Twitter: ಸಂಸ್ಥೆಯಲ್ಲಿ ಎಲಾನ್ ಮಸ್ಕ್ ಪಾತ್ರವೇನು? ಇಲ್ಲಿದೆ ಮಾಹಿತಿ
ವಾಸಿಂಗ್ಟನ್, ನವೆಂಬರ್ 1: ಟ್ವಿಟ್ಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಅವರು ದೊಡ್ಡ ಕ್ರಮವನ್ನು ಕೈಗೊಂಡಿದ್ದಾರೆ. ಅವರು ಟ್ವಿಟ್ಟರ್ ಮಂಡಳಿಯ ನಿರ್ದೇಶಕರನ್ನು ತೆಗೆದು ಹಾಕಿದ್ದಾರೆ. ವಿಲೀನದ ದಾಖಲೆಗಳ ಪ್ರಕಾರ, ಎಲಾನ್ ಮಸ್ಕ್ ಈಗ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಸೋಮವಾರ ಅವರು ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂಬತ್ತು ಮಂದಿಯನ್ನು ವಜಾಗೊಳಿಸಲಾಗುತ್ತಿದ್ದು, ಎಲಾನ್ ಮಸ್ಕ್ ಮಾತ್ರ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಆ ಅರ್ಜಿಯಲ್ಲಿ ಹೇಳಲಾಗಿದೆ. ಅಂದಹಾಗೆ, ಈಗ ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ಕಂಪನಿಯ ಏಕೈಕ ನಿರ್ದೇಶಕರಾಗಿದ್ದಾರೆ.
ಟ್ವಿಟ್ಟರ್‌ನ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಅವರು ದೊಡ್ಡ ಕ್ರಮವನ್ನು ಕೈಗೊಂಡು ಮಂಡಳಿಯ ಎಲ್ಲಾ ನಿರ್ದೇಶಕರನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಅವರು ಕಂಪನಿಯ ಸಂಪೂರ್ಣ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
ಎಲಾನ್ ಮಸ್ಕ್ ಕಂಪನಿಯ ಏಕೈಕ ನಿರ್ದೇಶಕರಾಗಿದ್ದಾರೆ. ಟ್ವಿಟ್ಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್ ಮತ್ತು ಕಂಪನಿಯ ಇತರ ಹಲವು ಕಾರ್ಯನಿರ್ವಾಹಕರನ್ನು ಮಸ್ಕ್ ಅವರು ವಜಾಗೊಳಿಸಿದ್ದರು. ಟ್ವಿಟ್ಟರ್‌ನಲ್ಲಿ ತಮ್ಮ ಏಕಸ್ವಾಮ್ಯವನ್ನು ಬಲಪಡಿಸಲು ಮಸ್ಕ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಟ್ವಿಟ್ಟರ್ ಮಂಡಳಿಯಲ್ಲಿದ್ದ ಒಂಬತ್ತು ಮಂದಿ
ಟ್ವಿಟ್ಟರ್‌ನ ಏಕೈಕ ನಿರ್ದೇಶಕರಾಗಿದ್ದೇನೆ ಎಂದು ಮಸ್ಕ್ ಬಹಿರಂಗಪಡಿಸಿದರು. 'ವಿಲೀನ ಅನುಷ್ಟಾನಕ್ಕೂ ಮೊದಲು ಟ್ವಿಟ್ಟರ್‌ನ ನಿರ್ದೇಶಕರಾಗಿದ್ದ ಈ ಕೆಳಗಿನ ವ್ಯಕ್ತಿಗಳು ಇನ್ನು ಮುಂದೆ ಟ್ವಿಟರ್‌ನ ನಿರ್ದೇಶಕರಾಗಿಲ್ಲವೆಂದು ಹೇಳಲಾಗಿದೆ. ಬ್ರೆಟ್ ಟೇಲರ್, ಪರಾಗ್ ಅಗರ್ವಾಲ್, ಒಮಿಡ್ ಕೊರ್ಡೆಸ್ತಾನಿ, ಡೇವಿಡ್ ರೋಸೆನ್‌ಬ್ಲಾಟ್, ಮಾರ್ಥಾ ಲೇನ್ ಫಾಕ್ಸ್, ಪ್ಯಾಟ್ರಿಕ್ ಪಿಚೆಟ್, ಎಗಾನ್ ಡರ್ಬನ್, ಫೀ- ಫೀ ಲೀ ಮತ್ತು ಮಿಮಿ ಅಲೆಮಾಯೆಹೌ ಅವರನ್ನು ಹೆಸರಿಸಲಾಗಿದೆ. ಮಂಡಳಿಯನ್ನು ವಿಸರ್ಜಿಸುವ ಕ್ರಮವು 'ಕೇವಲ ತಾತ್ಕಾಲಿಕ' ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಎಲಾನ್ ಮಸ್ಕ್ ಸಿಎಒ: ಕಂಪನಿ ಹೇಳಿಕೆ
ಎಲಾನ್ ಮಸ್ಕ್ ಸೋಮವಾರ ಸಂಸ್ಥೆಯ ಪರವಾಗಿ ಹೇಳಿಕೆ ನೀಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಲೀನ ಒಪ್ಪಂದಗಳ ನಿಯಮಗಳಿಗೆ ಅನುಸಾರವಾಗಿ, ಟ್ವಿಟ್ಟರ್‌ನ ಎಲ್ಲಾ ನಿರ್ದೇಶಕರ ಮಂಡಳಿಯನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ. ಈ ಮೂಲಕ ಇತ್ತೀಚೆಗೆ ಕಂಪನಿಯಿಂದ ವಜಾಗೊಂಡಿರುವ ಮಾಜಿ ಸಿಇಒ ಪರಾಗ್ ಅಗರ್ವಾಲ್ ಮತ್ತು ಅಧ್ಯಕ್ಷ ಬ್ರೆಟ್ ಟೇಲರ್ ಕೂಡ ಕಂಪನಿಯ ಮಾಜಿ ನಿರ್ದೇಶಕರಾಗಿ ನಿಲ್ಲುತ್ತಾರೆ. ಈ ಹೇಳಿಕೆಯ ಪ್ರಕಾರ, ಈಗ ಎಲಾನ್ ಮಸ್ಕ್ ಟ್ವಿಟ್ಟರ್‌ನ ಏಕೈಕ ನಿರ್ದೇಶಕರಾಗಲಿದ್ದಾರೆ.

$ 44 ಬಿಲಿಯನ್ ಒಪ್ಪಂದದ ನಂತರ ಟ್ವಿಟ್ಟರ್‌ನ ಮಾಲೀಕ
ಗಮನಾರ್ಹವಾಗಿ ಸುಮಾರು $ 44 ಬಿಲಿಯನ್ ಮೌಲ್ಯದ ಒಪ್ಪಂದದ ನಂತರ ಮಸ್ಕ್ ಟ್ವಿಟ್ಟರ್‌ನ ಮಾಲೀಕರಾಗಿದ್ದಾರೆ. ಇದರ ನಂತರ, ಅವರು ಕಂಪನಿಯ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಪ್ರಮುಖ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಇದಲ್ಲದೇ ನೀತಿ ಮತ್ತು ಕಾನೂನು ಮುಖ್ಯಸ್ಥ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಿದ್ದಾರೆ.
ಕಂಪನಿಯ ಕಂಟೆಂಟ್ ಮಾಡರೇಶನ್ ನೀತಿಗಳನ್ನು ಮರುಪರಿಶೀಲಿಸಲು ಮಸ್ಕ್ ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಹಿಂದೆ ಸಾಮಾಜಿಕ ಮಾಧ್ಯಮದ ನೀತಿಗಳನ್ನು ಉಲ್ಲಂಘಿಸಿದ ಜನರನ್ನು ಶಾಶ್ವತವಾಗಿ ನಿರ್ಬಂಧಿಸುವ ಯೋಜನೆಯೂ ನಡೆಯುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಅಧಿಕಾರಿಗಳ ತೆಗೆದುಹಾಕುವಿಕೆಯ ಬಗ್ಗೆ ಪ್ರತಿಕ್ರಿಯಿಸಲು ಸದ್ಯ ಟ್ವಿಟ್ಟರ್ ನಿರಾಕರಿಸಿದೆ. ಆದರೆ ಮಸ್ಕ್ ಅವರ ಈ ಕ್ರಮ ಟ್ವಿಟರ್ ಉದ್ಯೋಗಿಗಳಲ್ಲಿ ತಲ್ಲಣ ಮೂಡಿಸಿದೆ. ಮಸ್ಕ್ ಪರವಾಗಿ ಟ್ವಿಟ್ಟರ್ ಉದ್ಯೋಗಿಗಳಿಗೆ ಅವರು ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾ ಮಾಡುವುದಿಲ್ಲ ಎಂದು ಭರವಸೆ ನೀಡಿದೆ. ಆದರೆ, ಈ ಹಿಂದೆ ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳಿಂದ ಶೇಕಡಾ 75 ಅಥವಾ 5,600 ಉದ್ಯೋಗಿಗಳನ್ನು ವಜಾಗೊಳಿಸಲಿದ್ದಾರೆ ಎಂದು ವರದಿಗಳು ಬಂದಿದ್ದವು. ಟೆಕ್ಕ್ರಂಚ್ ವರದಿಯ ಪ್ರಕಾರ, ಮಸ್ಕ್ ಬುಧವಾರ ತಡರಾತ್ರಿ ಟ್ವಿಟ್ಟರ್ ಪ್ರಧಾನ ಕಛೇರಿಗೆ ಭೇಟಿ ನೀಡಿದ್ದು, ತಾವು ಉದ್ಯೋಗಿಗಳನ್ನು ವಜಾ ಮಾಡುವುದಿಲ್ಲ ಎಂದು ಉದ್ಯೋಗಿಗಳಿಗೆ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರದವರೆಗೆ ಗಡುವು ನೀಡಿದ್ದ ನ್ಯಾಯಾಲಯ
ಎಲಾನ್ ಮಸ್ಕ್ ಟ್ವಿಟರ್ ಸ್ವಾಧೀನಪಡಿಸಿಕೊಂಡ ಮೇಲೆ ಹಲವಾರು ತಿಂಗಳುಗಳ ಕಾಲ ಇಕ್ಕಟ್ಟಿಗೆ ಸಿಲುಕಿದ್ದರು. ಟ್ವಿಟ್ಟರ್‌ನ ಸ್ವಾಧೀನವನ್ನು ಪೂರ್ಣಗೊಳಿಸಲು ಅಮೆರಿಕದ ನ್ಯಾಯಾಲಯವು ಶುಕ್ರವಾರದೊಳಗೆ ಗಡುವು ನೀಡಿತ್ತು. ಹಾಗೆ ಮಾಡಲು ವಿಫಲವಾದರೆ, ಡೆಲವೇರ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಮಸ್ಕ್‌ಗೆ ಎಚ್ಚರಿಕೆ ನೀಡಲಾಗಿತ್ತು. ಈ ಗಡುವಿನ ಮೊದಲು ಮಸ್ಕ್ ಶುಕ್ರವಾರ ಟ್ವಿಟ್ಟರ್‌ನ ಅಧಿಕಾರ ವಹಿಸಿಕೊಂಡರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications