ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ TVS ಕಂಪನಿಯ ಸಿಎನ್‌ಜಿ ಸ್ಕೂಟರ್
ಪೆಟ್ರೋಲ್‌ಗೆ ಪರ್ಯಾಯ ವಾಹನದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ಬಜಾಜ್ ಕಂಪನಿ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿತ್ತು. ಇದೀಗ ಈ ಸಾಲಿನಲ್ಲಿ ಮತ್ತೊಂದು ಸ್ಕೂಟರ್ ಹೊರ ಬರಲಿದ್ದು, ಗ್ರಾಹಕರ ಚಿತ್ತ ಕದಿಯಲಿದೆ
ಮಾಧ್ಯಮ ವರದಿಗಳ ಪ್ರಕಾರ ಜುಪಿಟರ್ ಸಿಎನ್‌ಜಿ ರೂಪದಲ್ಲಿ ಸಿಎನ್‌ಜಿ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸ್ಕೂಟರ್‌ನ ಪರೀಕ್ಷಾರ್ಥ ಕೆಲಸಗಳು ಭರದಿಂದ ಸಾಗಿವೆ ಎಂದು ತಿಳಿದು ಬಂದಿದೆ. ಟಿವಿಎಸ್ ಜೂಪಿಟರ್ ಸಿಎನ್‌ಜಿ ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಲಿದೆ.

ವಿಶ್ವದ ಮೊದಲ CNG ಸ್ಕೂಟರ್
ಇದು ವಿಶ್ವದ ಮೊದಲ ಸಿಎನ್‌ಜಿ ಬೈಕ್ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ. ಈ ಬೈಕ್ 125 ಸಿಸಿ ಹೊಂದಿದ್ದು, ಎರಡು ಟ್ಯಾಂಕ್‌ಗಳು ಇದರಲ್ಲಿ ಬರುವ ಸಾಧ್ಯತೆ ಇದೆ. ಈ ಟ್ಯಾಂಕ್‌ಗಳನ್ನು ಕಂಪನಿ ಎಲ್ಲಿ ಅಳವಡಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಜಾಜ್‌ನ ಫ್ರೀಡಂ ಬೈಕ್‌ನಂತೆ ಟಿವಿಎಸ್ ಜೂಪಿಟರ್ ಸಿಎನ್‌ಜಿ ಹಾಗೂ ಪೆಟ್ರೋಲ್ ಆಯ್ಕೆಯನ್ನು ಹೊಂದಿರುತ್ತದೆ. ಫ್ರೀಡಂ 125 ಸಿಎನ್‌ಜಿ ಬೈಕ್‌ನಂತೆ ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸುವ ಸೌಲಭ್ಯವೂ ಇರುತ್ತದೆ.
ಟಿವಿಎಸ್ ಜುಪಿಟರ್ ಸಿಎನ್‌ಜಿ ಸ್ಕೂಟರ್ ಅನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಯಾವುದೇ ಖಚಿತವಾದ ಮಾಹಿತಿಯಿಲ್ಲ. ಆದರೆ ಈ ಹೊಸ ಸ್ಕೂಟರ್ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಕಂಪನಿಯು ಇದನ್ನು ಬಿಡುಗಡೆ ಮಾಡಲು ವಿಳಂಬ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಪ್ರತಿ ತಿಂಗಳು 1000 ಸಿಎನ್‌ಜಿ ಸ್ಕೂಟರ್‌ಗಳನ್ನು ಮಾರಾಟ ಮಾಡುವುದು ಕಂಪನಿಯ ಗುರಿಯಾಗಿದೆ.

ವಿಶ್ವದ ಮೊದಲ CNG ಬೈಕ್
ಬಜಾಜ್ ಆಟೋ ವಿಶ್ವದ ಮೊದಲ CNG ಬೈಕ್ ಫ್ರೀಡಂ 125 ಅನ್ನು ಪರಿಚಯಿಸುವ ಮೂಲಕ ಹೊಸ ವಿಭಾಗವನ್ನು ರಚಿಸಿತ್ತು. ಅಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಸಾಬೀತುಪಡಿಸಲು ಅವಕಾಶವಿದೆ ಎಂದು ತೋರಿಸಿಕೊಟ್ಟಿತು. ಬಜಾಜ್ ಫ್ರೀಡಂ 125 ಸಿಎನ್‌ಜಿ ಬೆಲೆ 95,000 ರೂ. ಇದು 2 ಲೀಟರ್ ಇಂಧನ ಟ್ಯಾಂಕ್ ಮತ್ತು 2 ಕೆಜಿ CNG ಸಿಲಿಂಡರ್ ಅನ್ನು ಹೊಂದಿದೆ.
ಹೊಸ ಫ್ರೀಡಂ ಸಿಎನ್‌ಜಿ ಬೈಕು 125 ಸಿಸಿ ಎಂಜಿನ್ ಹೊಂದಿದ್ದು ಅದು 9.5 ಪಿಎಸ್ ಪವರ್ ಮತ್ತು 9.7 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಪೆಟ್ರೋಲ್ ಮತ್ತು CNG ಎರಡರಲ್ಲೂ ಚಲಿಸಬಲ್ಲದು. ಇದು 5 ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯವನ್ನು ಹೊಂದಿದೆ.
ಈ ಬೈಕ್ 2 ಲೀಟರ್ ಇಂಧನದಲ್ಲಿ 130 ಕಿಲೋಮೀಟರ್ ವರೆಗೆ ಓಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಇದು 2 ಕೆಜಿ ಸಿಎನ್‌ಜಿಯಲ್ಲಿ 200 ಕಿಲೋಮೀಟರ್ ಓಡಲಿದೆ. ಇಂಧನ + ಸಿಎನ್‌ಜಿಯಲ್ಲಿನ ಒಟ್ಟು ವ್ಯಾಪ್ತಿಯು 330 ಕಿಲೋಮೀಟರ್‌ಗಳಷ್ಟಿದೆ.











Click it and Unblock the Notifications