Unforgettable 2020: ಜಗತ್ತು ಕಂಡ 5 ವಿಚಿತ್ರ ಘಟನೆಗಳು
ಈ ವರ್ಷ ಆದಷ್ಟು ಬೇಗ ಕಳೆದುಹೋಗಲಿ ಎಂದು ಬಯಸಿದವರೇ ಹೆಚ್ಚು. 2020 ಇಡೀ ಜಗತ್ತಿನ ಜನರನ್ನು ಸಂಕಷ್ಟಕ್ಕೆ ನೂಕಿದ ಬಗೆ ಸಾಮಾನ್ಯವಲ್ಲ. ಇಂತಹದ್ದೊಂದು ಸವಾಲು, ಸಂಕಷ್ಟ ಕಾಡಲಿದೆ ಎಂಬ ಸೂಚನೆ 2019ರ ಅಂತ್ಯದಲ್ಲಿಯೇ ಸಿಕ್ಕರೂ, ಅದರ ಪರಿಣಾಮವನ್ನು ಯಾರೂ ಊಹಿಸಿರಲಿಲ್ಲ.
ಪ್ರತಿ ಬಾರಿ ಪ್ರವಾಹ, ಭೂಕಂಪನದಂತಹ ಪ್ರಾಕೃತಿಕ ಅವಘಡಗಳು, ಭಯೋತ್ಪಾದನಾ ದಾಳಿಗಳು ಸೇರಿದಂತೆ ಅನೇಕ ಅನಾಹುತಗಳು ಸರ್ವೇ ಸಾಮಾನ್ಯವಾಗಿದ್ದವು. ಅವುಗಳ ಪರಿಣಾಮ ತೀವ್ರವಾಗಿರುತ್ತಿದ್ದವೂ. 2020 ಕೂಡ ಅದರಿಂದ ಹೊರತಾಗಲಿಲ್ಲ. ಆದರೆ ಪ್ರಾಕೃತಿಕ ಅವಘಡಗಳು, ಅಪರಾಧಗಳು ಕೂಡ ಏನೂ ಅಲ್ಲ ಎಂಬಂತೆ ಜಗತ್ತನ್ನು ಅಲುಗಾಡಿಸಿದ್ದು ಕೊರೊನಾ ವೈರಸ್ ಎಂಬ ಕಣ್ಣಿಗೆ ಕಾಣದ ಸೋಂಕು.
2020 ಒಂದು ರೀತಿ ವಿಚಿತ್ರ ವರ್ಷ. ಈ ವರ್ಷದಲ್ಲಿ ಬಹುಪಾಲು ದಿನಗಳನ್ನು ಜನರು ಮನೆಯ ಒಳಗೇ ಕಳೆಯುವಂತಾಯಿತು. ಅದಕ್ಕೆ ಕೊರೊನಾ ವೈರಸ್ ಮಾತ್ರ ಕಾರಣವಲ್ಲ. ಅದರಾಚೆಗೂ ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ.

ಕೋವಿಡ್ ಹಿಡಿತದಲ್ಲಿ ಜಗತ್ತು
ಜಗತ್ತನ್ನು 2020ರಲ್ಲಿ ಅತಿಯಾಗಿ ಕಂಗೆಡಿಸಿದ್ದು ಕೊರೊನಾ ವೈರಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೋಟ್ಯಂತರ ಜನರು ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದರೆ, ಲಕ್ಷಾಂತರ ಮಂದಿ ಜೀವವನ್ನೇ ಕಳೆದುಕೊಂಡರು. ಇದುವರೆಗೆ ಅನೇಕ ವೈರಸ್‌ಗಳು ಕೆಲವು ದೇಶ, ಖಂಡಗಳಿಗೆ ವ್ಯಾಪಿಸಿ ಕಣ್ಮರೆಯಾಗುತ್ತಿದ್ದರೆ, ಕೊರೊನಾ ವೈರಸ್ ಇಡೀ ಜಗತ್ತನ್ನು ಸುತ್ತಾಡಿತು. ಇದೇ ಮೊದಲ ಬಾರಿಗೆ ಇಡೀ ಜಗತ್ತು ಅಕ್ಷರಶಃ ಸ್ತಬ್ಧವಾಯಿತು. ಶಾಲೆಗಳು, ಕಾಲೇಜುಗಳು, ಕಚೇರಿಗಳು ಮುಚ್ಚುವಂತಾಯಿತು. ಹೀಗಾಗಿ ಜನರು ಈ ವರ್ಷ ಬೇಗ ಕಳೆದುಹೋಗಲಿ ಎಂದು ಕಾದಿದ್ದರು. ಈಗ ಕೊನೆಗೂ ವರ್ಷ ಮುಗಿಯುತ್ತಾ ಬಂದಿದೆ. ಆದರೆ 2021 ಹೇಗಿರಲಿದೆ?

ಕಿಮ್ ಜಾಂಗ್ ಉನ್ ಸಾವು
ಜಗತ್ತನ್ನು ತನ್ನೆಡೆಗೆ ಸದಾ ತಿರುಗಿಸಿಕೊಳ್ಳುವ ದೇಶಗಳಲ್ಲಿ ಉತ್ತರ ಕೊರಿಯಾ ಒಂದು. ಆದರೆ ಅದು ಒಳ್ಳೆಯ ಕಾರಣಕ್ಕಾಗಿ ಅಲ್ಲ. ಯಾವಾಗ ಭೂಮಿಗೆ ಬೆದರಿಕೆ ಒಡ್ಡುವ ಕೆಲಸವನ್ನು ಉತ್ತರ ಕೊರಿಯಾ ಮಾಡುತ್ತದೆಯೋ ಹೇಳುವ ಹಾಗಿಲ್ಲ. ಕೊರೊನಾ ವೈರಸ್ ಕಾರಣದಿಂದ ಉತ್ತರ ಕೊರಿಯಾ ಕೊಂಚ ಸುದ್ದಿಯಾಯಿತು. ಬಳಿಕ ಸದ್ದು ಮಾಡಿದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಸಾವಿನೊಂದಿಗೆ! ಕಿಮ್ ಸಾವಿನ ಸುತ್ತಲೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯಿತು. ಆತನ ತಂಗಿ ಕಿಮ್ ಯೋ ಜಾಂಗ್ ಇನ್ನೇನು ಅಧಿಕಾರಕ್ಕೆ ಏರಲಿದ್ದಾರೆ ಎಂಬುದೂ ಸುದ್ದಿಯಾಯ್ತು. ಬಳಿಕ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಂಡ ಫೋಟೊವೊಂದು ಉತ್ತರ ಹೇಳಿತು. ದೇಶವೊಂದರ ನಾಯಕ ಬದುಕಿದ್ದಾನೋ ಸತ್ತಿದ್ದಾನೋ ಎನ್ನುವುದು ಹೊರಜಗತ್ತಿಗೆ ಸ್ಪಷ್ಟವಾಗದ, ಅಲ್ಲಿನ ಸಂಗತಿಗಳ ಬಗ್ಗೆ ಅನುಮಾನ, ಕುತೂಹಲಗಳು ಕೊನೆಗೆ ಪ್ರಶ್ನೆಯಾಗಿಯೇ ಉಳಿಯುವಂತಹ ದೇಶ ವಿಚಿತ್ರವಾದರೂ ಸತ್ಯ,

ಗಡಿ ತಪ್ಪಿ ಸಾಗಿದ ಪೊಲ್ಯಾಂಡ್
ಜೆಕ್ ರಿಪಬ್ಲಿಕ್ ಮತ್ತು ಪೊಲ್ಯಾಂಡ್ ನಡುವಿನ ಗಡಿ ಭಾಗದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದ ಪೊಲ್ಯಾಂಡ್ ಕಾವಲುಪಡೆಯು ಜೆಕ್ ರಿಪಬ್ಲಿಕ್ ಭಾಗದೊಳಗೆ ಪ್ರವೇಶಿಸಿದ್ದು ಗೊಂದಲದ ವಾತಾವರಣ ನಿರ್ಮಿಸಿತ್ತು. ಜೆಕ್ ಮೇಲೆ ಪೊಲ್ಯಾಂಡ್ ದಾಳಿ ನಡೆಸುತ್ತಿದೆ ಎಂಬ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಪ್ರದೇಶವೊಂದಕ್ಕೆ ಜೆಕ್ ನಾಗರಿಕರು ಪ್ರವೇಶಿಸದಂತೆ ಪೊಲ್ಯಾಂಡ್ ಸೇನೆ ತಡೆದಿತ್ತು. ಕೊನೆಗೆ ತಾನು ಜೆಕ್ ನೆಲದಲ್ಲಿ ಇರುವುದು ಅದಕ್ಕೆ ಅರಿವಾಯ್ತು. ತಪ್ಪು ತಿಳಿವಳಿಕೆಯಿಂದ ಈ ಪ್ರಮಾದ ನಡೆಯಿತು ಎಂದು ಪೊಲ್ಯಾಂಡ್ ಸ್ಪಷ್ಟೀಕರಣ ನೀಡಿತು.

ವಿಸ್ಮಯಕಾರಿ ವಸ್ತುಗಳ ಹಾರಾಟ
ಆಕಾಶ ಎಂದಿಗೂ ವಿಸ್ಮಯಕಾರಿ. ಭೂಮಿಯಾಚೆಗಿನ ಬ್ರಹ್ಮಾಂಡದ ಕುರಿತು ಅನೇಕ ಕಲ್ಪನೆಗಳಿವೆ. ಅದಕ್ಕೆ ಅನುಗುಣವಾಗಿ ವಿಜ್ಞಾನ ಕೂಡ ಸತತ ಸಂಶೋಧನೆಗಳನ್ನು ನಡೆಸುತ್ತಿದೆ. ಈ ನಡುವೆ ಅಮೆರಿಕದ ಪೆಂಟಗನ್‌ನಲ್ಲಿ ಅವರ್ಣನೀಯ ವೈಮಾನಿಕ ವಿದ್ಯಮಾನಗಳು ಜರುಗಿದ್ದಾಗಿ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಲಾಯಿತು. ಜನರ ಕಣ್ಣಿಗೆ ಕಾಣುವಂತೆ ಗುರುತು ಸಿಗದ ವಸ್ತುಗಳು ಹಾರಾಟ ನಡೆಸುತ್ತಿರುವುದು (ಯುಎಫ್‌ಒ) ವಿಡಿಯೋದಲ್ಲಿ ಸೆರೆಯಾಗಿತ್ತು. ಇಸ್ರೇಲ್‌ನ ಬಾಹ್ಯಾಕಾಶ ಸಂಸ್ಥೆಯ ಮಾಜಿ ಮುಖ್ಯಸ್ಥರು ಅನ್ಯಗ್ರಹ ಜೀವಿಗಳು ಅಮೆರಿಕದ ಜತೆಗೆ ಸಂಪರ್ಕದಲ್ಲಿವೆ. ಅವು ಭೂಮಿ ಜತೆ ಸಂಪರ್ಕ ಪಡೆದುಕೊಂಡಿವೆ ಎಂದು ಹೇಳಿಕೆ ನೀಡಿದ್ದು ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.
Recommended Video

ಭೀತಿ ಮೂಡಿಸಿದ ಮಿಡತೆ ದಾಳಿ
ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಜನರ ಎದೆನಡುಗಿಸಿದ್ದು ಮಿಡತೆಗಳು. ಮುಖ್ಯವಾಗಿ ಕೋವಿಡ್ ತೀವ್ರವಾಗುತ್ತಿದ್ದ ಜುಲೈ ತಿಂಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಕೃಷಿ ಭೂಮಿಗೆ ಕೋಟ್ಯಂತರ ಮಿಡತೆಗಳು ದಾಳಿ ನಡೆಸಿದ್ದು ಭೀತಿ ಮೂಡಿಸಿತ್ತು. ಇಷ್ಟು ಮಿಡತೆಗಳು ಸೃಷ್ಟಿಯಾಗಿದ್ದು, ಅವು ಹೀಗೆ ಗುಂಪುಗಳಲ್ಲಿ ದಾಳಿ ನಡೆಸಿದ್ದು ವಿಚಿತ್ರ ಎನಿಸಿತ್ತು. ಇದೇ ರೀತಿಯ ಮಿಡತೆ ದಾಳಿ ಪೂರ್ವ ಆಫ್ರಿಕಾದಲ್ಲಿಯೂ ನಡೆದಿತ್ತು. ಇದು ಇಡೀ ಭಾರತಕ್ಕೆ ವ್ಯಾಪಿಸಲಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಅದೃಷ್ಟವಶಾತ್ ಮಿಡತೆಗಳು ನಿಯಂತ್ರಣಕ್ಕೆ ಬಂದವು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications