ಉಕ್ರೇನ್ ಅಧ್ಯಕ್ಷ ಪಾತ್ರ ನಿರ್ವಹಿಸಿದ್ದಾತ ಈಗ ಉಕ್ರೇನ್ ಅಧ್ಯಕ್ಷ: ವೊಲೊಡಿಮಿರ್ ಝೆಲೆನ್ಸ್ಕಿ ಯಾರು?
ಕೀವ್, ಫೆಬ್ರವರಿ 27: ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿ 24 ರಂದು ಸಮರ ಸಾರಿದ್ದು ಸದ್ಯ ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶ ಮತ್ತು ನಾಗರಿಕರ ಪರವಾಗಿ ನಿರ್ಭಯವಾಗಿ ನಿಂತಿರುವ ಹೀರೋ ಆಗಿದ್ದಾರೆ.
44 ವರ್ಷದ ಝೆಲೆನ್ಸ್ಕಿ ಪ್ರಸ್ತುತ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಎದುರಿಸಲು ಇತರ ದೇಶಗಳಿಂದ ಸಹಾಯವನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇನ್ನು ವೊಲೊಡಿಮಿರ್ ಝೆಲೆನ್ಸ್ಕಿ ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನವೇ ಜನಪ್ರಿಯ ವ್ಯಕ್ತಿ ಆಗಿದ್ದರು. ಅವರು ಮೊದಲು ಹಾಸ್ಯನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭ ಮಾಡಿದ್ದರು. ಬಳಿಕ ರಾಜಕಾರಣಕ್ಕೆ ಧುಮುಕಿದರು.
ಇಂಟರ್ನೆಟ್‌ನಲ್ಲಿ ಅನೇಕರು ಪುಟಿನ್ ಮತ್ತು ಅವರ ಸೈನ್ಯದ ವಿರುದ್ಧ ನಿಲ್ಲುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ದೇಶಭಕ್ತಿ ಮತ್ತು ಧೈರ್ಯದಿಂದ ಪ್ರಭಾವಿತರಾಗಿದ್ದರೆ, ಇತರರು ಉಕ್ರೇನ್‌ನ ಅಧ್ಯಕ್ಷರಾಗಿ ಅವರ ಸಾಮರ್ಥ್ಯಗಳನ್ನು ಪ್ರಶ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೆ ಎಂಬುವುದು ಹಲವರ ಪ್ರಶ್ನೆಯಾಗಿದೆ. ಹಾಗಾದರೆ ವೊಲೊಡಿಮಿರ್ ಝೆಲೆನ್ಸ್ಕಿ ಯಾರು? ಎಂಬುವುದನ್ನು ತಿಳಿಯೋಣ ಮುಂದೆ ಓದಿ...

ಝೆಲೆನ್ಸ್ಕಿ ಬಾಲ್ಯ ಜೀವನ
ಕೇಂದ್ರ ನಗರವಾದ ಕ್ರಿವಿ ರಿಹ್(Kryvyi Rih)ನಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದ ವೊಲೊಡಿಮಿರ್ ಝೆಲೆನ್ಸ್ಕಿ ಕೀವ್ ರಾಷ್ಟ್ರೀಯ ಆರ್ಥಿಕ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ. ಆದರೆ ಆ ಕ್ಷೇತ್ರದಲ್ಲೇ ವೊಲೊಡಿಮಿರ್ ಝೆಲೆನ್ಸ್ಕಿ ಮುಂದುವರಿದಿಲ್ಲ. ಬಳಿಕ ಹಾಸ್ಯನಟನಾಗಿ ಹೊರಹೊಮ್ಮಿದರು. ವೊಲೊಡಿಮಿರ್ ಝೆಲೆನ್ಸ್ಕಿ ಯುವ ಕಲಾವಿದನಾಗಿ ಅನೇಕ ಸ್ಪರ್ಧಾತ್ಮಕ ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ನಂತರ 2003 ರಲ್ಲಿ ಟಿವಿ ಪ್ರೊಡಕ್ಷನ್ ಕಂಪನಿಯನ್ನು ಸಹ-ಸ್ಥಾಪಿಸಿದರು. ಇದಕ್ಕೆ ರ್ಟಲ್ 95 ಎಂದು ಹೆಸರಿಟ್ಟರು. ಇದು ಅವರ ಹಾಸ್ಯ ತಂಡದ ಹೆಸರೂ ಆಗಿತ್ತು.

