ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಾಂತ್ ಕಿಶೋರ್ ಪರ ವಹಿಸಿದ ಇಬ್ಬರು ಮುಖ್ಯಮಂತ್ರಿಗಳು

|
Google Oneindia Kannada News

ನವದೆಹಲಿ, ಏ. 21: ಪ್ರಶಾಂತ್ ಕಿಶೋರ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ? ಸೇರಿಸಿಕೊಂಡರೆ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬಿತ್ಯಾದಿ ವಿಚಾರಗಳನ್ನ ನಿನ್ನೆ ಕಾಂಗ್ರೆಸ್ ಸಮಿತಿಯೊಂದು ಗಹನವಾಗಿ ಚರ್ಚಿಸಿತು. ಈ ವೇಳೆ ಪ್ರಶಾಂತ್ ಕಿಶೋರ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋತ್ ಮತ್ತು ಛತ್ತೀಸ್‌ಗಡ್ ಸಿಎಂ ಬಾಘೆಲ್ ಅವರು ಬೆಂಬಲ ನೀಡಿದ್ದಾರೆನ್ನಲಾಗಿದೆ.

ಕಳೆದ ಒಂದು ದಶಕದಿಂದಲೂ ಚುನಾವಣಾ ರಣತಂತ್ರಗಳ ಮಾಸ್ಟರ್ ಮೈಂಡ್ ಎನಿಸಿರುವ ಪ್ರಶಾಂತ್ ಕಿಶೋರ್ ವಿವಿಧ ಪಕ್ಷಗಳೊಂದಿಗೆ ಕೆಲಸ ಮಾಡಿ ಯಶಸ್ಸು ಗಳಿಸಿದ್ದಾರೆ. 2014ರಲ್ಲಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ಪ್ರಶಾಂತ್ ಕಿಶೋರ್ ಶಕ್ತಿ ಇತ್ತು. ಹಾಗೆಯೇ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಲ್ಲಿ ಪ್ರಶಾಂತ್ ಕಿಶೋರ್ ಅವರ ಚುನಾವಣಾ ರಣತಂತ್ರಗಳು ವರ್ಕೌಟ್ ಆಗಿವೆ. ಈಗ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರಾದ್ಯಂತ ಪುನಶ್ಚೇತನಗೊಳಿಸುವ ಸಂಕಲ್ಪದಲ್ಲಿ ಅವರಿದ್ದಾರೆ.

ಮೂರು ದಿನದಲ್ಲಿ 2ನೇ ಬಾರಿ ಸೋನಿಯಾ ಗಾಂಧಿಯನ್ನು ಭೇಟಿಯಾದ ಚಾಣಕ್ಯ!ಮೂರು ದಿನದಲ್ಲಿ 2ನೇ ಬಾರಿ ಸೋನಿಯಾ ಗಾಂಧಿಯನ್ನು ಭೇಟಿಯಾದ ಚಾಣಕ್ಯ!

ರಾಹುಲ್ ಗಾಂಧಿ ಹೊರತುಪಡಿಸಿ ಕಳೆದ ಕೆಲ ದಿನಗಳಿಂದ ಅವರು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮೊದಲಾದವರನ್ನ ಭೇಟಿ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರುವ ಉತ್ಸಾಹ ತೋರಿದ್ದಾರೆ. ಹಾಗಯೇ ಕಾಂಗ್ರೆಸ್ ಪುನಶ್ಚೇತನನ್ನ ಒಂದು ಪಕ್ಕಾ ಯೋಜನೆ ರೂಪಿಸಿ ಅದರ ವರದಿಯನ್ನೂ ನೀಡಿದ್ದಾರೆ. ಪ್ರಶಾಂತ್ ಕಿಶೋರ್ ಸಲ್ಲಿಸಿರುವ ಈ ಮಾಸ್ಟರ್ ಪ್ಲಾನ್ ವರದಿ ಬಗ್ಗೆ ಅವಲೋಕನ ನಡೆಸಿ ವಿಶ್ಲೇಷಣೆ ಮಾಡುವಂತೆ ಕಾಂಗ್ರೆಸ್ ಪಕ್ಷ ಒಂದು ಸಮಿತಿಯನ್ನೂ ರಚಿಸಿದೆ. ಸದ್ಯದಲ್ಲೇ ಈ ಸಮಿತಿಯು ಪ್ರಶಾಂತ್ ಕಿಶೋರ್ ಅವರನ್ನ ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.

 ಪ್ರಶಾಂತ್ ಕಿಶೋರ್ ಅವರೇ ಸ್ವತಃ ಒಂದು 'ಬ್ರ್ಯಾಂಡ್'

ಪ್ರಶಾಂತ್ ಕಿಶೋರ್ ಅವರೇ ಸ್ವತಃ ಒಂದು 'ಬ್ರ್ಯಾಂಡ್'

"ಕಿಶೋರ್ ಅವರ ವಿಚಾರಗಳನ್ನ ಪರಿಶೀಲಿಸುತ್ತಿರುವ ಸಮಿತಿಗೆ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಬೇಕಿದೆ. ಮುಂದಿನ ಎರಡು ದಿನಗಳಲ್ಲಿ ಭೇಟಿಯಾಗುವಂತೆ ಅವರನ್ನ ಕೇಳಲಾಗಿದೆ. ಅವರನ್ನ ಪಕ್ಷಕ್ಕೆ ನೇರವಾಗಿ ಸೇರುವಂತೆ ಕೇಳುವುದೋ ಅಥವಾ ಕನ್ಸಲ್ಟೆಂಟ್ ಆಗಿ ಮಾತ್ರ ಪಕ್ಷದಲ್ಲಿ ಇಟ್ಟುಕೊಳ್ಳಬೇಕೋ ಎಂಬುದು ಇನ್ನೂ ಗೊಂದಲದಲ್ಲಿದೆ. ಈ ಬಗ್ಗೆ ಒಂದು ಸ್ಪಷ್ಟತೆಗೆ ಬರಲಿದ್ದೇವೆ. ಕಾಂಗ್ರೆಸ್ ಅಧ್ಯಕ್ಷರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರೆಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇವೇ ವಿಚಾರದ ಬಗ್ಗೆ ಚರ್ಚಿಸಲು ಅಶೋಕ್ ಗೆಹ್ಲೋಟ್ ಮತ್ತು ಬಘೆಲ್ ಅವರನ್ನೂ ಆಹ್ವಾನಿಸಲಾಗಿತ್ತು. ಪ್ರಶಾಂತ್ ಕಿಶೋರ್ ಅವರೇ ಸ್ವತಃ ಒಂದು 'ಬ್ರ್ಯಾಂಡ್' ಆಗಿದ್ದಾರೆ. ಚುನಾವಣೆ ರಣತಂತ್ರದಲ್ಲಿ ಅವರು ಹಲವು ಪಕ್ಷಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರನ್ನ ಪಕ್ಷಕ್ಕೆ ಸೇರಿಸಿಕೊಂಡರೆ ಅನುಕೂಲ ಆಗುತ್ತದೆ ಎಂಬುದು ಈ ಇಬ್ಬರು ಮುಖ್ಯಮಂತ್ರಿಗಳ ಅನಿಸಿಕೆ.

 ನರೇಶ್‌ ಪಟೇಲ್‌, ಪ್ರಶಾಂತ್‌ ಕಿಶೋರ್‌: ಗುಜರಾತ್‌ ಚುನಾವಣೆಗೆ ಕಾಂಗ್ರೆಸ್‌ ತಂತ್ರ ನರೇಶ್‌ ಪಟೇಲ್‌, ಪ್ರಶಾಂತ್‌ ಕಿಶೋರ್‌: ಗುಜರಾತ್‌ ಚುನಾವಣೆಗೆ ಕಾಂಗ್ರೆಸ್‌ ತಂತ್ರ

 ಕಾಂಗ್ರೆಸ್ ಸೇರ್ಪಡೆಗೆ ಬಹಳ ಗಂಭೀರ ಪ್ರಯತ್ನ

ಕಾಂಗ್ರೆಸ್ ಸೇರ್ಪಡೆಗೆ ಬಹಳ ಗಂಭೀರ ಪ್ರಯತ್ನ

ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುವ ಆಸಕ್ತಿ ತೋರುತ್ತಿರುವುದು ಇದೇ ಮೊದಲಲ್ಲ. ಬಹಳ ಹಿಂದೆಯೇ ಅವರು ಕಾಂಗ್ರೆಸ್ ಸೇರಬೇಕಿತ್ತು. ಆದರೆ, ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಪ್ರಶಾಂತ್ ಟೀಕೆ ಮಾಡಿದ್ದು ಮುಳುವಾಗಿತ್ತು. ಪ್ರಶಾಂತ್ ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ರಾಹುಲ್ ಗಾಂಧಿ ಆಸಕ್ತಿ ತೋರಿರಲಿಲ್ಲ. ಈಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೆ ಬಹಳ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ಒಂದು ದಶಕದಿಂದ ಸಾಲುಸಾಲಾಗಿ ಬಹುತೇಕ ಚುನಾವಣೆಗಳಲ್ಲಿ ಸೋಲುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಚೇತರಿಕೆಯ ಹಾದಿ ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಪ್ರಶಾಂತ್ ಕಿಶೋರ್ ಅವರ ಸಹಾಯವನ್ನು ಕಾಂಗ್ರೆಸ್ ಯಾಚಿಸಿತ್ತು. ಕಿಶೋರ್ ಅವರು ಈಗಾಗಲೇ ಕಾಂಗ್ರೆಸ್ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬ್ಲೂಪ್ರಿಂಟ್ ಸಲ್ಲಿಸಿದ್ದಾರೆ. ಹಾಗೆಯೇ ತಾನೇ ಸ್ವತಃ ಕಾಂಗ್ರೆಸ್ ಸೇರುವುದಾಗಿಯೂ ಇಚ್ಛೆ ತೋಡಿಕೊಂಡಿದ್ದಾರೆ.

