಿಗೂ ವಿವಾಹಿತ ದಂಪತಿ ಸ್ಥಾನಮಾನ












Click it and Unblock the Notifications