ಟಿವಿ ಕಾರ್ಯಕ್ರಮದಲ್ಲಿ ಉಕ್ರೇನ್ ಅಧ್ಯಕ್ಷ ಪಾತ್ರ ನಿರ್ವಹಿಸಿದ್ದ ಝೆಲೆನ್ಸ್ಕಿ!
ಕಂಪನಿಯು ಲವ್ ಇನ್ ಬಿಗ್ ಸಿಟಿ (2009) ಮತ್ತು ರ್ಜೆವ್ಸ್ಕಿ ವರ್ಸಸ್ ನೆಪೋಲಿಯನ್ (2012) ನಂತಹ ಚಲನಚಿತ್ರಗಳು, ಕಾರ್ಟೂನ್‌ಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿದೆ. ಆದರೆ ವೊಲೊಡಿಮಿರ್ ಝೆಲೆನ್ಸ್ಕಿ ವೃತ್ತಿಜೀವನಕ್ಕೆ ಒಂದು ಮಹತ್ವದ ತಿರುವು ಏನೆಂದರೆ, ಅವರು 'ಸರ್ವೆಂಟ್ ಆಫ್ ದಿ ಪೀಪಲ್' ನಲ್ಲಿ ಕಾಣಿಸಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರ ಪಾತ್ರವನ್ನು ನಿರ್ವಹಣೆ ಮಾಡಿದರು. ಹಾಗೆಯೇ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದರು.

2019 ರಲ್ಲಿ ಚುನಾವಣೆಯಲ್ಲಿ ರೋಚಕ ಗೆಲುವು
ತಿಂಗಳ ಪ್ರತಿಭಟನೆಗಳ ನಂತರ ಉಕ್ರೇನ್ ಪರವಾದ ರಷ್ಯಾದ ಅಧ್ಯಕ್ಷರಾದ ವಿಕ್ಟರ್ ಯಾನುಕೋವಿಚ್ ಅವರನ್ನು ಪದಚ್ಯುತಗೊಳಿಸಿದ ನಿಖರವಾಗಿ ಒಂದು ವರ್ಷದ ನಂತರ 'ಸರ್ವೆಂಟ್ ಆಫ್ ದಿ ಪೀಪಲ್' ಪ್ರಸಾರವಾಯಿತು. ಈ ಸರಣಿಯು 2015 ರಿಂದ 2019 ರವರೆಗೆ ಪ್ರಸಾರವಾಯಿತು. ಅಪಾರ ಜನಪ್ರಿಯತೆಯನ್ನು ಗಳಿಸಿತು. 2019 ರಲ್ಲಿ, ಆ ಸಮಯದಲ್ಲಿ ಅಧ್ಯಕ್ಷರಾಗಿದ್ದ ಮತ್ತು ಉದ್ಯಮಿಯಾಗಿದ್ದ ಪೆಟ್ರೋ ಪೊರೊಶೆಂಕೊ ಎದುರು ಉಕ್ರೇನ್ ಅಧ್ಯಕ್ಷೀಯ ಚುನಾವಣೆಗೆ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪರ್ಧಿಸುವುದಾಗಿ ಘೋಷಿಸಿದರು. ಆಶ್ಚರ್ಯವೆಂಬಂತೆ ಎರಡನೇ ಸುತ್ತಿನಲ್ಲಿ 73.2 ಶೇಕಡಾ ಮತಗಳಿಂದ ಚುನಾವಣೆಯಲ್ಲಿ ಗೆದ್ದರು. ಪೊರೊಶೆಂಕೊ ಅವರನ್ನು ಸೋಲಿಸಿದರು. ಜನಸಾಮಾನ್ಯರಲ್ಲಿ ಜನಪ್ರಿಯರಾಗಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಭ್ರಷ್ಟಾಚಾರ ವಿರೋಧಿ ವ್ಯಕ್ತಿಯಾಗಿ ತಮ್ಮನ್ನು ತಾವು ಬಿಂಬಿಸಿದ್ದರು.

ಝೆಲೆನ್ಸ್ಕಿ ಮಾಡಿದ ಕಾರ್ಯಗಳು
ವೊಲೊಡಿಮಿರ್ ಝೆಲೆನ್ಸ್ಕಿ ಅಧ್ಯಕ್ಷರಾದ ಬಳಿಕ ಉಕ್ರೇನ್‌ನ ಸಂಸತ್ತಿನ ವರ್ಕೋವ್‌ನ ರಾಡಾದ ಸದಸ್ಯರಿಗೆ ಕಾನೂನು ವಿನಾಯಿತಿಯನ್ನು ತೆಗೆದುಹಾಕುವುದು, ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ನಂತರದ ಆರ್ಥಿಕ ಹಿಂಜರಿತ ಸಂದರ್ಭದಲ್ಲಿ ನಿಭಾಯಿಸುವುದು, ಭ್ರಷ್ಟಾಚಾರವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಉಕ್ರೇನ್ ಅಧ್ಯಕ್ಷರ ಪಾತ್ರವನ್ನು ವಹಿಸಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಸ್ತುತ ರಷ್ಯಾದ ದಾಳಿಯನ್ನು ಉಕ್ರೇನ್‌ನ ಅಧ್ಯಕ್ಷ ಸ್ಥಾನದಲ್ಲಿ ನಿಂತು ಎದುರಿಸುತ್ತಿದ್ದಾರೆ. ಹಾಗೆಯೇ ದೇಶದ ಜನರಿಗೆ ಭರವಸೆಯನ್ನು ಕೂಡಾ ನೀಡುತ್ತಿದ್ದಾರೆ. (ಒನ್‌ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications