'ವಾಜಪೇಯಿ, ಮೋದಿ ಹಿಮಾಲಯ ಪರ್ವತದಂತೆ, ನಾನೊಂದು ಸಣ್ಣ ಕಲ್ಲು'

Posted By:
Subscribe to Oneindia Kannada
   ಬಿ ಎನ್ ವಿಜಯ್ ಕುಮಾರ್ ಜಯನಗರ ಎಂ ಎಲ್ ಎ ಮೋದಿ ಬಗ್ಗೆ ಹೇಳೋದ್ ಹೀಗೆ | Oneindia Kannada

   ಬೆಂಗಳೂರು, ಡಿಸೆಂಬರ್ 26 : "ವಾಜಪೇಯಿ, ಮೋದಿ ಅವರೆಲ್ಲ ಹಿಮಾಲಯ ಪರ್ವತ ಇದ್ದಹಾಗೆ. ನಾನೊಂದು ಸಣ್ಣ ಕಲ್ಲಿನಂತೆ" ಎಂದರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ವಿಜಯಕುಮಾರ್. ಬಿಜೆಪಿಯಲ್ಲಿ ವಾಜಪೇಯಿ ಹಾಗೂ ಮೋದಿ ಅವರ ಸೇವೆಯಂತೆಯೇ ನಿಮ್ಮ ಪ್ರಯತ್ನವೂ ಸಾಗಿದೆಯೇ ಎಂಬ ಒನ್ಇಂಡಿಯಾ ಕನ್ನಡದ ಪ್ರಶ್ನೆಗೆ ಅವರ ಉತ್ತರವಿದು.

   ಸಿಎಂ ಬಗ್ಗೆ ಬಿಜೆಪಿ ಎಂಎಲ್ಎ ಹೇಳಿದ್ದೇನು: ವಿಜಯ್ ಕುಮಾರ್ ಸಂದರ್ಶನ

   ನನ್ನ ಜೀವ ಇರುವವರೆಗೆ ಸಮಾಜ ಸೇವೆ ಮಾಡುತ್ತೇನೆ. ಜತೆಯಲ್ಲಿ ಇರುವವರನ್ನು ಆ ಕಡೆಗೆ ಪ್ರಯತ್ನ ಮಾಡುವಂತೆ ಪ್ರೇರೇಪಿಸುತ್ತೇನೆ. ಈ ಗುಣ ನಮ್ಮ ಕುಟುಂಬದಿಂದಲೇ ಬಂದಿದೆ ಎಂದರು ಎರಡು ಬಾರಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ವಿಜಯಕುಮಾರ್.

   Vajapayi, Modi are like Himalayan mountain : MLA Vijayakumar

   ಬೆಂಗಳೂರು ಉದ್ಯಾನ ನಗರಿ ಎಂಬ ಮಾತು ಇವತ್ತಿಗೂ ಸತ್ಯವೇ. ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಮೇಲಿಂದ ನಿಂತು ನೋಡಿದರೆ ದಟ್ಟ ಕಾಡಿನಂತೆಯೇ ಕಾಣುತ್ತದೆ. ಇಲ್ಲಿನ ಜನರು ಆ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದಾರೆ. ಆದರೆ ಕೆಲವರು ಉದ್ಯಾನ-ಕೆರೆ ಒತ್ತುವರಿ ಮಾಡುವವರೂ ಇದ್ದಾರೆ ಎಂದರು.

   ಇನ್ನು ಜಯನಗರಕ್ಕೆ ಮೆಟ್ರೋ ಬೇಕು, ಶಾಪಿಂಗ್ ಕಾಂಪ್ಲೆಕ್ಸ್ ಬೇಕು, ಮೇಲ್ಸೇತುವೆ ಬೇಕು. ಇವೆಲ್ಲವೂ ಇಲ್ಲಿನ ಅಗತ್ಯಗಳು. ಇಡೀ ಬೆಂಗಳೂರಿಗೇ ಮೆಟ್ರೋಪಾಲಿಟನ್ ನಗರ ಎಂಬ ಕಿರೀಟ ಇದೆ. ಇದನ್ನು ಬಡಾವಣೆ ಮಟ್ಟಕ್ಕೆ ಇಳಿಸಿ, ಇಂಥ ಬಡಾವಣೆ ಮೆಟ್ರೋಪಾಲಿಟನ್ ಅಂತ ವಿಂಗಡಿಸುವುದಕ್ಕೆ ಆಗಲ್ಲ ಎಂದರು.

   ಅವರ ಮಾತಿನ ಓಘ ಹಾಗೇ ಮುಂದುವರಿದಿತ್ತು. ಇನ್ನಷ್ಟು ಆಸಕ್ತಿಕರ ವಿಚಾರಗಳನ್ನು ಕೇಳಲು- ನೋಡಲು ನಮ್ಮ ಒನ್ಇಂಡಿಯಾ ಕನ್ನಡದಲ್ಲಿನ ಅವರ ವಿಡಿಯೋ ನೋಡಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Vajapayi, Modi are like Himalayan mountain, I am a small stone, says Jayanagar MLA Vijayakumar, when Oneindia Kannada ask question about his service to BJP.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