ಈಗ ಪ್ರಶಾಂತ್ ಕಿಶೋರ್ ಅವರು ಸಲ್ಲಿಸಿರುವ ಪ್ರಸ್ತಾವನೆಗಳನ್ನ ಪರಿಶೀಲಿಸುತ್ತಿರುವ ಸಮಿತಿ ಒಂದಷ್ಟು ಚರ್ಚೆ, ಮಾತುಕತೆ ನಡೆಸಿದ ಬಳಿಕ ಒಂದು ವಾರದಲ್ಲಿ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಲಿದೆ. ಅದರ ಆಧಾರದ ಮೇಲೆ ಸೋನಿಯಾ ಗಾಂಧಿ ಅವರು ಪ್ರಶಾಂತ್ ಕಿಶೋರ್ ಹಣೆಬರಹ ನಿರ್ಧರಿಸಲಿದ್ದಾರೆ.

 2024ರ ಚುನಾವಣೆಯಲ್ಲಿ ಪಕ್ಷದ ಗೆಲುವು ಹೇಗೆ ಸಾಧ್ಯ

2024ರ ಚುನಾವಣೆಯಲ್ಲಿ ಪಕ್ಷದ ಗೆಲುವು ಹೇಗೆ ಸಾಧ್ಯ

ಕಾಂಗ್ರೆಸ್ ಸಾಯಬಾರದು ಎಂದ ಪ್ರಶಾಂತ್ ಕಿಶೋರ್: "1984ರಿಂದಲೂ ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣ ಕಡಿಮೆ ಆಗುತ್ತಾ ಬಂದಿದೆ. ಈಗ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಉಳಿದಿದೆ. ಕಾಂಗ್ರೆಸ್ ಪಕ್ಷವನ್ನು ಹೀಗೆ ಸಾಯಲು ಬಿಡಲು ಆಗುವುದಿಲ್ಲ. ಈ ದೇಶ ಇರುವವರೆಗೂ ಕಾಂಗ್ರೆಸ್ ಇರಬೇಕು" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ದೌರ್ಬಲ್ಯ ಮತ್ತು ಶಕ್ತಿಯನ್ನ ಇಟ್ಟುಕೊಂಡು ಪ್ರಶಾಂತ್ ಕಿಶೋರ್ ಅವರು 2024ರ ಚುನಾವಣೆಯಲ್ಲಿ ಪಕ್ಷದ ಗೆಲುವು ಹೇಗೆ ಸಾಧ್ಯ ಎಂದು ರಣತಂತ್ರ ರೂಪಿಸಿದ್ದಾರೆ.

ಮಹಿಳೆಯರು, ಯುವಸಮುದಾಯ, ಸಣ್ಣ ಉದ್ಯಮಿಗಳು, ರೈತರು ಮೊದಲಾದವರ ಬಗ್ಗೆ ಪಕ್ಷದ ಧರಣೆ ಹೇಗಿರಬೇಕು, 2024ರಲ್ಲಿ 13 ಕೋಟಿ ಹೊಸ ಮತದಾರರನ್ನ ಹೇಗೆ ಸೆಳೆಯಬೇಕು ಇತ್ಯಾದಿ ಅಂಶಗಳನ್ನ ಪ್ರಶಾಂತ್ ಕಿಶೋರ್ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆನ್ನಲಾಗಿದೆ.

 ಪ್ರಶಾಂತ್ ಕಿಶೋರ್ ಸಲಹೆ:

ಪ್ರಶಾಂತ್ ಕಿಶೋರ್ ಸಲಹೆ:

ಕಾಂಗ್ರೆಸ್ ಪಕ್ಷ ತನ್ನ ನಾಯಕತ್ವ ಗೊಂದಲ ಬಗೆಹರಿಸಿಕೊಳ್ಳಬೇಕು; ಮೈತ್ರಿ ಗೊಂದಲಕ್ಕೂ ತೆರೆ ಎಳೆಯಬೇಕು; ತನ್ನ ಹಿಂದಿನ ತತ್ವಗಳಿಗೆ ಮರಳಬೇಕು; ತಳಮಟ್ಟದಲ್ಲಿ ತನ್ನ ಕಾರ್ಯಕರ್ತರು ಮತ್ತು ನಾಯಕರನ್ನ ಗುರುತಿಸಿ ಹಿಡಿದಿಟ್ಟುಕೊಳ್ಳಬೇಕು; ತನ್ನ ಸಂವಹನ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಾಯಿಸಬೇಕು - ಇವರು ಪ್ರಶಾಂತ್ ಕಿಶೋರ್ ಅವರು ನೀಡಿರುವ ಕೆಲ ಪ್ರಮುಖ ಸಲಹೆಗಳಾಗಿವೆ.

(ಒನ್ಇಂಡಿಯಾ ಸುದ್ದಿ)

English summary
The committee constituted by Congress to look into the revival plan submitted by Prashant Kishor on Wednesday discussed possible roles for the poll strategist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X