Unforgettable 2020: ಕೊರೊನಾ ಸೋಂಕು ತಗುಲಿದ ವಿಶ್ವ ನಾಯಕರ ಪಟ್ಟಿ

ವಾಷಿಂಗ್ಟನ್, ಡಿಸೆಂಬರ್ 18: 2020 ಇಡೀ ವಿಶ್ವವನ್ನೇ ದಂಗುಬಡಿಸಿದ ವರ್ಷವಾಗಿದೆ. ಇಡೀ ವಿಶ್ವದಲ್ಲಿ ಸುಮಾರು 7.5 ಕೋಟಿ ಜನರಲ್ಲಿ ಕೊವಿಡ್ ರೋಗ ಕಂಡುಬಂದಿದೆ.

ಈ ರೋಗವು ವಿಶ್ವದ ದಿಗ್ಗಜ ನಾಯಕರನ್ನೂ ಕೂಡ ಬಿಟ್ಟಿಲ್ಲ. ಯಾವುದೇ ದೇಶದ ಮುಖ್ಯಸ್ಥರು ಕೊರೊನಾಗೆ ಬಲಿಯಾಗದಿದ್ದರೂ, ತಿಂಗಳುಗಟ್ಟಲೇ ಬಳಲಿದ ಉದಾಹರಣೆ ಇದೆ.

ವಿಶ್ವದ ನಾಯಕರೇ ಕೊರೊನಾ ಸೋಂಕುನಿಂದ ಬಳಲುತ್ತಿದ್ದಾರೆ, ನೀವು ಕೂಡ ಜಾಗ್ರತೆಯಿಂದಿರಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ ಮ್ಯಾಕ್ರನ್‌ಗೆ ಕೊರೊನಾ ಸೋಂಕು ತಗುಲಿದೆ. ಮುಂದಿನ ವಾರದವರೆಗೆ ಸೆಲ್ಫ್‌ ಐಸೊಲೇಷನ್‌ನಲ್ಲಿರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮ್ಯಾಕ್ರನ್‌ಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ, ಕೆಲವು ಸೋಂಕಿನ ಲಕ್ಷಣಗಳಿರುವ ಕಾರ್ಯ ಪರೀಕ್ಷೆಗೆ ಒಳಗಾಗಿದ್ದರು.

Unforgettable 2020: List Of World Leaders Who Contracted Coronavirus

ಮ್ಯಾಕ್ರನ್ ರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಏಳು ದಿನಗಳವರೆಗೆ ಸ್ವಯಂ ನಿರ್ಬಂಧದಲ್ಲಿರಲಿದ್ದಾರೆ. ಅವರು ತಮ್ಮ ಕೆಲಸವನ್ನು ಮುಂದುವರೆಸಲಿದ್ದಾರೆ, ದೂರದಿಂದಲೇ ಚಟುವಟಿಕೆಗಳನ್ನು ನಿರ್ವಹಿಸಲಿದ್ದಾರೆ.

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು.ಈ ವಾರದ ಆರಂಭದಲ್ಲಿ ಫ್ರಾನ್ಸ್‌ನಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಿದೆ. ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಸೋಂಕು ಹೆಚ್ಚಳವಾಗಿದೆ.

ವೈರಸ್ ಹರಡುವುದನ್ನು ತಡೆಯಲು ರಾತ್ರಿ 8 ರಿಂದ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ. ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಕೆಫೆಗಳು ಮುಚ್ಚಿವೆ.ಫ್ರಾನ್ಸ್‌ನಲ್ಲಿ 59,300 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬುಧವಾರ ಒಂದೇ ದಿನ 17 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಈ ವರ್ಷ ಕೊರೊನಾ ಸೋಂಕು ತಗುಲಿದೆ ಒಂದು ಡಜನ್ ನಾಯಕರ ಪಟ್ಟಿ ಇಂತಿದೆ.
ಮಾರ್ಚ್ 27-ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ
ಏಪ್ರಿಲ್ 30- ಮಿಖೈಲ್ ಮಿಶುಸ್ಟಿನ್-ರಷ್ಯಾ ಪ್ರಧಾನಿ
ಜೂನ್ 1- ನಿಕೋಲ್ ಪ್ಯಷಿನ್ಯಾನ್- ಅರ್ಮೇನಿಯಾ ಪ್ರಧಾನಿ
ಜೂನ್ 16- ಜುವಾನ್ ಒರ್ಲಾಂಡೊ, ಹೆರ್ನಾಂಡೇಸ್-ಹೊಂಡರಸ್ ಅಧ್ಯಕ್ಷ
ಜುಲೈ 7-ಜೈರ್ ಬೋಲ್ಸೋನಾರೋ, ಬ್ರೆಜಿಲ್ ಅಧ್ಯಕ್ಷ
ಜುಲೈ 09-ಜೀನೈನ್ ಅನೆಜ್-ಬೊಲಿವಿಯಾ ಅಧ್ಯಕ್ಷೆ
ಜುಲೈ 28 ಅಲೆಕ್ಸಾಂಡರ್ ಲುಕಾಶೆಂಕೋ-ಬೆಲರುಸ್ ಅಧ್ಯಕ್ಷ
ಸೆಪ್ಟೆಂಬರ್ 18- ಅಲಿಜಾಂಡ್ರೋ-ಗ್ವಾಟೆಮಾಲ
ಅಕ್ಟೋಬರ್ 2 ಡೊನಾಲ್ಡ್ ಟ್ರಂಪ್-ಅಮೆರಿಕ ಅಧ್ಯಕ್ಷ
ಅಕ್ಟೋಬರ್ 24- ಆಂಡ್ರೆಸೆಜ್ ಡುಡ-ಪೋಲ್ಯಾಂಡ್
ಅಕ್ಟೋಬರ್ 25-ಬೋಯ್ಕೋ ಬೋಡಿಸ್ಸೋವ್-ಬಲ್ಗೇರಿಯಾ
ಡಿಸೆಂಬರ್ 17-ಇಮ್ಯಾನ್ಯುಯೆಲ್ ಮ್ಯಾಕ್ರನ್-ಫ್ರಾನ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+