• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರೂ ಕಾಲರ್ ಸ್ಪ್ಯಾಮ್ ಕರೆಗಳಲ್ಲಿ ಭಾರತಕ್ಕೆ 9ನೇ ಸ್ಥಾನ

|
Google Oneindia Kannada News

2020ರಲ್ಲಿ ಅತಿ ಹೆಚ್ಚು ಸ್ಪ್ಯಾಮ್ ಕರೆಗಳ ತೊಂದರೆಗೆ ಒಳಗಾದ ಟಾಪ್ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಒಂದು. ಇದರಲ್ಲಿ ಅರ್ಧಕ್ಕಿಂತಲೂ ಅಧಿಕ ಸ್ಪ್ಯಾಮ್ ಕರೆಗಳಿಗೆ ನೆಟ್‌ವರ್ಕ್ ಆಪರೇಟರ್‌ಗಳೇ ಕಾರಣ ಎಂದು ಟ್ರೂ ಕಾಲರ್ ತಿಳಿಸಿದೆ. ಆದರೆ ಒಟ್ಟಾರೆ ಸ್ಪ್ಯಾಮ್ ಕರೆಗಳ ಪ್ರಮಾಣ ಭಾರತದಲ್ಲಿ ಕಡಿಮೆಯಾಗಿದೆ.

ಭಾರತದಲ್ಲಿ 150 ಮಿಲಿಯನ್‌ಗೂ ಹೆಚ್ಚು ಮಾಸಿಕ ಟ್ರೂಕಾಲರ್ ಬಳಕೆದಾರರಿದ್ದು, ಕರೆದಾರರನ್ನು ಗುರುತಿಸುವ ಆಪ್ ನಡೆಸಿರುವ ಸಮೀಕ್ಷೆಯು ಸ್ಪ್ಯಾಮ್ ಕರೆಗಳ ಕುರಿತಾದ ಮಾಹಿತಿ ನೀಡಿದೆ.

2020ರಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಆದ ಟಾಪ್ 10 ವ್ಯಕ್ತಿಗಳು2020ರಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಆದ ಟಾಪ್ 10 ವ್ಯಕ್ತಿಗಳು

ಟ್ರೂ ಕಾಲರ್ ಇನ್‌ಸೈಟ್ಸ್: 2020ರಲ್ಲಿ ಸ್ಪ್ಯಾಮ್ ಕರೆಗಳ ತೊಂದರೆ ಅನುಭವಿಸಿದ ಟಾಪ್ 20 ದೇಶಗಳು ಎಂಬ ಶೀರ್ಷಿಕೆಯ ವರದಿಯಲ್ಲಿ ಆಪ್, 2020ರಲ್ಲಿ ದೇಶದಲ್ಲಿನ ಒಟ್ಟಾರೆ ಸ್ಪ್ಯಾಮ್ ಕರೆಗಳಲ್ಲಿ ಶೇ 52 ಕರೆಗಳಿಗೆ ದೂರಸಂಪರ್ಕ ಕಂಪೆನಿಗಳೇ ಹೊಣೆಗಾರರು. ಇನ್ನು ಶೇ 34ರಷ್ಟು ಸ್ಪ್ಯಾಮ್ ಕರೆಗಳು ಟೆಲಿಮಾರ್ಕೆಟರ್‌ಗಳಿಂದ ಬರುತ್ತಿವೆ ಎಂದು ತಿಳಿಸಿದೆ.

unforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆunforgettable 2020: ನಮ್ಮನ್ನು ಅಗಲಿದ ಸೆಲೆಬ್ರಿಟಿಗಳ ಸ್ಮರಣೆ

ಭಾರತದಲ್ಲಿ ಸ್ಪ್ಯಾಮ್ ಕರೆಗಳ ಪ್ರಮಾಣ ಶೇ 34ರಷ್ಟು ಕಡಿಮೆಯಾಗಿದೆ. ಆದರೂ ಅತಿ ಹೆಚ್ಚು ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಅನುಭವಿಸಿದ ಟಾಪ್ 10 ದೇಶಗಳಲ್ಲಿ ಭಾರತ ಒಂಬತ್ತನೇ ಸ್ಥಾನದಲ್ಲಿದೆ. ಬ್ರೆಜಿಲ್ ಮತ್ತು ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿವೆ. ಮೂರು ವರ್ಷದ ಹಿಂದೆ ಭಾರತವು ಅತಿ ಹೆಚ್ಚು ಸ್ಪ್ಯಾಮ್ ಕರೆಗಳ ತೊಂದರೆ ಅನುಭವಿಸಿದ ದೇಶವಾಗಿತ್ತು. ಮುಂದೆ ಓದಿ.

ಸ್ಕ್ಯಾಮ್ (ವಂಚನೆ ಕರೆ) ಹೆಚ್ಚಳ

ಸ್ಕ್ಯಾಮ್ (ವಂಚನೆ ಕರೆ) ಹೆಚ್ಚಳ

ಒಟ್ಟಾರೆ ಸ್ಪ್ಯಾಮ್ ಕರೆಗಳ ಸಂಖ್ಯೆ ಇಳಿಕೆಯಾಗಿದ್ದರೂ, ಸ್ಕ್ಯಾಮ್ ಕರೆಗಳ (ವಂಚನೆ ಕರೆಗಳು) ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಟ್ಟಾರೆ ಸ್ಪ್ಯಾಮ್ ಕರೆಗಳಲ್ಲಿ ಸ್ಕ್ಯಾಮ್ ಕರೆಗಳು ಕಳೆದ ವರ್ಷ ಶೇ 6ರಷ್ಟಿದ್ದರೆ, ಈ ಬಾರಿ ಸ್ಕ್ಯಾಮ್ ಕರೆಗಳ ಪ್ರಮಾಣ ಶೇ 9ಕ್ಕೆ ಹೆಚ್ಚಾಗಿದೆ. ಅದರಲ್ಲಿಯೂ ನೌ ಯುವರ್ ಕಸ್ಟಮರ್ (ಕೆವೈಸಿ) ಮತ್ತು ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಸ್ಕ್ಯಾಮ್‌ಗಳು ಹೆಚ್ಚು ಸಾಮಾನ್ಯವಾಗಿವೆ.

ಗುಜರಾತ್ ಟಾಪ್ ರಾಜ್ಯ

ಗುಜರಾತ್ ಟಾಪ್ ರಾಜ್ಯ

2020ರಲ್ಲಿ ಗುಜರಾತ್‌ನ ಜನರು ಅತಿ ಹೆಚ್ಚು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ಮತ್ತೊಂದು ಆಸಕ್ತಿಕರ ಸಂಗತಿಯೆಂದರೆ ಭಾರತದಲ್ಲಿ ಲಾಕ್‌ಡೌನ್ ಜಾರಿಯಾದ ಮೊದಲ ಮೂರು ತಿಂಗಳಲ್ಲಿ ತುರ್ತು ಸೇವೆಗಳಿಗೆ ಮಾಡಲಾದ ಕರೆಗಳ ಸಂಖ್ಯೆ ಶೇ 148ರಷ್ಟು ಹೆಚ್ಚಾಗಿದೆ.

31.3 ಬಿಲಿಯನ್ ಸ್ಪ್ಯಾಮ್ ಕರೆ

31.3 ಬಿಲಿಯನ್ ಸ್ಪ್ಯಾಮ್ ಕರೆ

ಜಾಗತಿಕವಾಗಿ ಟ್ರೂ ಕಾಲರ್ 31.3 ಬಿಲಿಯನ್ ಸ್ಪ್ಯಾಮ್ ಕರೆಗಳನ್ನು ಗುರುತಿಸಿದೆ. ಕಳೆದ ವರ್ಷಕ್ಕೆಹೋಲಿಸಿದರೆ ಇದು ಶೇ 18ರಷ್ಟು ಅಧಿಕ. ಅಪರಿಚಿತ ಕರೆಗಳ ಸಂಖ್ಯೆ 145.4 ಬಿಲಿಯನ್ ಇದ್ದು, 2019ಕ್ಕೆ ಹೋಲಿಸಿದರೆ ಶೇ 25ರಷ್ಟು ಏರಿಕೆಯಾಗಿದೆ.

  ಕರ್ನಾಟಕ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಡಿ.31ಕ್ಕೆ ನಿವೃತ್ತಿ: ರವಿಕುಮಾರ್ ನೇಮಕ ಸಾಧ್ಯತೆ | Oneindia Kannada
  ಒಟಿಪಿ ಮೂಲಕ ಹಣ ಕದಿಯುತ್ತಾರೆ

  ಒಟಿಪಿ ಮೂಲಕ ಹಣ ಕದಿಯುತ್ತಾರೆ

  ಸ್ಕ್ಯಾಮರ್‌ಗಳು ಯಾವುದೇ ಅನುಮಾನಿಸದ ಜನರನ್ನು ಫೋನ್ ಕರೆ ಅಥವಾ ಎಸ್‌ಎಂಎಸ್‌ಗಳ ಮೂಲಕ ಸೆಳೆಯುವ ತಂತ್ರವನ್ನು ಸಾಮಾನ್ಯವಾಗಿ ಬಳಸುತ್ತಾರೆ. ನಿಮ್ಮ ಹಣಕಾಸಿನ ಕುರಿತು ಅವರು ಸೂಕ್ಷ್ಮ ಮಾಹಿತಿಗಳನ್ನು ಹೇಳುವ ಮೂಲಕ ರಹಸ್ಯ ಒಟಿಪಿ ಬಹಿರಂಗಪಡಿಸುವಂತೆ ಒತ್ತಡ ಹೇರುತ್ತಾರೆ. ನಿಮ್ಮ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ಗಳಿಂದ ಹಣ ಕದಿಯುವುದು ಅವರ ಗುರಿಯಾಗಿರುತ್ತದೆ ಎಂದು ಟ್ರೂ ಕಾಲರ್ ಸಂಸ್ಥೆ ಎಚ್ಚರಿಕೆ ನೀಡಿದೆ.

  ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

  English summary
  Truecaller report says India is in 9th place among the top 10 countries affected by spam calls in 2020.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X