ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಹಳ್ಳಿಗಳಲ್ಲಿ ಅಂತರ್ಜಲದಲ್ಲಿ ಯುರೇನಿಯಂ: ಅಧ್ಯಯನ

|
Google Oneindia Kannada News

ಕರ್ನಾಟಕದ 73 ಗ್ರಾಮಗಳಲ್ಲಿ ಅಂತರ್ಜಲದ ರಾಸಾಯನಿಕ ಅಧ್ಯಯನವನ್ನು ಮಾಡಲಾಗಿದ್ದು ಈ ಅಧ್ಯಯನದಲ್ಲಿ ಈ ಗ್ರಾಮಗಳಲ್ಲಿ ಶೇಕಡ 78 ರಷ್ಟು ಯುರೇನಿಯಂ ಸಾಂದ್ರತೆ ಇದೆ. ಅದು ಅಸುರಕ್ಷಿತ ಮಟ್ಟದಲ್ಲಿದೆ ಎಂದು ಹೊಸ ಅಧ್ಯಯನವು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಶಿಫಾರಸ್ಸು ಮಾಡಿರುವ ಗರಿಷ್ಠ ಸುರಕ್ಷತಾ ಮಿತಿ ಪ್ರತಿ ಲೀಟರ್‌ಗೆ 30 ಮೈಕ್ರೋಗ್ರಾಂಗಳು (μg/l), ಆದರೆ ಭಾರತದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯು ಪ್ರತಿ ಲೀಟರ್‌ಗೆ 60 ಮೈಕ್ರೋಗ್ರಾಂಗಳಷ್ಟು ಹೆಚ್ಚಿನ ಸುರಕ್ಷತಾ ಮಿತಿಯನ್ನು ನಿಗದಿಪಡಿಸಿದೆ. ಆದರೆ ಕರ್ನಾಟಕದ 73 ಗ್ರಾಮಗಳಲ್ಲಿ ಶೇಕಡ 78 ರಷ್ಟು ಯುರೇನಿಯಂ ಸಾಂದ್ರತೆ ಇದೆ. ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಕಿರಣಶೀಲತೆಯ ಉನ್ನತ ಸಂಶೋಧನಾ ಕೇಂದ್ರವು ಈ ಅಧ್ಯಯನವನ್ನು ಮಾಡಿದೆ. ಈ ಅಧ್ಯಯನವು ಈ ನೈಸರ್ಗಿಕ ಕಾರಣಗಳಿಂದ ಮಾಲಿನ್ಯಕ್ಕೆ ಕಾರಣವಾಗಿದೆ ಮತ್ತು ಮಾನವಜನ್ಯ ಚಟುವಟಿಕೆಯಿಂದಲ್ಲ ಎಂಬ ಬಗ್ಗೆ ಅಧ್ಯಯನವನ್ನು ಮಾಡಲಾಗಿದೆ.

ಬೆಂಗಳೂರು ಸುದ್ದಿ: ಬಿಬಿಎಂಪಿ ವ್ಯಾಪ್ತಿಗೆ ಐದು ಗ್ರಾಮಗಳ ಸೇರ್ಪಡೆ ಬೆಂಗಳೂರು ಸುದ್ದಿ: ಬಿಬಿಎಂಪಿ ವ್ಯಾಪ್ತಿಗೆ ಐದು ಗ್ರಾಮಗಳ ಸೇರ್ಪಡೆ

ಅಧ್ಯಯನಕ್ಕಾಗಿ, ಸಂಶೋಧಕರು ರಾಜ್ಯದ ಪೂರ್ವ ಭಾಗದ 73 ಹಳ್ಳಿಗಳನ್ನು ಸಮೀಕ್ಷೆ ಮಾಡಿದರು. 57 ಹಳ್ಳಿಗಳು ಪ್ರತಿ ಲೀಟರ್‌ಗೆ 30 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಯುರೇನಿಯಂ ಸಾಂದ್ರತೆಯನ್ನು ಹೊಂದಿದ್ದರೆ ಅವುಗಳಲ್ಲಿ 48 ಪ್ರತಿ ಲೀಟರ್‌ಗೆ 60 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದ್ದವು ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.

ಕರ್ನಾಟಕದ ಹಳ್ಳಿಗಳಲ್ಲಿ ಎಲ್ಲೆಲ್ಲಿ ಯುರೇನಿಯಂ ಹೆಚ್ಚಿದೆ?

ಕರ್ನಾಟಕದ ಹಳ್ಳಿಗಳಲ್ಲಿ ಎಲ್ಲೆಲ್ಲಿ ಯುರೇನಿಯಂ ಹೆಚ್ಚಿದೆ?

ಬೆಂಗಳೂರು ನಗರದಲ್ಲಿರುವ ಎರಡು ಗ್ರಾಮಗಳು (ಗೊಲ್ಲಹಳ್ಳಿ ಮತ್ತು ಗೊಟ್ಟಿಗೆರೆ) ಮತ್ತು ಬೆಂಗಳೂರು ಗ್ರಾಮಾಂತರದ ಎರಡು (ಅವತಿ ಮತ್ತು ಕೊಡಗುರ್ಕಿ) ಇದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ತಲಾ ಒಂದು ಹಳ್ಳಿಯಲ್ಲಿ ಯುರೇನಿಯಂ ಸಾಂದ್ರತೆಯು ಲೀಟರ್‌ಗೆ 1,000 ಮೈಕ್ರೋಗ್ರಾಂಗಳನ್ನು ಮೀರಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೋಲಾರದಲ್ಲಿ ಐದು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಳು ಗ್ರಾಮದಲ್ಲಿ ಯುರೇನಿಯಂ ಸಾಂದ್ರತೆಯು ಲೀಟರ್‌ಗೆ 1,000 ಮೈಕ್ರೋಗ್ರಾಂಗಳನ್ನು ಮೀರಿದೆ.

ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಈ ಯುರೇನಿಯಂ

ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಈ ಯುರೇನಿಯಂ

ಯುರೇನಿಯಂ ಅಧಿಕವಾಗಿ ಇರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ವತಂತ್ರ ತಜ್ಞರಾದ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಮತ್ತು ಡಯಾಬಿಟಾಲಜಿಸ್ಟ್ ಡಾ ಸುಬ್ರತಾ ದಾಸ್ ಮಾತನಾಡುತ್ತಾ, ಜನರು ಅಧಿಕವಾಗಿ ಯುರೇನಿಯಂ ಇರುವ ನೀರನ್ನು ಸೇವನೆ ಮಾಡುವುದು ಪ್ರತಿಕೂಲ ಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದ್ದಾರೆ. "ಇದರಿಂದಾಗಿ ಉಂಟಾಗುವ ತಕ್ಷಣದ ಪರಿಣಾಮವೆಂದರೆ ಮನಸ್ಸಿನ ಮಬ್ಬು, ತಲೆನೋವು, ಕಡಿಮೆ ದರ್ಜೆಯ ಜ್ವರ, ವಾಂತಿ. ದೀರ್ಘಾವಧಿಯ ಆರೋಗ್ಯ ಸಮಸ್ಯೆಯು ಉಂಟಾಗಬಹುದು. ಯಕೃತ್ತು, ಮೂಳೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಉಂಟಾಗಬಹುದು," ಎಂದು ತಿಳಿಸಿದರು. ಇನ್ನು ಈ ನೀರಿನ ಮಾದರಿಯನ್ನು ಪಡೆದ ಯಾವುದೇ ಬೋರ್‌ವೆಲ್‌ಗಳು ಪರಮಾಣು ಅಥವಾ ನಗರ ತ್ಯಾಜ್ಯ ವಿಲೇವಾರಿ ಚಾನಲ್‌ಗಳ ಸಮೀಪ ಇರಲಿಲ್ಲ ಎಂದು ಸಂಶೋಧಕರು ಬರೆದಿದ್ದಾರೆ.

ಯುರೇನಿಯಂ ಹೆಚ್ಚಳಕ್ಕೆ ಕಾರಣವೇನು?

ಯುರೇನಿಯಂ ಹೆಚ್ಚಳಕ್ಕೆ ಕಾರಣವೇನು?

ಇನ್ನು ಯುರೇನಿಯಂ ಹೆಚ್ಚಳಕ್ಕೆ ಕಾರಣವನ್ನು ಕೂಡಾ ಈ ಸಂಶೋಧಕರು ನೀಡಿದ್ದಾರೆ. ಅಂತರ್ಜಲ ಮಟ್ಟ ಮತ್ತು ಕರ್ನಾಟಕದ ಭೌಗೋಳಿಕ ರಚನೆಯ ಕುಸಿತದ ಪರಿಣಾಮವಾಗಿ ಯುರೇನಿಯಂ ಸಾಂದ್ರತೆಯು ಹೆಚ್ಚಾಗಿದೆ ಎಂದು ಸಂಶೋಧಕರು ಒತ್ತಿ ಹೇಳಿದ್ದಾರೆ. ಗಾಮಾ-ರೇ ಸ್ಪೆಕ್ಟ್ರೋಮೆಟ್ರಿಕ್ ಸಮೀಕ್ಷೆಗಳು ಪಶ್ಚಿಮ ಭಾಗಕ್ಕೆ ಹೋಲಿಸಿದರೆ ಕರ್ನಾಟಕದ ಪೂರ್ವ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಯುರೇನಿಯಂ ಮತ್ತು ಥೋರಿಯಂ ಇದೆ ಎಂದು ತೋರಿಸಿದೆ. ಇದನ್ನು ಭೂವಿಜ್ಞಾನಿಗಳು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ಧಾರ್ವಾರ್ ಕ್ರೇಟಾನ್ ಎಂದು ಉಲ್ಲೇಖ ಮಾಡಿದ್ದಾರೆ. "ಕರ್ನಾಟಕವು ಪ್ರಾಚೀನ ಗ್ರಾನೈಟ್‌ಗಳು, ಗ್ನೈಸ್‌ಗಳು ಮತ್ತು ಶಿಸ್ಟೋಸ್ ಬಂಡೆಗಳನ್ನು ಪ್ರಧಾನವಾಗಿ ಹೊಂದಿದೆ," ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ದಿವೇಚಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ ಆರ್ ಶ್ರೀನಿವಾಸನ್ ವಿವರಿಸಿದರು.

ಬೆಂಗಳೂರಿನಲ್ಲಿ ಹೇಗಿದೆ ಯುರೇನಿಯಂ?

ಬೆಂಗಳೂರಿನಲ್ಲಿ ಹೇಗಿದೆ ಯುರೇನಿಯಂ?

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಪ್ರದೇಶಗಳಲ್ಲಿ ಹೆಚ್ಚಿನ ರೇಡಾನ್ ಅಂಶವು ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಪತ್ತೆಯಾಗಿದೆ. ಆವತಿ ಗ್ರಾಮದ ಅಂತರ್ಜಲ ಮಾದರಿಯಲ್ಲಿ ಪ್ರತಿ ಲೀಟರ್‌ಗೆ 174 ರಿಂದ 942 ಮೈಕ್ರೋಗ್ರಾಂಗಳಷ್ಟು ಹೆಚ್ಚಿನ ಯುರೇನಿಯಂ ಕಂಡು ಬಂದಿದೆ. ಕೊಡಗುರ್ಕಿ ಗ್ರಾಮದ ಮಾದರಿಯಲ್ಲಿ 356 μg/l ಯುರೇನಿಯಂ ಪತ್ತೆಯಾಗಿದೆ. ಇದು ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಮಾಡಿದ ಅವಲೋಕನಗಳೊಂದಿಗೆ ತಾಳೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಜಿಲ್ಲೆಯ ಗುಡ್ಲ ಮುದ್ದೇನಹಳ್ಳಿಯ ಅಂತರ್ಜಲ ಮಾದರಿಯಲ್ಲಿ ಡಬ್ಲ್ಯುಎಚ್‌ಒ ನಿಗದಿತ ಮಿತಿಗಿಂತ (56) ಹೆಚ್ಚು ಯುರೇನಿಯಂ ಇದೆ. ಬೆಂಗಳೂರು ನಗರದಲ್ಲಿ, ಗೊಲ್ಲಹಳ್ಳಿ ಗ್ರಾಮದಲ್ಲಿ ಅಂತರ್ಜಲ ಮಾದರಿಯಲ್ಲಿ ಯುರೇನಿಯಂ ಸಾಂದ್ರತೆಯು ವರ್ಷವಿಡೀ ಪ್ರತಿ ಲೀಟರ್‌ಗೆ 9 ರಿಂದ 310 ಮೈಕ್ರೋಗ್ರಾಂಗಳವರೆಗೆ ಬದಲಾಗುತ್ತದೆ.

Recommended Video

ತೆರೆ ಹಿಂದೆ ವಿರಾಟ್ ಮಾಡಿದ್ದನ್ನು ರಿವೀಲ್ ಮಾಡಿದ ಗಂಗೂಲಿ | Oneindia Kannada

English summary
Uranium in groundwater in Karnataka villages Says Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X